ತುಂಡು ಭೂಮಿಗಾಗಿ ಸೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದ ಆರೋಪಿಗಳು!
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 24 ವರ್ಷದ ಸೋದರ ಸಂಬಂಧಿಯ ರುಂಡವನ್ನು 20 ವರ್ಷದ ಬುಡುಕಟ್ಟು ವ್ಯಕ್ತಿ ಹಾಗೂ ಆತನ ಸ್ನೇಹಿತರು ಕತ್ತರಿಸಿರುವ ಘಟನೆ ಜಾರ್ಖಂಡ್ ಜಿಲ್ಲೆಯ ಕುಂತಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಸ್ನೇಹಿತ ಆ ರುಂಡದೊಂದಿಗೆ ಸೆಲ್ಫಿ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Published: 06th December 2022 03:36 PM | Last Updated: 06th December 2022 03:46 PM | A+A A-

ಸಾಂದರ್ಭಿಕ ಚಿತ್ರ
ಕುಂತಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 24 ವರ್ಷದ ಸೋದರ ಸಂಬಂಧಿಯ ರುಂಡವನ್ನು 20 ವರ್ಷದ ಬುಡುಕಟ್ಟು ವ್ಯಕ್ತಿ ಹಾಗೂ ಆತನ ಸ್ನೇಹಿತರು ಕತ್ತರಿಸಿರುವ ಘಟನೆ ಜಾರ್ಖಂಡ್ ಜಿಲ್ಲೆಯ ಕುಂತಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಸ್ನೇಹಿತ ಆ ರುಂಡದೊಂದಿಗೆ ಸೆಲ್ಫಿ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುರ್ಹು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಡಿಸೆಂಬರ್ 2 ರಂದು ಮೃತನ ತಂದೆ ಎಫ್ ಐಆರ್ ದಾಖಲಿಸಿದ ನಂತರ ಪ್ರಮುಖ ಆರೋಪಿ, ಆತನ ಹೆಂಡತಿ ಸೇರಿದಂತೆ ಆರು ಮಂದಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮಗ ಕಾನು ಮುಂಡಾ ಡಿಸೆಂಬರ್ ಮನೆಯಲ್ಲಿ ಒಬ್ಬನೇ ಇದ್ದಾಗ ಆತನ ಸೋದರ ಸಂಬಂಧಿ ಸಾಗರ್ ಮುಂಡಾ ಹಾಗೂ ಆತನ ಸ್ನೇಹಿತರು ಅಪಹರಿಸಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾಗಿ ಕೊಲೆಯಾದ ವ್ಯಕ್ತಿಯ ತಂದೆ ಎಫ್ ಐಆರ್ ನಲ್ಲಿ ಹೇಳಿದ್ದಾರೆ. ಕಾನು ಪತ್ತೆಯಾಗದಿದ್ದಾಗ ಅವರ ತಂದೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ಕುಂತಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತಂಡವೊಂದನ್ನು ರಚಿಸಲಾಗಿತ್ತು.
ಆರೋಪಿಗಳ ಬಂಧನ ನಂತರ ಕುಮಾಂಗ್ ಗೊಪ್ಲಾ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆಯಾದರೆ, ಅಲ್ಲಿಂದ 15 ಕಿ.ಮೀ ದೂರದಲ್ಲಿರುವ ದುಲ್ವಾ ತುಂಗ್ರಿ ಅರಣ್ಯದಲ್ಲಿ ರುಂಡ ಪತ್ತೆಯಾಗಿದೆ ಎಂದು ಮುರ್ಹು ಪೊಲೀಸ್ ಠಾಣಾಧಿಕಾರಿ ಚುಂಡಮಣಿ ತುಡು ಹೇಳಿದ್ದಾರೆ.
Jharkhand| On Dec 1, In Khunti, 24-yr-old Kanu Munda was abducted in a car by his cousin brother Sagar Munda and few others,complaint was lodged. During the probe, it was revealed that Kanu was killed, body was buried by Sagar and his accomplices: Naushad Alam, SP, Khunti pic.twitter.com/kFufwo6qxd
— ANI (@ANI) December 6, 2022
ಆರೋಪಿಗಳು ಕಡಿದ ರುಂಡದೊಂದಿಗೆ ಸೆಲ್ಫಿ ತೆಗೆದುಕೊಂಡು ವಿಕೃತಿ ಮೆರೆದಿದ್ದಾರೆ. ಆರೋಪಿಗಳಿಂದ ಐದು ಮೊಬೈಲ್ ಫೋನ್ ಗಳು, ಮಾರಕಾಸ್ತ್ರಗಳು, ಕೊಡಲಿ ಮತ್ತು ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ತುಂಡು ಭೂಮಿಗಾಗಿ ಆರೋಪಿಗಳು ಮತ್ತು ಕೊಲೆಯಾದ ಯುವಕರ ಕುಟುಂಬದ ಮಧ್ಯೆ ದ್ವೇಷವಿತ್ತು. ಇದೇ ಕಾರಣದಿಂದ ಆತನ ತಲೆ ಕಡಿಯಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.