ಖರ್ಗೆ ಭೇಟಿ ಮಾಡಿದ 13 ವಿರೋಧ ಪಕ್ಷದ ನಾಯಕರು; ಸಂಸತ್ತಿನಲ್ಲಿ ಸರ್ಕಾರದ ಮೇಲೆ ಮುಗಿಬೀಳಲು 20 ವಿಚಾರಗಳ ಪಟ್ಟಿ
13 ರಾಜಕೀಯ ಪಕ್ಷಗಳ ನಾಯಕರು ಬುಧವಾರ ಬೆಳಗ್ಗೆ ಸಂಸತ್ತಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಸಿದರು ಮತ್ತು ಉಭಯ ಸದನಗಳಲ್ಲಿ ವಿವಿಧ ನಿಯಮಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ಸುಮಾರು 20 ವಿಚಾರಗಳನ್ನು ಪಟ್ಟಿಮಾಡಿದರು.
Published: 07th December 2022 01:59 PM | Last Updated: 07th December 2022 05:11 PM | A+A A-

ಪ್ರಾತಿನಿಧಿಕ ಚಿತ್ರ
ನವದೆಹಲಿ: 13 ರಾಜಕೀಯ ಪಕ್ಷಗಳ ನಾಯಕರು ಬುಧವಾರ ಬೆಳಗ್ಗೆ ಸಂಸತ್ತಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಸಿದರು ಮತ್ತು ಉಭಯ ಸದನಗಳಲ್ಲಿ ವಿವಿಧ ನಿಯಮಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ಸುಮಾರು 20 ವಿಚಾರಗಳನ್ನು ಪಟ್ಟಿಮಾಡಿದರು.
ಎಐಐಎಂಎಸ್‌ನ ಸೈಬರ್‌ಹ್ಯಾಕಿಂಗ್, ಸುಪ್ರೀಂ ಕೋರ್ಟ್-ಕೊಲಿಜಿಯಂ ಸಮಸ್ಯೆ, ಹಣದುಬ್ಬರ, ಭಾರತ-ಚೀನಾ ಗಡಿ ವಿವಾದ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ವಿಚಾರಗಳನ್ನು ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸುತ್ತವೆ.
ಸಭೆಯಲ್ಲಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ಸುರೇಶ್ ಕೋಡಿಕುನ್ನಿಲ್, ನಾಸಿರ್ ಹುಸೇನ್, ಡಿಎಂಕೆಯ ಟಿ.ಆರ್. ಬಾಲು, ತಿರುಚಿ ಶಿವ, ಎನ್‌ಸಿಪಿಯ ಶರದ್ ಪವಾರ್, ಸಿಪಿಐಎಂನ ಎಳಮರಮ್ ಕರೀಂ, ಪಿ.ಆರ್. ನಟರಾಜನ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಆರ್‌ಜೆಡಿಯ ಅಹ್ಮದ್ ಅಶ್ಫಾಕ್ ಕರೀಮ್, ಶಿವಸೇನೆಯ ಸಂಜಯ್ ರಾವುತ್, ಎಎಪಿಯ ಸಂಜಯ್ ಸಿಂಗ್, ಎಂಡಿಎಂಕೆಯ ವೈಕೋ, ಆರ್‌ಎಲ್‌ಡಿಯ ಜಯಂತ್ ಚೌಧರಿ, ಆರ್‌ಎಸ್‌ಪಿಯ ಎನ್.ಕೆ. ಪ್ರೇಮಚಂದ್ರನ್, ಐಯುಎಂಎಲ್‌ನ ಇ.ಟಿ. ಮುಹಮ್ಮದ್ ಬಶೀರ್, ಅಬ್ದುಲ್ ವಹಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್‌ನ ಹಸ್ನೈನ್ ಮಸೂದಿ ಭಾಗವಹಿಸಿದ್ದರು.
ಇದನ್ನೂ ಓದಿ: ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿದ್ದು ದೊಡ್ಡ ಅವಕಾಶ, ಯುವ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡಿ: ಪ್ರಧಾನಿ ಮೋದಿ
ಸಂಸತ್ತಿನ ಚಳಿಗಾಲದ ಅಧಿವೇಶನ ಬುಧವಾರ ಆರಂಭವಾಗಿದ್ದು, ಡಿಸೆಂಬರ್ 29ರವರೆಗೂ ನಡೆಯಲಿದೆ. ಅಧಿವೇಶನದಲ್ಲಿ 23 ಮಸೂದೆಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
'ವನ್ಯಜೀವಿ (ರಕ್ಷಣೆ) ತಿದ್ದುಪಡಿ ಮಸೂದೆ, 2022', 'ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ, 2022' ಮತ್ತು 'ಜೈವಿಕ ವೈವಿಧ್ಯ (ತಿದ್ದುಪಡಿ) ಮಸೂದೆ, 2022' ಸೇರಿದಂತೆ ಹಲವು ಮಸೂದೆಗಳು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿವೆ ಎನ್ನಲಾಗಿದೆ.