ಶ್ರೀಲಂಕಾಗೆ ಡಾರ್ನಿಯರ್ 228 ಸೇನಾ ವಿಮಾನ ನೀಡಲು ಮುಂದಾದ ಭಾರತ

ಭಾರತ ಮುಂದಿನ ಕೆಲವೇ ದಿನಗಳಲ್ಲಿ ಮೇಡ್-ಇನ್-ಇಂಡಿಯಾ ಸೇನಾ ವಿಮಾನ ಡೋರ್ನಿಯರ್ 228  ಅನ್ನು ಶ್ರೀಲಂಕಾಗೆ ಹಸ್ತಾಂತರಿಸುವ ಸಾಧ್ಯತೆಯಿದೆ.
ಡಾರ್ನಿಯರ್ 228
ಡಾರ್ನಿಯರ್ 228

ನವದೆಹಲಿ: ಭಾರತ ಮುಂದಿನ ಕೆಲವೇ ದಿನಗಳಲ್ಲಿ ಮೇಡ್-ಇನ್-ಇಂಡಿಯಾ ಸೇನಾ ವಿಮಾನ ಡಾರ್ನಿಯರ್ 228  ಅನ್ನು ಶ್ರೀಲಂಕಾಗೆ ಹಸ್ತಾಂತರಿಸುವ ಸಾಧ್ಯತೆಯಿದೆ.

ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಆಗಸ್ಟ್ 15ಕ್ಕೂ ಮುಂಚೆಯೇ ಭಾರತದ ಮೊದಲ ಸ್ವದೇಶಿ ನಿರ್ಮಿತ ಸೇನಾ ವಿಮಾನವನ್ನು ಶ್ರೀಲಂಕಾಗೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಈ ವಿಮಾನಗಳನ್ನು ಪ್ರಸ್ತುತ ನೌಕಾಪಡೆಯ ವಿಚಕ್ಷಣ ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತಿದೆ ಮತ್ತು ಲೈನ್ ಆಫ್ ಕ್ರೆಡಿಟ್(ಎಲ್ಒಸಿ) ಭಾಗವಾಗಿ ಭಾರತ, ಶ್ರೀಲಂಕಾಗೆ ಈ ವಿಮಾನ ನೀಡುತ್ತಿದೆ.

ಡಾರ್ನಿಯರ್ ವಿಮಾನಕ್ಕಾಗಿ ಮಾತುಕತೆಗಳು ಸ್ವಲ್ಪ ಸಮಯದಿಂದ ನಡೆಯುತ್ತಿವೆ. ಎಲೆಕ್ಟ್ರಾನಿಕ್ ಯುದ್ಧ ಕಾರ್ಯಾಚರಣೆಗಳು, ಕಡಲ ಕಣ್ಗಾವಲು ಮತ್ತು ವಿಪತ್ತು ಪರಿಹಾರಕ್ಕಾಗಿ ಡಾರ್ನಿಯರ್ 228 ಅನ್ನು ನೌಕಾಪಡೆಯು ವ್ಯಾಪಕವಾಗಿ ಬಳಸುತ್ತಿದೆ. ದೇಶೀಯವಾಗಿ ತಯಾರಿಸಿದ ಇದನ್ನು ಕಡಲ ಕಣ್ಗಾವಲಿಗೆ ಬಳಸಬಹುದು’’ ಎಂದು ಮೂಲಗಳು ತಿಳಿಸಿವೆ.

ಎಚ್ಎಎಲ್ ನಿರ್ಮಿಸಿದ ಅವಳಿ ಎಂಜಿನ್ ಹೊಂದಿರುವ ಈ ಡಾರ್ನಿಯರ್ ವಿಮಾನವನ್ನು ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ಭಾರತೀಯ ವಾಯುಪಡೆಗಳು ಬಳಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com