ರಸ್ತೆಯಲ್ಲಿ ಜಗಳವಾಡುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದ ಕಾರು: ಮುಂದೇನಾಯ್ತು! ಭಯಾನಕ ವಿಡಿಯೋ

ರಸ್ತೆಯಲ್ಲಿ ಜಗಳವಾಡುತ್ತಿದ್ದ ಯುವಕರಿಗೆ ಹಿಂದಿನಿಂದ ಸ್ಪೀಡಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮೇಲೆ ಬಿದ್ದ ಇಬ್ಬರು ಯುವಕರು ಸ್ವಲ್ವ ದೂರ ಸಾಗಿ, ಕೆಳಗೆ ಬಿದ್ದಿದ್ದಾರೆ. ಅದಾಗ್ಯೂ, ತಮ್ಮ ಹೊಡೆದಾಟವನ್ನು ಮುಂದುವರೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 
ಕಾರಿನ ಮೇಲೆ ಬಿದ್ದಿರುವ ವಿದ್ಯಾರ್ಥಿಯೊಬ್ಬನ ಚಿತ್ರ
ಕಾರಿನ ಮೇಲೆ ಬಿದ್ದಿರುವ ವಿದ್ಯಾರ್ಥಿಯೊಬ್ಬನ ಚಿತ್ರ
Updated on: 

ಗಾಜಿಯಾಬಾದ್: ರಸ್ತೆಯಲ್ಲಿ ಜಗಳವಾಡುತ್ತಿದ್ದ ಯುವಕರಿಗೆ ಹಿಂದಿನಿಂದ ಸ್ಪೀಡಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮೇಲೆ ಬಿದ್ದ ಇಬ್ಬರು ಯುವಕರು ಸ್ವಲ್ವ ದೂರ ಸಾಗಿ, ಕೆಳಗೆ ಬಿದ್ದಿದ್ದಾರೆ. ಅದಾಗ್ಯೂ, ತಮ್ಮ ಹೊಡೆದಾಟವನ್ನು ಮುಂದುವರೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ತಮ್ಮಲ್ಲಿನ ಪ್ರಬಲತೆ ತೋರಿಸಲು ಮಸ್ಸೂರಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ನಿನ್ನೆ ರಸ್ತೆಯಲ್ಲಿ ಕಾದಾಟ ನಡೆಸುತಿತ್ತು. ಇದೇ ಸಂದರ್ಭದಲ್ಲಿ ಕಾರೊಂದು ಹಿಂದಿನಿಂದ ಸ್ಪೀಡಾಗಿ ಬಂದಿದ್ದು, ಗುಂಪು ಅಲ್ಲಿಂದ ಚದುರಿಸಿದೆ. ಆದರೆ, ಇಬ್ಬರು ವಿದ್ಯಾರ್ಥಿಗಳು ಕಾರಿನ ಮೇಲೆ ಬಿದಿದ್ದು, ಸ್ವಲ್ಪ ದೂರ ಸಾಗಿ ಕೆಳಗೆ ಬಿದ್ದಿದ್ದಾರೆ. ಆದಾಗ್ಯೂ, ಮತ್ತೆ ಎದ್ದು ಹೊಡೆದಾಟವನ್ನು ಮುಂದುವರೆಸಿದ್ದಾರೆ. ವಿದ್ಯಾರ್ಥಿಯೊಬ್ಬ ಮತ್ತೋರ್ವ ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. 

ಪ್ರಾಥಮಿಕ ತನಿಖೆ ನಂತರ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಡಿಯೋದಲ್ಲಿ ವೈರಲ್ ಆದ ಕಾರನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com