ಮುಂಬೈ ದಾಳಿ ಮಾದರಿ ಉಗ್ರದಾಳಿಗೆ ಸಂಚು?; ಮಹಾರಾಷ್ಟ್ರದ ಬೀಚ್ ಬಳಿ ಸ್ಫೋಟಕ, ಬಂದೂಕುಗಳಿದ್ದ ಶಂಕಿತ ದೋಣಿ ಪತ್ತೆ

ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಮುಂಬೈ ದಾಳಿ ಮಾದರಿಗೆ ಉಗ್ರರು ಸಂಚು ರೂಪಿಸಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಇದಕ್ಕೆ ಕಾರಣ ಮಹಾರಾಷ್ಟ್ರದ ಬೀಚ್ ಬಳಿ ಸ್ಫೋಟಕ, ಬಂದೂಕುಗಳಿದ್ದ ಶಂಕಿತ ಬೋಟ್ ಪತ್ತೆಯಾಗಿದೆ.
ಶಂಕಿತ ಬೋಟ್ ನಲ್ಲಿ ಪತ್ತೆಯಾದ ಸ್ಫೋಟಕ ಮತ್ತು ಬಂದೂಕುಗಳು
ಶಂಕಿತ ಬೋಟ್ ನಲ್ಲಿ ಪತ್ತೆಯಾದ ಸ್ಫೋಟಕ ಮತ್ತು ಬಂದೂಕುಗಳು

ರಾಯಗಢ: ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಮುಂಬೈ ದಾಳಿ ಮಾದರಿಗೆ ಉಗ್ರರು ಸಂಚು ರೂಪಿಸಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಇದಕ್ಕೆ ಕಾರಣ ಮಹಾರಾಷ್ಟ್ರದ ಬೀಚ್ ಬಳಿ ಸ್ಫೋಟಕ, ಬಂದೂಕುಗಳಿದ್ದ ಶಂಕಿತ ಬೋಟ್ ಪತ್ತೆಯಾಗಿದೆ.

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಹರಿಹರೇಶ್ವರ ಬೀಚ್‌ನಲ್ಲಿ ಪತ್ತೆಯಾಗಿರುವ ಅನುಮಾನಾಸ್ಪದ ಬೋಟ್‌ನಲ್ಲಿ 3 ಎಕೆ–47 ರೈಫಲ್, ಬುಲೆಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈನಿಂದ 190 ಕಿ.ಮೀ ದೂರದ ಶ್ರೀವರ್ಧನ್ ಪ್ರದೇಶದಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಹಡಗನ್ನು ಕಂಡ ಸ್ಥಳೀಯರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ರಾಯಗಡದ ಎಸ್‌ಪಿ ಅಶೋಕ್ ದುಧೆ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಡಗಿನ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ, ಹಡಗಿನಲ್ಲಿ 3 ಎಕೆ– 47 ರೈಫಲ್ಸ್ ಮತ್ತು ಬುಲೆಟ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ. ಈ ಹಡಗಿನ ಸಿಬ್ಬಂದಿಯನ್ನು ಈ ವರ್ಷದ ಜೂನ್‌ನಲ್ಲಿ ಒಮನ್ ಕಡಲ ತೀರದಲ್ಲಿ ರಕ್ಷಿಸಲಾಗಿದೆ. ಹಡಗು ತೇಲಿಕೊಂಡು ರಾಯಗಡ ಕಡಲ ತೀರಕ್ಕೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಂಕಿತ ದೋಣಿಯೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಯಗಢ ಜಿಲ್ಲೆ ಮತ್ತು ಸಮೀಪದ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಿಶೇಷ ತನಿಖೆಗೆ ಆಗ್ರಹ
ಅಂತೆಯೇ ಘಟನೆಯ ಕುರಿತು ವಿಶೇಷ ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ರಾಯಗಢ ಶಾಸಕಿ ಅದಿತಿ ತಟ್ಕರೆ ಹೇಳಿದ್ದಾರೆ. ಈ ಘಟನೆಯು ಒಂದು ದೊಡ್ಡ ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಬರುವುದರಿಂದ ಈ ಘಟನೆಯು ಒಂದು ದೊಡ್ಡ ಭದ್ರತಾ ಹೆದರಿಕೆಯಾಗಿದೆ ಎಂದು ಅವರು ಹೇಳಿದರು.

"ನಾಳೆ ದಹಿ ಹಂಡಿ, ಗಣೇಶೋತ್ಸವಕ್ಕೆ ಕೇವಲ 10 ದಿನಗಳು ಮಾತ್ರ ಇವೆ. ಈ ಹಬ್ಬಗಳ ಸಂದರ್ಭದಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಇದು ಭದ್ರತೆಯು ಒಂದು ಪ್ರಮುಖ ವಿಷಯವಾಗಿದೆ" ಎಂದು ತಟ್ಕರೆ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com