ತೆರಿಗೆ ವಂಚನೆ ಆರೋಪ: ತಮಿಳು ಚಲನಚಿತ್ರ ನಿರ್ಮಾಪಕರು, ವಿತರಕರ ಮನೆ ಮೇಲೆ ಐಟಿ ದಾಳಿ
ತೆರಿಗೆ ವಂಚನೆ ಆರೋಪದ ಮೇಳೆ ಶಂಕಿತ 10 ತಮಿಳು ಚಲನಚಿತ್ರ ನಿರ್ಮಾಪಕರು ಮತ್ತು ವಿತರಕರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Published: 02nd August 2022 12:14 PM | Last Updated: 02nd August 2022 12:14 PM | A+A A-

ಪ್ರಾತಿನಿಧಿಕ ಚಿತ್ರ
ಚೆನ್ನೈ: ತೆರಿಗೆ ವಂಚನೆ ಆರೋಪದ ಮೇಲೆ ಕೆಲವು ತಮಿಳು ಚಲನಚಿತ್ರ ನಿರ್ಮಾಪಕರು ಮತ್ತು ವಿತರಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಇಂದು ದಾಳಿ ನಡೆಸಿದೆ. ತಮಿಳುನಾಡಿನಾದ್ಯಂತ ನಲವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲೈಪುಲಿ ಥಾನು, ಎಸ್.ಆರ್. ಪ್ರಭು, ಅನ್ಬು ಚೆಜಿಯನ್ ಮತ್ತು ಜ್ಞಾನವೇಲ್ ರಾಜಾ ಸೇರಿದಂತೆ ಸುಮಾರು 10 ಚಲನಚಿತ್ರ ನಿರ್ಮಾಪಕರು ಮತ್ತು ವಿತರಕರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ.