ಸೋನಾಲಿ ಫೋಗಟ್‌ಗೆ ನಿಷೇಧಿತ ಮೆಥಾಂಫೆಟಮೈನ್ ಡ್ರಗ್ಸ್ ನೀಡಿದ್ದ ಆರೋಪಿಗಳು: ಗೋವಾ ಪೊಲೀಸರು

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೀಡಾಗುವ ಕೆಲವೇ ಗಂಟೆಗಳ ಮೊದಲು ಉತ್ತರ ಗೋವಾದ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ಆಕೆಗೆ ಮೆಥಾಂಫೆಟಮೈನ್ ಡ್ರಗ್ಸ್ ನೀಡಿದ್ದರು ಎಂದು ಗೋವಾ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸೋನಾಲಿ ಫೋಗಟ್
ಸೋನಾಲಿ ಫೋಗಟ್

ಪಣಜಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೀಡಾಗುವ ಕೆಲವೇ ಗಂಟೆಗಳ ಮೊದಲು ಉತ್ತರ ಗೋವಾದ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ಆಕೆಗೆ ಮೆಥಾಂಫೆಟಮೈನ್ ಡ್ರಗ್ಸ್ ನೀಡಿದ್ದರು ಎಂದು ಗೋವಾ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಗೋವಾದ ಅಂಜುನಾದಲ್ಲಿರುವ ಕರ್ಲೀಸ್ ರೆಸ್ಟೋರೆಂಟ್‌ನಲ್ಲಿ ಅವರಿಗೆ ನೀಡಲಾದ ಡ್ರಗ್ಸ್‌ನ ಎಂಜಲುಗಳನ್ನು ರೆಸ್ಟೋರೆಂಟ್‌ನ ವಾಶ್‌ರೂಮ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಾಲ್ವಿ ಹೇಳಿದ್ದಾರೆ. 

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಆಕೆಯ ಆಪ್ತ ಸಹಾಯಕ ಸುಧೀರ್ ಸಗ್ವಾನ್, ಮತ್ತೋರ್ವ ಸಹಾಯಕ ಸುಖ್ವಿಂದರ್ ಸಿಂಗ್, ಕರ್ಲೀಸ್ ರೆಸ್ಟೋರೆಂಟ್ ಮಾಲೀಕ ಎಡ್ವಿನ್ ನ್ಯೂನ್ಸ್ ಮತ್ತು ಡ್ರಗ್ ಪೆಡ್ಲರ್ ದತ್ತಪ್ರಸಾದ್ ಗಾಂವ್ಕರ್ ಅವರನ್ನು ಬಂಧಿಸಿದ್ದಾರೆ.

ಸಿಂಗ್ ಮತ್ತು ಸಗ್ವಾನ್ ವಿರುದ್ಧ ಕೊಲೆ ಆರೋಪ ಹೊರಿಸಿದ್ದರೆ, ನೂನ್ಸ್ ಮತ್ತು ಗಾಂವ್ಕರ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಕೆಗೆ ನೀಡಲಾದ ಔಷಧಗಳನ್ನು ಮೆಥಾಂಫೆಟಮೈನ್ ಎಂದು ಗುರುತಿಸಲಾಗಿದೆ ಎಂದು ದಾಲ್ವಿ ಹೇಳಿದ್ದಾರೆ.

ಫೋಗಟ್ ಮತ್ತು ಇತರರು ತಂಗಿದ್ದ ಅಂಜುನಾದ ಹೋಟೆಲ್ ಗ್ರ್ಯಾಂಡ್ ಲಿಯೋನಿ ರೆಸಾರ್ಟ್‌ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಗಾಂವ್ಕರ್ ಅವರು ಸಗ್ವಾನ್ ಮತ್ತು ಸಿಂಗ್‌ಗೆ ಅವುಗಳನ್ನು ಪೂರೈಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com