ಮುತ್ತು ತಂದ ಸಂಕಷ್ಟ; ಪ್ರೇಯಸಿಯನ್ನು ಚುಂಬಿಸಿದ ವರ; ಆತನನ್ನು ಮದುವೆಯಾಗಲು ನಿರಾಕರಿಸಿದ ವಧು
ಇನ್ನೇನು ಜೋಡಿ ನವ ಬದುಕಿಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಮದುವೆಯೇ ನಿಂತುಹೋಗಿದೆ. ಸುಮಾರು 300 ಅತಿಥಿಗಳ ಮುಂದೆ ವರ ವೇದಿಕೆಯಲ್ಲಿಯೇ ತನಗೆ ಮುತ್ತು ನೀಡಿದ್ದಕ್ಕಾಗಿ ಕೋಪಗೊಂಡ ವಧು ತನ್ನ ಮದುವೆಯನ್ನು ರದ್ದುಗೊಳಿಸಿದ್ದಾಳೆ.
Published: 01st December 2022 11:13 AM | Last Updated: 01st December 2022 11:13 AM | A+A A-

ಪ್ರಾತಿನಿಧಿಕ ಚಿತ್ರ
ಸಂಭಾಲ್: ಈ ಮುತ್ತು ಎನ್ನುವುದು ಇಲ್ಲಿ ಸಂಬಂಧವನ್ನು ಗಟ್ಟಿಗೊಳಿಸಲಿಲ್ಲ. ಬದಲಿಗೆ ಮುರಿದೇಹೋಯಿತು. ಹೌದು, ಉತ್ತರ ಪ್ರದೇಶದಲ್ಲಿ ಇಂತದ್ದೊಂದು ಘಟನೆ ನಡೆದಿದ್ದು, ವರ ಕೊಟ್ಟ ಮುತ್ತು ಇದೀಗ ಆತನಿಗೆ ಸಂಕಷ್ಟ ತಂದಿಟ್ಟಿದೆ.
ಇನ್ನೇನು ಜೋಡಿ ನವ ಬದುಕಿಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಮದುವೆಯೇ ನಿಂತುಹೋಗಿದೆ. ಸುಮಾರು 300 ಅತಿಥಿಗಳ ಮುಂದೆ ವರ ವೇದಿಕೆಯಲ್ಲಿಯೇ ತನಗೆ ಮುತ್ತು ನೀಡಿದ್ದಕ್ಕಾಗಿ ಕೋಪಗೊಂಡ ವಧು ತನ್ನ ಮದುವೆಯನ್ನು ರದ್ದುಗೊಳಿಸಿದ್ದಾಳೆ.
ಮಂಗಳವಾರ ರಾತ್ರಿ ದಂಪತಿ ಹಾರ ಬದಲಾಯಿಸಿಕೊಂಡ ನಂತರ ವರ ಆಕೆಗೆ ಮುತ್ತು ನೀಡಿದ್ದಾನೆ. ಈ ವೇಳೆ ತಕ್ಷಣವೇ ವಧು ವೇದಿಕೆಯಿಂದ ಹೊರನಡೆದಿದ್ದಾಳೆ ಮತ್ತು ನಂತರ ಪೊಲೀಸರಿಗೆ ಕರೆ ಮಾಡಿದ್ದಾಳೆ.
23 ವರ್ಷದ ಪದವೀಧರೆಯಾಗಿರುವ ವಧು, ವರನು ತನ್ನ ಸ್ನೇಹಿತರೊಂದಿಗೆ ಮಾಡಿಕೊಂಡಿದ್ದ ಚಾಲೆಂಜ್ ಅನ್ನು ಗೆಲ್ಲಲು ತನಗೆ ಮುತ್ತು ನೀಡಿದರು ಮತ್ತು ಈಗ ನನಗೆ 'ಆತನ ನಡತೆ ಬಗ್ಗೆ ಅನುಮಾನ ಉಂಟಾಗಿದೆ' ಎಂದು ಹೇಳಿದ್ದಾಳೆ.
ಬಳಿಕ ಸ್ಥಳಕ್ಕೆ ಬಂಧ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ವರ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಆದರೆ, ಆರಂಭದಲ್ಲಿ ನಾನು ಇದನ್ನು ನಿರ್ಲಕ್ಷಿಸಿದ್ದೆ ಎಂದು ವಧು ಅಲ್ಲಿ ಆರೋಪಿಸಿದ್ದಾಳೆ
ಆತ ನನಗೆ ಮುತ್ತು ನೀಡಿದಾಗ ನನಗೆ ಅವಮಾನವಾಯಿತು. ಆತ ನನ್ನ ಸ್ವಾಭಿಮಾನದ ಬಗ್ಗೆ ಯೋಚಿಸಲಿಲ್ಲ ಮತ್ತು ನೆರೆದಿದ್ದ ಹಲವಾರು ಅತಿಥಿಗಳ ಮುಂದೆ ಅನುಚಿತವಾಗಿ ವರ್ತಿಸಿದ' ಎಂದು ಆಕೆ ಆರೋಪಿಸಿದ್ದಾಳೆ.
ಪೊಲೀಸರು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ, ವಧು ಮದುವೆಗೆ ನಿರಾಕರಿಸಿದ್ದರಿಂದ ಮದುವೆಯನ್ನು ರದ್ದುಗೊಳಿಸಲಾಯಿತು ಮತ್ತು ಅತಿಥಿಗಳು ಮನೆಗೆ ಮರಳಿದರು.
ವಧುವಿನ ತಾಯಿ ಮಾತನಾಡಿ, 'ವರ ಸ್ನೇಹಿತರಿಂದ ಪ್ರಚೋದನೆಗೆ ಒಳಗಾಗಿದ್ದಾರೆ, ನನ್ನ ಮಗಳನ್ನು ಮನವೊಲಿಸಲು ನಾನು ಪ್ರಯತ್ನಿಸಿದ್ದೇನೆ. ಆದರೆ, ಆಕೆ ಆತನನ್ನು ಮದುವೆಯಾಗಲು ನಿರಾಕರಿಸಿದಳು. ನಾವು ಕೆಲವು ದಿನಗಳ ಬಳಿಕ ಏನು ಮಾಡಬೇಕೆಂಬ ಬಗ್ಗೆ ನಿರ್ಧರಿಸುತ್ತೇವೆ' ಎಂದು ಹೇಳಿದರು.
ಘಟನೆ ಸಂಭವಿಸುವ ವೇಳೆಗೆ ವಿಧಿವಿಧಾನಗಳು ನಡೆದಿದ್ದರಿಂದ ತಾಂತ್ರಿಕವಾಗಿ ದಂಪತಿ ವಿವಾಹವಾಗಿದ್ದಾರೆ. ಒಂದೆರಡು ದಿನದ ಬಳಿಕ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.