ಆರೋಪಿ ಸುಖೇಶ್ ಕಳ್ಳಾಟ ಗೊತ್ತಿದ್ದರೂ, ಆತನಿಂದ ಜಾಕ್ವೆಲಿನ್ ಉಡುಗೊರೆಗಳ ಸ್ವೀಕರಿಸಿದ್ದರು: ಜಾರಿ ನಿರ್ದೇಶನಾಲಯ

ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಆರೋಪಿ ಸುಖೇಶ್ ಎಲ್ಲ ಕಳ್ಳಾಟಗಳು ತಿಳಿದಿತ್ತು ಎಂದು ಹೇಳಲಾಗಿದೆ.
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್

ನವದೆಹಲಿ: ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಆರೋಪಿ ಸುಖೇಶ್ ಎಲ್ಲ ಕಳ್ಳಾಟಗಳು ತಿಳಿದಿತ್ತು ಎಂದು ಹೇಳಲಾಗಿದೆ.

ಬಾಲಿವುಡ್ ನಟಿ ಜಾಕ್ವೆಲಿನ್ ಸದ್ಯ 215 ಕೋಟಿ ರೂ. ಅಕ್ರಮ ವರ್ಗಾವಣೆ ಮತ್ತು ವಂಚನೆ ಪ್ರಕರಣದ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯ ಈಗಾಗಲೇ ಕೋರ್ಟ್‌ಗೆ ವಿವರವಾದ ಚಾರ್ಜ್​ಶೀಟ್​ ಸಹ ಸಲ್ಲಿಸಿದೆ. ಚಾರ್ಜ್​ಶೀಟ್ ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಆರೋಪಿ ಸುಖೇಶ್ ಎಲ್ಲ ಕಳ್ಳಾಟಗಳು ತಿಳಿದಿತ್ತು. ಹಾಗಿದ್ದೂ ಕೂಡ ಆತನಿಂದ ಉಡುಗೊರೆಗಳನ್ನು ಸ್ವೀಕರಿಸಿದ್ದು ಮಾತ್ರವಲ್ಲದೇ, ಹಣಕಾಸಿನ ವ್ಯವಹಾರಗಳನ್ನು ಹೊಂದಿದ್ದರು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

‘ಸುಖೇಶ್ ಚಂದ್ರಶೇಖರ್ ನಡೆಸುತ್ತಿದ್ದ ಅಕ್ರಮಗಳ ಬಗ್ಗೆ ಜಾಕ್ವೆಲಿನ್​ಗೆ ತಿಳಿದಿತ್ತು. ಆದಾಗ್ಯೂ ಅವರು ಸುಖೇಶ್​ನಿಂದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳುತ್ತಿದ್ದರು. ಜಾಕ್ವೆಲಿನ್ ಅವರ ಕೇಶ ವಿನ್ಯಾಸಕ ಶಾನ್ ಅವರು ಸುಖೇಶ್​ ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಜಾಕ್ವೆಲಿನ್ ಅವರು ಈ ವಿಚಾರವನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಸುಖೇಶ್ ಜತೆ ರಿಲೇಶನ್​ಶಿಪ್ ಮುಂದುವರಿಸಿದ್ದರು’ ಎಂದು ಇಡಿ ತನ್ನ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಿದೆ.

'ಆರೋಪಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಅವರ ಸಂಬಂಧಿಕರು ಉಡುಗೊರೆಗಳನ್ನು ಸ್ವೀಕರಿಸುವ ಬಗ್ಗೆ ನಿರಂತರವಾಗಿ ತಮ್ಮ ನಿಲುವು ಬದಲಾಯಿಸಿದ್ದಾರೆ. ಅವರಿಂದ ಹೇಳಿಕೆ ಪಡೆದಾಗ ಮಾತ್ರ ಈ ಬಗ್ಗೆ ಸವಿವರವಾದ ಮಾಹಿತಿ ಲಭಿಸಿದೆ. ಆದ್ರೂ ನಟಿ, ಸುಕೇಶ್​​ ಖರೀದಿಸಿರುವ ಕೆಲವು ಆಸ್ತಿಗಳ ಬಗ್ಗೆ ಮಾಹಿತಿ ನೀಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಸುಖೇಶ್ ಚಂದ್ರಶೇಖರ್ 52 ಲಕ್ಷ ರೂ. ಮೌಲ್ಯದ ಕುದುರೆ, 9 ಲಕ್ಷ ರೂ. ಮೌಲ್ಯದ ಪರ್ಷಿಯನ್ ಬೆಕ್ಕನ್ನು ಜಾಕ್ವೆಲಿನ್ ಫರ್ನಾಂಡೀಸ್‌ ಉಡುಗೊರೆಯಾಗಿ ನೀಡಿದ್ದ. ಜಾಕ್ವೆಲಿನ್ ಕುಟುಂಬಸ್ಥರಿಗೆ USD 1 ಲಕ್ಷ ಮತ್ತು AUD 2,67,40 ಉಡುಗೊರೆಯಾಗಿ ನೀಡಿದ್ದಾನೆ. ಇದನ್ನು ಪಡೆಯುವ ಮೂಲಕ ಅವರು ಅಪರಾಧ ಮಾಡಿದ್ದಾರೆ.

PMLA, 2002 ರ ಸೆಕ್ಷನ್ 3ರ ಅಡಿಯಲ್ಲಿ ಆರೋಪಿ ಜಾಕ್ವೆಲಿನ್ ಫರ್ನಾಂಡೀಸ್ ಅವರು POC ಗೆ ಸಂಬಂಧಿಸಿದ ಪ್ರಕ್ರಿಯೆ ಮತ್ತು ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಅಪರಾಧ ಮಾಡಿದ್ದಾರೆ. ಸುಖೇಶ್ ಚಂದ್ರಶೇಖರ್ ಮತ್ತು ಇತರರು ಒಳಗೊಂಡಿರುವ 200 ಕೋಟಿ ರೂ. ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಬುಧವಾರ ನಟಿಗೆ ಸಮನ್ಸ್ ಜಾರಿ ಮಾಡಿದೆ.

ಸುಖೇಶ್ ಚಂದ್ರಶೇಖರ್ ಹಲವು ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚನೆ ಮಾಡಿದ್ದ. ಈ ಪ್ರಕರಣ ಬೆಳಕಿಗೆ ಬಂದ ನಂತರದಲ್ಲಿ ಆತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಜಾಕ್ವೆಲಿನ್ ಹೆಸರನ್ನು ಆತ ರಿವೀಲ್ ಮಾಡಿದ್ದ. ಅಷ್ಟೇ ಅಲ್ಲದೆ ಜಾಕ್ವೆಲಿನ್ ಹಾಗು ತಾನು ಒಟ್ಟಾಗಿ ಕಳೆದ ಖಾಸಗಿ ಫೋಟೋಗಳನ್ನು ಲೀಕ್ ಮಾಡಿಸಿದ್ದ. ಈ ಫೋಟೋಗಳು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com