ತವಾಂಗ್ ಘರ್ಷಣೆ: ಅರುಣಾಚಲ ಪ್ರದೇಶದಲ್ಲಿ ಭಾರತೀಯ ಯುದ್ಧ ವಿಮಾನಗಳ ಗಸ್ತು ಆರಂಭ

ಚೀನಾದಿಂದ ಭಾರತದ ಗಡಿ ಪ್ರದೇಶದ ಒಳಗೆ ವಾಯುಪ್ರದೇಶದ ಉಲ್ಲಂಘನೆಯಾಗುತ್ತದೆಯೇ ಎಂದು ಪರೀಕ್ಷಿಸಲು ಭಾರತೀಯ ವಾಯುಪಡೆ (IAF) ಅರುಣಾಚಲ ಪ್ರದೇಶದ ಮೇಲೆ ಯುದ್ಧ ಗಸ್ತು ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚೀನಾದಿಂದ ಭಾರತದ ಗಡಿ ಪ್ರದೇಶದ ಒಳಗೆ ವಾಯುಪ್ರದೇಶದ ಉಲ್ಲಂಘನೆಯಾಗುತ್ತದೆಯೇ ಎಂದು ಪರೀಕ್ಷಿಸಲು ಭಾರತೀಯ ವಾಯುಪಡೆ (IAF) ಅರುಣಾಚಲ ಪ್ರದೇಶದ ಮೇಲೆ ಯುದ್ಧ ಗಸ್ತು ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಭಾರತ-ಚೀನಾ ಗಡಿ ಸಂಘರ್ಷದ ನಂತರ ಯುದ್ಧ ವಿಮಾನಗಳನ್ನು ಎರಡು ಮೂರು ಬಾರಿ ಗಸ್ತು ತಿರುಗಿಸಲಾಗಿದೆ. ವಾಯುಪಡೆಯು ಅರುಣಾಚಲದಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಯಾದ್ಯಂತ ಚೀನಾದ ವಾಯು ಚಟುವಟಿಕೆಯನ್ನು ಪತ್ತೆಹಚ್ಚಿದೆ.

ಕಳೆದ ವಾರ ಅರುಣಾಚಲ ಪ್ರದೇಶದ ಎಲ್‌ಎಸಿಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಘರ್ಷಣೆಗೆ ಒಳಗಾಗಿದ್ದರು. ಮೂಲಗಳ ಪ್ರಕಾರ ಮೊದಲು ಚೀನೀ ಸೈನಿಕರು ಗಡಿಯನ್ನು ದಾಟಿ ಬಂದಿದ್ದಾರೆ. ಇದನ್ನು ಭಾರತೀಯ ಸೈನಿಕರು ದೃಢ ರೀತಿಯಲ್ಲಿ ಎದುರಿಸಿದ್ದಾರೆ. ಎರಡೂ ಕಡೆಯ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಎರಡು ಕಡೆಯವರು ತಕ್ಷಣವೇ ಪ್ರದೇಶದಿಂದ ಹೊರಗುಳಿದಿದ್ದಾರೆ. 

ಪೂರ್ವ ಲಡಾಖ್‌ನಲ್ಲಿ ನಡೆದ ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಸೈನಿಕರ ನಡುವೆ ಇಂತಹ ಘರ್ಷಣೆಗಳು ವರದಿಯಾಗುತ್ತಿರುವುದು ಬಹಳ ಸಮಯದ ನಂತರ ಇದೇ ಮೊದಲು.

2020 ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆಯಲ್ಲಿ ದೇಶಕ್ಕಾಗಿ 20 ಭಾರತೀಯ ಸೈನಿಕರು ಹುತಾತ್ಮಗೊಂಡಿದ್ದರು. 40 ಕ್ಕೂ ಹೆಚ್ಚು ಚೀನೀ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಗಾಯಗೊಂಡಿದ್ದರು. ಈ ಘಟನೆಯು ಎರಡು ರಾಷ್ಟ್ರಗಳ ನಡುವೆ ಘರ್ಷಣೆಯ ಸರಣಿಯನ್ನು ಹುಟ್ಟುಹಾಕಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com