ಬಿಆರ್ ಎಸ್ ಶಾಸಕ ರೋಹಿತ್ ರೆಡ್ಡಿ ಹಾಗೂ ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಇಡಿ ನೋಟಿಸ್
ಶಾಸಕರಿಗೆ ಆಮಿಷ ಒಡ್ಡಿದ ಪ್ರಕರಣದಲ್ಲಿ ಸುದ್ದಿಯಾಗಿದ್ದ ತಾಂಡೂರಿನ ಶಾಸಕ, ಬಿಆರ್ ಎಸ್ ಪೈಲಟ್ ರೋಹಿತ್ ರೆಡ್ಡಿಗೆ ಜಾರಿ ನಿರ್ದೇಶನಾಲಯ(ಇಡಿ) ಶಾಕ್ ನೀಡಿದೆ.
Published: 16th December 2022 04:04 PM | Last Updated: 16th December 2022 04:04 PM | A+A A-

ರೋಹಿತ್ ರೆಡ್ಡಿ-ರಕುಲ್ ಪ್ರೀತಿ ಸಿಂಗ್
ಶಾಸಕರಿಗೆ ಆಮಿಷ ಒಡ್ಡಿದ ಪ್ರಕರಣದಲ್ಲಿ ಸುದ್ದಿಯಾಗಿದ್ದ ತಾಂಡೂರಿನ ಶಾಸಕ, ಬಿಆರ್ ಎಸ್ ಪೈಲಟ್ ರೋಹಿತ್ ರೆಡ್ಡಿಗೆ ಜಾರಿ ನಿರ್ದೇಶನಾಲಯ(ಇಡಿ) ಶಾಕ್ ನೀಡಿದೆ. ಬೆಂಗಳೂರು ಡ್ರಗ್ಸ್ ಪ್ರಕರಣ ಸಂಬಂಧ ರೋಹಿತ್ ರೆಡ್ಡಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಇದೇ ತಿಂಗಳ 19ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಪಾರ್ಟಿಯೊಂದರಲ್ಲಿ ಡ್ರಗ್ಸ್ ಪ್ರಕರಣ ದಾಖಲಾಗಿದ್ದು, ಹಲವು ಸೆಲೆಬ್ರಿಟಿಗಳ ಹೆಸರು ಹೊರಬಿದ್ದಿದೆ. ಈ ಸಂಬಂಧ ಶಾಸಕ ರೋಹಿತ್ ರೆಡ್ಡಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಟಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಜನಪ್ರಿಯ ನಟಿ ರಾಕುಲ್ ಪ್ರೀತ್ ಸಿಂಗ್ ಅವರಿಗೂ ಇಡಿ ನೋಟಿಸ್ ಜಾರಿ ಮಾಡಿದೆ.
ಇಡಿ ನೋಟಿಸ್ ಬಂದಿರುವುದನ್ನು ರೋಹಿತ್ ರೆಡ್ಡಿ ಖಚಿತಪಡಿಸಿದ್ದಾರೆ. ಆದರೆ ಯಾವ ಪ್ರಕರಣದಲ್ಲಿ ನೋಟಿಸ್ ಬಂದಿದೆ ಎಂಬುದು ಗೊತ್ತಿಲ್ಲ ಎಂದರು. ಅವರ ವ್ಯವಹಾರಗಳು, ಐಟಿ ರಿಟರ್ನ್ಸ್ ಮತ್ತು ಕುಟುಂಬ ಸದಸ್ಯರ ಖಾತೆಗಳ ವಿವರಗಳನ್ನು ಕೇಳಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: 2 ತಿಂಗಳಲ್ಲಿ 27 ಮಂದಿ ಡ್ರಗ್ಸ್ ಪೆಡ್ಲರ್ಸ್ ಗಳ ಬಂಧಿಸಿದ ಎನ್'ಸಿಬಿ
ಈ ಮಧ್ಯೆ, ಕಳೆದ ವರ್ಷ ಫೆಬ್ರವರಿ 26ರಂದು ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಸಿನಿಮಾ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಲು ಬಂದಿದ್ದ ಇಬ್ಬರು ನೈಜೀರಿಯನ್ನರನ್ನು ಬಂಧಿಸಿದ್ದರು. ಅವರಿಂದ ಪಡೆದ ಮಾಹಿತಿಯಿಂದ ತೆಲಂಗಾಣದ ಹಲವು ಉದ್ಯಮಿಗಳು ಹಾಗೂ ಶಾಸಕರ ಹೆಸರು ಡ್ರಗ್ಸ್ ಪೆಡ್ಲರ್ ಗಳ ತಿಳಿಸಿದ್ದರು. ಇವರಲ್ಲಿ ಕೆಲವರನ್ನು ಬೆಂಗಳೂರು ಪೊಲೀಸರು ಈ ಹಿಂದೆ ವಿಚಾರಣೆ ನಡೆಸಿದ್ದರು.