ದೇಶ
ಕೊಯಂಬತ್ತೂರು: ಗೋ ಫಸ್ಟ್ ತುರ್ತು ಭೂ ಸ್ಪರ್ಶ; ತಪ್ಪು ಅಲಾರ್ಮ್ ಎಂದ ವಿಮಾನ ನಿಲ್ದಾಣ ಅಧಿಕಾರಿಗಳು
ಬೆಂಗಳೂರಿನಿಂದ ಮಾಲ್ಡೀವ್ಸ್ ನ ಮಾಲೆಗೆ ತೆರಳುತ್ತಿದ್ದ 92 ಪ್ರಯಾಣಿಕರಿದ್ದ ಗೋ ಫಸ್ಟ್ ವಿಮಾನವೊಂದು ಕೊಯಮತ್ತೂರಿನಲ್ಲಿ ತುರ್ತು ಭೂಸ್ಪರ್ಶವಾಗಿದೆ.
ಕೊಯಮತ್ತೂರು: ಬೆಂಗಳೂರಿನಿಂದ ಮಾಲ್ಡೀವ್ಸ್ ನ ಮಾಲೆಗೆ ತೆರಳುತ್ತಿದ್ದ 92 ಪ್ರಯಾಣಿಕರಿದ್ದ ಗೋ ಫಸ್ಟ್ ವಿಮಾನವೊಂದು ಕೊಯಮತ್ತೂರಿನಲ್ಲಿ ತುರ್ತು ಭೂಸ್ಪರ್ಶವಾಗಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ವಿಮಾನ ಹಾರುತ್ತಿರುವಾಗ ಹೊಗೆಯ ಎಚ್ಚರಿಕೆಯನ್ನು ಪೈಲಟ್ ಗಮನಿಸಿದ ನಂತರ ವಿಮಾನ ತುರ್ತು ಭೂ ಸ್ಪರ್ಶ ಮಾಡಿತು. ಆದರೆ, ಇದು ತಪ್ಪಾದ ಎಚ್ಚರಿಕೆಯಿಂದ ಆಗಿರುವುದಾಗಿ ಕೊಯಮತ್ತೂರಿನ ವಿಮಾನ ನಿಲ್ಜಾಣ ಅಧಿಕಾರಿಗಳು ಹೇಳಿದ್ದಾರೆ.
ಎರಡು ಎಂಜಿನ್ ಗಳು ಹೆಚ್ಚಾಗಿ ಬಿಸಿಯಾದ ನಂತರ ಎಚ್ಚರಿಕೆ ನೀಡಲಾಯಿತು ಎಂದು ಪಿಟಿಐ ವರದಿ ಮಾಡಿದೆ. ಎಂಜಿನ್ ಗಳನ್ನು ಪರಿಶೀಲಿಸಿದ ಎಂಜಿನಿಯರ್ ಗಳು , ಎಚ್ಚರಿಕೆ ನೀಡುವಲ್ಲಿ ತಪ್ಪಾಗಿದೆ. ವಿಮಾನ ಹಾರಾಟ ನಡೆಸಲು ಸಮರ್ಥವಾಗಿದೆ ಎಂದು ಪ್ರಕಟಿಸಿದ್ದಾಗಿ ಹೇಳಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಗೋ ಫಸ್ಟ್ ಎಂಜಿನಿಯರಿಂಗ್ ತಂಡ ಪರಿಶೀಲನೆ ನಡೆಸುತ್ತದೆ ಎಂದು ವಿಮಾನಯಾನದ ವಕ್ತಾರರೊಬ್ಬರು ತಿಳಿಸಿದ್ದಾರೆ. ಎಲ್ಲಾ ಕ್ರಮಗಳು ಮುಗಿದ ನಂತರ ಸಂಜೆ 5 ಗಂಟೆಗೆ ವಿಮಾನ ಮಾಲೆಗೆ ನಿರ್ಗಮಿಸಿದೆ.