
ಪ್ರಹ್ಲಾದ್ ಜೋಶಿ
ಅಹಮದಾಬಾದ್: ಗುಜರಾತ್ ಮಾಡಲೆ'ಗೆ ಸಿಕ್ಕಿರುವ ಜಯವಿದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಗುರುವಾರ ಹೇಳಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿಯವರು ಗುಜರಾತ್ ಮಾಡಲೆ'ಗೆ ಸಿಕ್ಕಿರುವ ಜಯವಿದು ಎಂದು ಹೇಳಿದ್ದಾರೆ.
‘ಇದು ಮತದಾನ ಇತಿಹಾಸದಲ್ಲಿ ಈವರೆಗಿನ ಅತಿದೊಡ್ಡ ದಾಖಲೆಯಾಗಿದೆ. 2000-2001ರಿಂದ ಗುಜರಾತ್ ಮಾದರಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದೇ ಮಾದರಿಯನ್ನು ರಾಷ್ಟ್ರದ ಎಲ್ಲೆಡೆ ನಾವು ಪ್ರಸ್ತುತಪಡಿಸುತ್ತಿದ್ದೇವೆ. ನಾನು ಗುಜರಾತ್‌ನ ಜನತೆ ಮತ್ತು ಬಿಜೆಪಿ ನಾಯಕರನ್ನು ಅಭಿನಂದಿಸುತ್ತೇನೆಂದು ತಿಳಿಸಿದ್ದಾರೆ.
#GujaratElections | Gujarat model is being endorsed&accepted by people since 2000-2001. The model that we're presenting before the nation is being accepted. I congratulate the people&BJP of Gujarat. It's one of the biggest ever record in polling history: Parliamentary Affairs Min pic.twitter.com/aVOSZ66IOC
— ANI (@ANI) December 8, 2022
ಗುಜರಾತ್ ವಿಧಾನಸಭೆ ಚುನಾವಣೆ ಡಿಸೆಂಬರ್ 1 ಮತ್ತು 5ರಂದು ಎರಡು ಹಂತದಲ್ಲಿ ನಡೆದಿತ್ತು. ಡಿ.1ರಂದು ನಡೆದಿದ್ದ ಮೊದಲ ಹಂತದ ಚುನಾವಣೆಯಲ್ಲಿ ಶೇ 63.31ರಷ್ಟು ಮತದಾನವಾಗಿತ್ತು. ಡಿ.5ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ 59.19ರಷ್ಟು ಮತದಾನವಾಗಿತ್ತು.