ಕಲ್ಲು ಕ್ವಾರಿಗೆ ಬಿದ್ದ ಕಾರು: ಒಂದೇ ಕುಟುಂಬದ ನಾಲ್ವರು ನೀರು ಪಾಲು, ಈಜಿ ದಡ ಸೇರಿದ 15 ವರ್ಷದ ಬಾಲಕಿ!

ಸಾರಂಗಢ-ಬಿಲೈಗಢ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು ದೇವಸ್ಥಾನದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಸರಗಢ-ತಿಮ್ರಾಲ್ಗಾ ಮುಖ್ಯ ರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿ ನೀರು ತುಂಬಿದ ಕಲ್ಲು ಕ್ವಾರಿಗೆ ಕಾರು ಬಿದ್ದಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ರಾಯಗಢ(ಛತ್ತೀಸ್‌ಗಢ): ಸಾರಂಗಢ-ಬಿಲೈಗಢ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು ದೇವಸ್ಥಾನದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಸರಗಢ-ತಿಮ್ರಾಲ್ಗಾ ಮುಖ್ಯ ರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿ ನೀರು ತುಂಬಿದ ಕಲ್ಲು ಕ್ವಾರಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು 15 ವರ್ಷದ ಬಾಲಕಿ ಹೇಗೋ ಈಜಿಕೊಂಡು ಹೊರಬಂದು ಜೀವ ಉಳಿಸಿಕೊಂಡಿದ್ದಾಳೆ.

ಮಾಹಿತಿಯ ಪ್ರಕಾರ, ತಿಮ್ರಾಲ್ಗಾದ ಸರಪಂಚ್ ಮೀನು ಪಟೇಲ್ ಅವರ ಪತಿ ಮಹೇಂದ್ರ ಪಟೇಲ್ ಅವರು ಗುರುವಾರ ತಮ್ಮ ಪೋಷಕರು ಹಾಗೂ 15 ವರ್ಷದ ಮಗಳು ರೋಶ್ನಿ ಅವರೊಂದಿಗೆ ಒಡಿಶಾ ಕಡೆಗೆ ಹೋಗಿದ್ದರು. ಗ್ರಾಮದ ಬಳಿ ತಡರಾತ್ರಿ ವಾಪಸ್ ಬರುತ್ತಿದ್ದಾಗ ಕಾಮಗಾರಿ ನಿಮಿತ್ತ ನೀರು ತುಂಬಿದ್ದ ಕಲ್ಲು ಕ್ವಾರಿಗೆ ಹೋಗಿದ್ದರು. 

ಕಾರು ರಿವರ್ಸ್ ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ನೀರು ತುಂಬಿದ್ದ ಕಲ್ಲು ಕ್ವಾರಿಗೆ ಬಿದ್ದಿದೆ. ಈ ಘಟನೆಯ ನಂತರ ಸರಪಂಚ ಮಗಳು ಕಾರಿನಿಂದ ಇಳಿದಿದ್ದರಿಂದ ಬದುಕುಳಿದಿದ್ದಾಳೆ. ಉಳಿದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಾರಂಗಢ ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ಹೊರ ತೆಗೆಯುತ್ತಿದ್ದಾರೆ. ಸದ್ಯ ರಾಯಗಢದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ.

ಸರಪಂಚನ ಮಾವನ ಶವ ಹೊರಭಾಗದಲ್ಲಿ ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದ್ದು, ಅದನ್ನು ಹೊರತೆಗೆಯಲಾಗಿದೆ. ಉಳಿದ ಮೂವರು ಕಾರಿನಲ್ಲಿಯೇ ಸಿಲುಕಿದ್ದಾರೆ. ಘಟನೆ ಕುರಿತು ಮಾಹಿತಿ ಲಭಿಸಿದ ತಕ್ಷಣ ಎಸ್ಪಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com