ಮಥುರಾದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, 3 ಆರೋಪಿಗಳ ಬಂಧನ: ಪೊಲೀಸರು
ಮಥುರಾದಲ್ಲಿ ಮಹಿಳೆಯೊಬ್ಬರ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದು, ಕೃತ್ಯವನ್ನು ವಿಡಿಯೊ ಮಾಡಿದ ಆರೋಪಿಗಳು ಅದನ್ನ ಆಕೆಯ ಅತ್ತೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 07th August 2022 10:57 AM | Last Updated: 07th August 2022 11:02 AM | A+A A-

ಅತ್ಯಾಚಾರ (ಸಂಗ್ರಹ ಚಿತ್ರ)
ಮಥುರಾ: ಮಥುರಾದಲ್ಲಿ ಮಹಿಳೆಯೊಬ್ಬರ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದು, ಕೃತ್ಯವನ್ನು ವಿಡಿಯೊ ಮಾಡಿದ ಆರೋಪಿಗಳು ಅದನ್ನ ಆಕೆಯ ಅತ್ತೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೇ 28ರಂದು ಮಹಿಳೆಯು ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ಸಲ್ಲಿಸಲು ಸಾರ್ವಜನಿಕ ಸೇವಾ ಕೇಂದ್ರಕ್ಕೆ ತೆರಳಿದ್ದಾಗ, ಕೇಂದ್ರದ ನಿರ್ವಾಹಕ, ಕಂಪ್ಯೂಟರ್ ಆಪರೇಟರ್, ಅಂಗಡಿ ಮಾಲೀಕ ಮತ್ತು ಇನ್ನೊಬ್ಬ ವ್ಯಕ್ತಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.
ಆರೋಪಿಗಳಲ್ಲಿ ಒಬ್ಬಾತ ಮಹಿಳೆಯ ಅತ್ತೆಗೆ ವಿಡಿಯೊ ಕಳುಹಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಎಸ್‌ಪಿ (ಗ್ರಾಮೀಣ) ಶ್ರೀಶ್ ಚಂದ್ರ ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರಮುಖ ಆರೋಪಿಯು ಸಂತ್ರಸ್ಥೆಯ ಪೋಷಕರು ವಾಸಿಸುತ್ತಿದ್ದ ಆಲಿಗಢ ಜಿಲ್ಲೆಯ ಅದೇ ಹಳ್ಳಿಗೆ ಸೇರಿದವನು. ಆತ ಮತ್ತು ಮಹಿಳೆ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.