ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ಸರ್ಕಾರ ಮಾಡಿದ ವೆಚ್ಚ ಬಹಿರಂಗ: 36 ಗಂಟೆಗಳ ಭೇಟಿಗೆ 38 ಲಕ್ಷ ರೂ. ಖರ್ಚು!

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020ರಲ್ಲಿ ಭಾರತಕ್ಕೆ ಆಗಮಿಸಿದಾಗ ಅವರಿಗೆ ವಾಸ್ತವ್ಯ, ಊಟ, ಪ್ರಯಾಣ ಸೇರಿದಂತೆ ಮತ್ತಿತರ ಸೌಕರ್ಯಕ್ಕಾಗಿ ಕೇಂದ್ರ ಸರ್ಕಾರ ಅಂದಾಜು ರೂ. 38 ಲಕ್ಷ ವೆಚ್ಚ ಮಾಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ.
ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ
ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ

ನವದೆಹಲಿ: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020ರಲ್ಲಿ ಭಾರತಕ್ಕೆ ಆಗಮಿಸಿದಾಗ ಅವರಿಗೆ ವಾಸ್ತವ್ಯ, ಊಟ, ಪ್ರಯಾಣ ಸೇರಿದಂತೆ ಮತ್ತಿತರ ಸೌಕರ್ಯಕ್ಕಾಗಿ ಕೇಂದ್ರ ಸರ್ಕಾರ ಅಂದಾಜು ರೂ. 38 ಲಕ್ಷ ವೆಚ್ಚ ಮಾಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ. 36 ಗಂಟೆಗಳ ಡೊನಾಲ್ಡ್ ಟ್ರಂಪ್ ಪ್ರವಾಸಕ್ಕೆ ಇಷ್ಟೊಂದು ಹಣವನ್ನು ವೆಚ್ಚ ಮಾಡಲಾಗಿದೆ. 

ಚೊಚ್ಚಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದ ಡೊನಾಲ್ಡ್ ಟ್ರಂಪ್,  ಪತ್ನಿ ಮೆಲನಿಯಾ, ಪುತ್ರಿ ಇವಾಂಕಾ, ಅಳಿಯ ಜರೆಡ್ ಕುಶ್ನೆರ್ ಮತ್ತು ಅನೇಕ ಸರ್ಕಾರದ ಉನ್ನತ ಅಧಿಕಾರಿಗಳು ಅಹಮದಾಬಾದ್, ಆಗ್ರಾ ಮತ್ತು ನವದೆಹಲಿಗೆ 2020ರ  ಫೆಬ್ರವರಿ 24-25 ರಂದು ಭೇಟಿ ನೀಡಿದ್ದರು.  ಫೆಬ್ರವರಿ 24 ರಂದು ಅಹಮದಾಬಾದ್ ನಲ್ಲಿ ಮೂರು ಗಂಟೆಯನ್ನು ಟ್ರಂಪ್ ಕಳೆದಿದ್ದರು.

22 ಕಿ.ಮೀ ರೋಡ್ ಶೋ ನಲ್ಲಿ ಪಾಲ್ಗೊಂಡಿದ್ದ ಟ್ರಂಪ್, ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿಗೆ ಅವರ ಗೌರವ ನಮನ ಸಲ್ಲಿಸಿದ್ದರು. ನೂತನವಾಗಿ ನಿರ್ಮಿಸಲಾಗಿದ್ದ ಮೊಟೇರಾ ಕ್ರೀಡಾಂಗಣದಲ್ಲಿ 'ನಮಸ್ತೇ ಟ್ರಂಪ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಪಾಲ್ಗೊಂಡು, ಜನರನ್ನುದ್ದೇಶಿಸಿ ಭಾಷಣ ಮಾಡಿದ್ದರು.  

ಅದೇ ದಿನ ಆಗ್ರಾಕ್ಕೆ ತೆರಳಿ ತಾಜ್ ಮಹಲ್ ಗೆ ಭೇಟಿ ನೀಡಿದ್ದರು. ಫೆಬ್ರವರಿ 25 ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಲ್ಲಿ ಸರ್ಕಾರ ಮಾಡಿರುವ ವೆಚ್ಚದ ಮಾಹಿತಿ ನೀಡುವಂತೆ ಭಾತೆನಾ 2020ರ ಅಕ್ಟೋಬರ್ ನಲ್ಲಿ ಆರ್ ಟಿಐ ಸಲ್ಲಿಸಿದ್ದರು.

ಮೊದಲ ಅರ್ಜಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ತದನಂತರ ಮಾಹಿತಿ ಆಯೋಗದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ಸರ್ಕಾರ, ಟ್ರಂಪ್ ಭಾರತ ಭೇಟಿ ವೇಳೆಯಲ್ಲಿ ಅಂದಾಜು 38,00000 ರೂ. ವೆಚ್ಚ ಮಾಡಿರುವುದಾಗಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com