ರಾಜಕೀಯ ಎನ್ನುವುದು ವ್ಯಕ್ತಿಗಳಿಗೆ ಸಂಬಂಧಿಸಿದ್ದಲ್ಲ, ನೀತಿಗಳಿಗೆ ಸಂಬಂಧಿಸಿದ್ದು; ಬಿಜೆಪಿಯಿಂದ ನನ್ನ ಟೀಕೆಗಳ ದುರುಪಯೋಗ: ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ಮೋದಿ ಅವರನ್ನು ರಾವಣ ಎಂದು ಟೀಕಿಸಿದ್ದನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ.
Published: 03rd December 2022 12:48 PM | Last Updated: 03rd December 2022 05:11 PM | A+A A-

ಮಲ್ಲಿಕಾರ್ಜುನ ಖರ್ಗೆ
ಅಹಮದಾಬಾದ್: ಪ್ರಧಾನಿ ಮೋದಿ ಅವರನ್ನು ರಾವಣ ಎಂದು ಟೀಕಿಸಿದ್ದನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ.
ಬಿಜೆಪಿ ನಾಯಕರ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಗುಜರಾತ್ ರಾಜ್ಯ ಚನಾವಣೆ ಹಿನ್ನೆಲೆಯಲ್ಲಿ ನನ್ನ ಟೀಕೆಯನ್ನು ಬಿಜೆಪಿ ತನ್ನ ಲಾಭವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಆದರೆ, ರಾಜಕೀಯ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ನೀತಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ.
ರಾಜಕೀಯ ಕಾರ್ಯನಿರ್ವಹಣೆಯ ಮೇಲೆ ನನಗೆ ನಂಬಿಕೆ ಇದೆ. ಆದರೆ, ಬಿಜೆಪಿ ರಾಜಕೀಯ ಶೈಲಿಯಲ್ಲಿ ಪ್ರಜಾಪ್ರಭುತ್ವದ ಮನೋಭಾವವನ್ನು ಹೊಂದಿಲ್ಲ. ಎಲ್ಲೆಡೆ ಒಬ್ಬ ವ್ಯಕ್ತಿಯ ಬಗ್ಗೆ ಮಾತ್ರವೇ ರಾಜಕೀಯ ಮಾಡುತ್ತಾರೆಂದು ತಿಳಿಸಿದ್ದಾರೆ.
ಇದೇ ವೇಳೆ ಗುಜರಾತ್ ರಾಜ್ಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ನಿರೀಕ್ಷೆಗಳ ಕುರಿತು ಮಾತನಾಡಿ, ಕಾಂಗ್ರೆಸ್'ನ ಮತಗಳನ್ನು ವಿಭಜಿಸಲು ಯಾರೋ ಒಬ್ಬರ ಇಚ್ಛೆಯ ಮೇರೆಗೆ ಆ ಪಕ್ಷ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ನನ್ನನ್ನು ರಾವಣನಿಗೆ ಹೋಲಿಸಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿಕೊಡಲಾಗಿದೆ: ಪ್ರಧಾನಿ ಮೋದಿ
ವೈಯಕ್ತಿಕ ವಾಗ್ದಾಳಿ ಉದಾಹರಣಗೆ ತಮ್ಮದೇ ರಾವಣ ಹೇಳಿಕೆ ಪ್ರಚಾರದ ಪ್ರಮುಖ ಭಾಗವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯವರು ಚುನಾವಣಾ ಲಾಭಕ್ಕಾಗಿ ನನ್ನ ಹೇಳಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನಮಗೆ ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ್ದಲ್ಲ. ಅದು ನೀತಿಗಳಿಗೆ ಸಂಬಂಧಿಸಿದ್ದಾಗಿದೆ. ಬಿಜೆಪಿ ಮತ್ತು ಪ್ರಧಾನಿಯವರ ರಾಜಕೀಯ ಶೈಲಿಯು ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಮನೋಭಾವವನ್ನು ಹೊಂದಿರುವುದಿಲ್ಲ. ಎಲ್ಲಾ ಹಂತದ ಚುನಾವಣೆಗಳಲ್ಲಿ ಅವರ ಪ್ರಚಾರದ ಶೈಲಿಯ ಬಗ್ಗೆ ನಾನು ಹಲವಾರು ಉದಾಹರಣೆಗಳನ್ನು ನೀಡಿದ್ದೇನೆ, ಆದರೆ ಅವರು ಚುನಾವಣಾ ಲಾಭಕ್ಕಾಗಿ ನನ್ನ ಹೇಳಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
"ನಾನು ಯಾವುದೇ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಅಥವಾ ವೈಯಕ್ತಿಕ ಟೀಕೆಗಳನ್ನು ಮಾಡುವುದಿಲ್ಲ ಏಕೆಂದರೆ ನನಗೆ 51 ವರ್ಷಗಳ ಸಂಸದೀಯ ರಾಜಕೀಯದ ಅನುಭವವಿದೆ. ನಾನು ಅಭಿವೃದ್ಧಿ, ಹಣದುಬ್ಬರ, ನಿರುದ್ಯೋಗ, ಬಡತನದ ವಿಷಯಗಳ ಬಗ್ಗೆ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದೇನೆ ಎಂದಿದ್ದಾರೆ.