ನನ್ನನ್ನು ರಾವಣನಿಗೆ ಹೋಲಿಸಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿಕೊಡಲಾಗಿದೆ: ಪ್ರಧಾನಿ ಮೋದಿ

ನನ್ನನ್ನು ರಾವಣನಿಗೆ ಹೋಲಿಸಲು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿಕೊಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ಗೋಧ್ರಾ: ನನ್ನನ್ನು ರಾವಣನಿಗೆ ಹೋಲಿಸಲು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿಕೊಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಡಿಸೆಂಬರ್ 5 ರಂದು 2ನೇ ಹಂತದ ಮತದಾನ ನಡೆಯಲಿರುವ ಮಧ್ಯ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಕಲೋಲ್ ತಾಲೂಕಿನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಎರಡು ದಿನಗಳ ಹಿಂದಷ್ಟೇ ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ನಾಗರಿಕ ಚುನಾವಣೆಯಾಗಲಿ, ಪಂಚಾಯಿತಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಾಗಲಿ, ನರೇಂದ್ರ ಮೋದಿ ಅವರು ತಮ್ಮ ಮುಖವನ್ನು ನೆನಪಿಸಿಕೊಂಡು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಹಾಗಿದ್ದರೆ ಅವರಿಗೆ ರಾವಣನಂತೆ 100 ಮುಖಗಳಿವೆಯೇ?' ಎಂದು ಪ್ರಶ್ನಿಸಿದ್ದರು.

ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, 'ನನ್ನನ್ನು ರಾವಣನಿಗೆ ಹೋಲಿಸಲು ಖರ್ಗೆ ಅವರಿಗೆ ಹೇಳಿಕೊಡಲಾಗಿದೆ. ಕಾಂಗ್ರೆಸ್ ಭಗವಾನ್ ರಾಮನನ್ನು ನಂಬುವುದಿಲ್ಲ... ಅವರು ರಾಮಸೇತು ಅಸ್ತಿತ್ವವನ್ನು ಒಪ್ಪುವುದಿಲ್ಲ. ಇದು ಶ್ರೀರಾಮ ಭಕ್ತರ ರಾಜ್ಯವಾಗಿದೆ. ಇಲ್ಲಿ ಅಂತಹ ಆರೋಪವನ್ನು ರಾಜ್ಯದ ಜನತೆ ಎಂದಿಗೂ ಒಪ್ಪಿಕೊಳ್ಳುವುದಿಲ್ಲ' ಎಂದಿದ್ದಾರೆ.

ಪಂಚಮಹಲ್ ಜಿಲ್ಲೆಯಲ್ಲಿನ ಕೈಗಾರಿಕೀಕರಣದ ಕುರಿತು ಮಾತನಾಡಿದ ಪ್ರಧಾನಿ, 'ದೇಶದ ಆರ್ಥಿಕ ರಾಜಧಾನಿ ಮುಂಬೈ ಆಗಿದ್ದರೆ, ಪಂಚಮಹಲ್‌ನ ಆರ್ಥಿಕ ರಾಜಧಾನಿ ಹಲೋಲ್ ಮತ್ತು ಕಲೋಲ್ ಆಗಿದೆ. ಈ ಕೈಗಾರಿಕಾ ಪ್ರದೇಶಗಳಿಂದ 9,000 ಕೋಟಿ ರೂಪಾಯಿ ಕೈಗಾರಿಕಾ ಉತ್ಪನ್ನಗಳು ರಫ್ತಾಗುತ್ತವೆ' ಎಂದು ಹೇಳಿದರು.

ಗುಜರಾತ್ ಜನತೆಗೆ ಯಾವ ಪಕ್ಷ ಭರವಸೆಗಳನ್ನು ನೀಡುತ್ತಿದೆ ಎಂಬುದರ ಅರಿವಿದೆ ಮತ್ತು ಅದಕ್ಕಾಗಿಯೇ ಅವರು ಕಳೆದ 20 ವರ್ಷಗಳಿಂದ ಬಿಜೆಪಿಗೆ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com