ಅಮಾನುಷ ವರ್ತನೆ: ಪ್ರಿಯಕರನಿಂದ ಹಿಗ್ಗಾಮುಗ್ಗ ಥಳಿತ, ಗಂಟೆಗಳ ಕಾಲ ರಸ್ತೆಬದಿ ಬಿದ್ದಿದ್ದ ಯುವತಿ, ಭೀಕರ ವಿಡಿಯೋ!
ಮಧ್ಯಪ್ರದೇಶದ ರೇವಾ ಜಿಲ್ಲೆಯಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಆಕೆಯ ಗೆಳೆಯ ಅಮಾನುಷವಾಗಿ ಥಳಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
Published: 25th December 2022 03:49 PM | Last Updated: 25th December 2022 03:49 PM | A+A A-

ಪ್ರತ್ಯಕ್ಷ ದೃಶ್ಯ
ರೇವಾ(ಮಧ್ಯಪ್ರದೇಶ): ಮಧ್ಯಪ್ರದೇಶದ ರೇವಾ ಜಿಲ್ಲೆಯಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಆಕೆಯ ಗೆಳೆಯ ಅಮಾನುಷವಾಗಿ ಥಳಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಘಟನೆಯು ರೇವಾದ ಮೌಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಂಕಜ್ ತ್ರಿಪಾಠಿ ಹಾಗೂ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಇಬ್ಬರ ವಿರುದ್ಧವೂ ಐಟಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲವು ದಿನಗಳಿಂದ ಪರಾರಿಯಾಗಿದ್ದ ಪಂಕಜ್ ತ್ರಿಪಾಠಿ ಉತ್ತರ ಪ್ರದೇಶದ ಮಿರ್ಜಾಪುರದಿಂದ ಸಿಕ್ಕಿಬಿದ್ದಿದ್ದರು. ಇದೀಗ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮದುವೆಯಾಗುವಂತೆ ಒತ್ತಾಯಿಸಿದ್ದ ಪ್ರಿಯಕರ
ಮೌಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹೃದಯ ವಿದ್ರಾವಕ ವಿಡಿಯೋದಲ್ಲಿ ಕುರಿತಂತೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್, ಯುವಕ ಮತ್ತು ಯುವತಿ ಪರಸ್ಪರ ದೀರ್ಘಕಾಲ ಸಂಪರ್ಕದಲ್ಲಿದ್ದರು. ಯುವಕ ಯುವತಿಯನ್ನು ಮದುವೆಯಾಗಲು ಮತ್ತು ಅವಳೊಂದಿಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದನು. ಆದರೆ ಹುಡುಗಿಯ ಕುಟುಂಬ ಸದಸ್ಯರು ಇದಕ್ಕೆ ನಿರಾಕರಿಸಿದರು. ಇದರಿಂದಾಗಿ ಆಕೆ ಸಹ ಮದುವೆಯಾಗುವುದಕ್ಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಯುವಕ ಗೆಳತಿಯನ್ನು ಮನಬಂದಂತೆ ಥಳಿಸಿದ್ದಾನೆ.
ವಿಡಿಯೋ ವೈರಲ್ ಮಾಡಿದ ಪಂಕಜ್ ತ್ರಿಪಾಠಿ ಸ್ನೇಹಿತ
ಗೆಳತಿಯೊಂದಿಗೆ ನಡೆದ ಜಗಳದ ವಿಡಿಯೋವನ್ನು ಆತನ ಸ್ನೇಹಿತರೊಬ್ಬನು ಮಾಡಿದ್ದನು. ವಿಡಿಯೋ ಡಿಲೀಟ್ ಮಾಡುವಂತೆ ಪಂಕಜ್ ಹೇಳಿದ್ದರೂ ಸ್ನೇಹಿತ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದನು. ವೀಡಿಯೋ ವೈರಲ್ ಆದ ನಂತರ ಈ ವಿಷಯ ಪೊಲೀಸರಿಗೆ ತಿಳಿದುಬಂದಿತ್ತು. ಯುವಕ ಮೊದಲು ಗೆಳತಿಗೆ ಬಲವಾಗಿ ಕಪಾಳಮೋಕ್ಷ ಮಾಡಿದ್ದು, ಬಳಿಕ ಆಕೆಯನ್ನು ನೆಲದ ಮೇಲೆ ಎಸೆದು ಒದ್ದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯುವಕನ ಹೊಡೆತಕ್ಕೆ ಗೆಳತಿ ಪ್ರಜ್ಞೆ ತಪ್ಪಿದ್ದಾಳೆ. ನಂತರ ಆಕೆಯನ್ನು ಅಲ್ಲೆ ಬಿಟ್ಟು ಇಬ್ಬರು ಪರಾರಿಯಾಗಿದ್ದಾರೆ. ಗಂಟೆಗಳ ಕಾಲ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬಿದ್ದಿದ್ದಳು. ನಂತರ ಸ್ಥಳಕ್ಕಾಗಮಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
#MadhyaPradesh में एक लड़के ने एक लड़की को बहुत बेहरमी से म|रा पीट| !
— Sadaf Afreen صدف (@s_afreen7) December 24, 2022
किस तरह से लोगो केे अंदर डर-भय खत्म हो गया है!
कैसे हैवान बन गए हैं लोग और वो शख्स जो वीडियो रिकॉर्ड कर रहा है, हद्द बेशरम है...रोक भी नहीं रहा उसे!https://t.co/pEQdWUD9FE pic.twitter.com/7Ohal3s4P3