ಗುರ್ಗಾಂವ್ ಲೀಲಾ ಹೋಟೆಲ್ ಗೆ ಬಾಂಬ್ ಬೆದರಿಕೆ, ಗ್ರಾಹಕರ ಸ್ಥಳಾಂತರ

ಬಾಂಬ್ ಬೆದರಿಕೆ ಕರೆ ನಂತರ ಮಂಗಳವಾರ ಗುರ್ಗಾಂವ್ ನ ಲೀಲಾ ಹೋಟೆಲ್‌ನ್ನು ಖಾಲಿ ಮಾಡಲಾಗಿದೆ. ಬಾಂಬ್ ಪತ್ತೆಗೆ ಹೋಟೆಲ್ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೀಲಾ ಹೋಟೆಲ್
ಲೀಲಾ ಹೋಟೆಲ್

ಗುರುಗ್ರಾಮ: ಬಾಂಬ್ ಬೆದರಿಕೆ ಕರೆ ನಂತರ ಮಂಗಳವಾರ ಗುರ್ಗಾಂವ್ ನ ಲೀಲಾ ಹೋಟೆಲ್‌ನ್ನು ಖಾಲಿ ಮಾಡಲಾಗಿದೆ. ಬಾಂಬ್ ಪತ್ತೆಗೆ ಹೋಟೆಲ್ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಬಿಯನ್ಸ್ ಮಾಲ್ ಕಾಂಪ್ಲೆಕ್ಸ್ ನಲ್ಲಿರುವ ಗುರ್ಗಾಂವ್‌ನ ಲೀಲಾ ಹೋಟೆಲ್‌ಗೆ ಇಂದು ಬೆಳಗ್ಗೆ 11:35 ರ ಸುಮಾರಿಗೆ ಬೆದರಿಕೆ ಕರೆ ಬಂದಿತ್ತು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಹೋಟೆಲ್‌ಗೆ ತೆರಳಿ ತೀವ್ರ ಶೋಧ ನಡೆಸುತ್ತಿವೆ.

ಸದ್ಯ ಸ್ವಿಚ್ ಆಫ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಹೋಟೆಲ್‌ಗೆ ಬೆದರಿಕೆ ಕರೆ ಮಾಡಲಾಗಿದೆ. ಹುಡುಕಾಟ ನಡೆಯುತ್ತಿದೆ ಮತ್ತು ಕರೆ ಮಾಡಿದವರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com