ಐಪಿಎಸ್‌ ಅಧಿಕಾರಿ ಎಂದು ಪೋಸ್‌ ನೀಡಿ ಮಹಿಳೆಯರ ವಂಚಿಸಿದ 8ನೇ ತರಗತಿ ಓದಿರುವ ಭೂಪ!

ಉತ್ತರಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿ ಎಂದು ಪೋಸು ನೀಡಿ, ದೆಹಲಿಯಲ್ಲಿ ಮಹಿಳೆಯೊಬ್ಬರನ್ನು ವಂಚಿಸಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ನಕಲಿ ಐಪಿಎಸ್ ವಿಕಾಸ್ ಗೌತಮ್
ನಕಲಿ ಐಪಿಎಸ್ ವಿಕಾಸ್ ಗೌತಮ್

ನವದೆಹಲಿ: ಉತ್ತರಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿ ಎಂದು ಪೋಸು ನೀಡಿ, ದೆಹಲಿಯಲ್ಲಿ ಮಹಿಳೆಯೊಬ್ಬರನ್ನು ವಂಚಿಸಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಈ ವ್ಯಕ್ತಿಯನ್ನು ಮಧ್ಯಪ್ರದೇಶ ಗ್ವಾಲಿಯರ್  ನಿವಾಸಿ ವಿಕಾಸ್ ಗೌತಮ್ ಎಂದು ಗುರುತಿಸಲಾಗಿದೆ.

ತಾನು ಕಾನ್ಪುರ್ ಐಐಟಿ ಪದವೀಧರ ಎಂದು ಹೇಳಿಕೊಂಡಿದ್ದ ವಿಕಾಸ್ ಐಪಿಎಸ್ ಅಧಿಕಾರಿ ಎಂದು ನಂಬಿಸಿದ್ದ. ದೆಹಲಿಯ ಮಹಿಳಾ ವೈದ್ಯರೊಬ್ಬರು ದಾಖಲಿಸಿದ ದೂರಿನ ಅನ್ವಯ ದೆಹಲಿ ಸೈಬರ್ ಸೆಲ್ ಅಧಿಕಾರಿಗಳು ವಿಕಾಸ್ ನನ್ನು ಬಂಧಿಸಿದ್ದಾರೆ.

ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಮಹಿಳೆಯೊಬ್ಬರನ್ನು ಸಹ ಈತ ವಂಚಿಸಿದ್ದಾನೆ. ಅವರು ಆನ್‌ಲೈನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ್ದು, ಒಂದು ದಿನ, ಆಕೆಯ ನಂಬಿಕೆಯನ್ನು ಗಳಿಸಿಕೊಂಡಿದ್ದಾನೆ. ನಂತರ ವಿಕಾಸ್‌ ಎಂಬ ಹೆಸರಿನ ಈ ವ್ಯಕ್ತಿ ಮಹಿಳಾ ವೈದ್ಯೆಯಿಂದ ತೆಗೆದುಕೊಂಡ ವಿವರಗಳನ್ನು ಬಳಸಿ, ಆಕೆಯ ಬ್ಯಾಂಕ್ ಖಾತೆಯಿಂದ 25,000 ರೂ. ಪಡೆದಿದ್ದಾನೆ ಎಂದು ತಿಳಿದುಬಂದಿದೆ.

ಅಂತಿಮವಾಗಿ, ಅವನು ವಂಚಕನೆಂದು ಮಹಿಳಾ ವೈದ್ಯೆ ಕಂಡುಕೊಂಡಾಗ, ಆಕೆ ಪೊಲೀಸರ ಬಳಿ ಹೋಗಲು ನಿರ್ಧರಿಸಿದಳು. ಆದರೆ, ಈ ವೇಳೆ ನಕಲಿ ಐಪಿಎಸ್ ಅಧಿಕಾರಿ ತನಗೆ ರಾಜಕೀಯ ಸಂಪರ್ಕವಿದೆ ಎಂದು ಬೆದರಿಕೆ ಹಾಕಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.ಮಹಿಳಾ ವೈದ್ಯೆ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತರಾಗಿದ್ದ ದೆಹಲಿ ಪೊಲೀಸರು ವಿಕಾಸ್ ನನ್ನು ಬಂಧಿಸಿದ್ದರು.

ಈತ ಐಪಿಎಸ್ ಅಧಿಕಾರಿ ಎಂಬಂತೆ ಬಿಂಬಿಸಿಕೊಳ್ಳಲು ನಕಲಿ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆ ತೆರೆದಿರುವುದು ತನಿಖೆಯಿಂದ ತಿಳಿದು ಬಂದಿದೆ. 8ನೇ ತರಗತಿ ಉತ್ತೀರ್ಣರಾದ ನಂತರ ವಿಕಾಸ್ ದೆಹಲಿಗೆ ವಲಸೆ ಬಂದು ಮುಖರ್ಜಿ ನಗರದ ಹೋಟೆಲ್ ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ, ಇಲ್ಲಿಗೆ ಬರುತ್ತಿದ್ದ ಅಧಿಕಾರಿಗಳನ್ನು ಗಮನಿಸಿದ ನಂತರ ವಿಕಾಸ್ ತಾನು ಐಪಿಎಸ್ ಅಧಿಕಾರಿಯಂತೆ ಇರಬೇಕೆಂಬ ಪ್ಲ್ಯಾನ್ ಹಾಕಿಕೊಂಡು, ಅದರಂತೆ ಫೋಸು ಕೊಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ವಿಕಾಸ್ ಗೌತಮ್ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಎಂದು ದೆಹಲಿ ಪೊಲೀಸ್ ಅಧಿಕಾರಿ ಹರಿಂದರ್ ಸಿಂಗ್ ಹೇಳಿದ್ದು, ಆರೋಪಿ 8 ನೇ ತರಗತಿ ಉತ್ತೀರ್ಣರಾದ ನಂತರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವೆಲ್ಡಿಂಗ್ ಕೋರ್ಸ್ ಮಾಡಿದ್ದಾರೆ. ಅಲ್ಲದೆ, ವಿಕಾಸ್ ಗೌತಮ್‌ಗೆ ಕ್ರಿಮಿನಲ್ ಇತಿಹಾಸವಿದೆ ಎಂದು ಪೊಲೀಸರು ಕಂಡುಕೊಂಡಿದ್ದು, ಆತ ಈ ಹಿಂದೆ ಉತ್ತರ ಪ್ರದೇಶ ಮತ್ತು ಗ್ವಾಲಿಯರ್‌ನಲ್ಲಿ ವಂಚನೆ ಆರೋಪದ ಮೇಲೆ ಜೈಲಿನಲ್ಲಿದ್ದ ಎಂಬುದು ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com