ತಮಿಳುನಾಡು: ಮನೆಯಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿ ಸ್ಫೋಟ; ನಾಲ್ವರು ಸಾವು, ಏಳು ಮಂದಿಗೆ ಗಾಯ
ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಶನಿವಾರ ತಮ್ಮ ಮನೆಯಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿ ಸ್ಫೋಟಗೊಂಡು ವೃದ್ಧೆ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ. ಸ್ಫೋಟದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Published: 31st December 2022 11:09 AM | Last Updated: 31st December 2022 01:18 PM | A+A A-

ಪಟಾಕಿ ಮತ್ತು ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹಾನಿಗೊಂಡಿರುವ ಮನೆಗಳು
ಚೆನ್ನೈ: ಧರ್ಮಪುರಿ: ಶನಿವಾರ ಮುಂಜಾನೆ ಮೋಹನೂರಿನ ನಿವಾಸದಲ್ಲಿ ಪಟಾಕಿ ಮತ್ತು ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ನಾಲ್ವರು ಸಾವಿಗೀಡಾಗಿದ್ದು, ಏಳು ಜನರು ಗಾಯಗೊಂಡಿದ್ದಾರೆ. ಸ್ಫೋಟದ ಪರಿಣಾಮ ಸಮೀಪದ 16 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅಗ್ನಿಶಾಮಕ ಇಲಾಖೆ ಮೂಲಗಳು ತಿಳಿಸಿವೆ.
ಮೋಹನೂರಿನ ಬಳಿ ಪಟಾಕಿ ಅಂಗಡಿ ನಡೆಸುತ್ತಿರುವ ತಿಲ್ಲೈಕ್ ಕುಮಾರ್ (73) ಅವರು ಹೊಸ ವರ್ಷಾಚರಣೆ ಅಂಗವಾಗಿ ಸೂಕ್ತ ಸುರಕ್ಷತೆಯಿಲ್ಲದೆ ತಮ್ಮ ನಿವಾಸದಲ್ಲಿ ಪಟಾಕಿಗಳನ್ನು ಮಾರಾಟಕ್ಕಾಗಿ ಸಂಗ್ರಹಿಸಿದ್ದರು.
ಬೆಳಗಿನ ಜಾವ 3 ಗಂಟೆ ಸುಮಾರಿಗೆ, ತಿಲ್ಲೈಕ್ ಮತ್ತು ಅವರ ಕುಟುಂಬದವರು ನಿದ್ರಿಸುತ್ತಿದ್ದಾಗ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಮತ್ತು ತಕ್ಷಣವೇ ಬೆಂಕಿ ಎಲ್ಲೆಡೆ ಆವರಿಸಿದೆ. ಇದು ತರುವಾಯ ಅಡುಗೆ ಅನಿಲ ಸಿಲಿಂಡರ್ ಸೋರಿಕೆಗೆ ಕಾರಣವಾಯಿತು ಮತ್ತು ದೊಡ್ಡ ಸ್ಫೋಟ ಸಂಭವಿಸಿತು.
ಅಗ್ನಿಶಾಮಕ ದಳದವರು ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಮಾಡಿ ಬೆಂಕಿ ನಂದಿಸಿದ್ದಾರೆ.
ಪರವಾನಗಿ ಹೊಂದಿರುವ ತಿಲ್ಲೈ ಕುಮಾರ್ (37) ಎಂಬಾತ ತನ್ನ ಮನೆಯಲ್ಲಿ ಪಟಾಕಿಗಳನ್ನು ಏಕೆ ದಾಸ್ತಾನು ಮಾಡಿದ್ದನು ಎಂಬುದು ಸ್ಪಷ್ಟವಾಗಿಲ್ಲ. ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ತಿಲ್ಲೈ ಕುಮಾರ್, ಅವರ ತಾಯಿ ಸೆಲ್ವಿ (57) ಮತ್ತು ಪತ್ನಿ ಪ್ರಿಯಾ (27) ಸಾವಿಗೀಡಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಧುರೈ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಐವರು ಸಾವು; 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸ್ಟಾಲಿನ್
ಕುಮಾರ್ ಅವರ 4 ವರ್ಷದ ಮಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಅವರ ನೆರೆಹೊರೆಯವರಾದ 70 ವರ್ಷದ ಮಹಿಳೆ ಕೂಡ ಸ್ಫೋಟದ ಪ್ರಭಾವದಿಂದ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಫೋಟದಿಂದ ಸುಟ್ಟಗಾಯ ಅಥವಾ ಗಾಯಗಳಾಗಿರುವ ನಾಲ್ವರನ್ನು ಚಿಕಿತ್ಸೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ಶಾರ್ಟ್-ಸರ್ಕ್ಯೂಟ್ ಅಥವಾ ನಂದಿಸದ ಮೇಣದಬತ್ತಿಯು ಸ್ಫೋಟಕ್ಕೆ ಕಾರಣವಾಗಬಹುದೇ ಎಂದು ತನಿಖೆ ನಡೆಸುತ್ತಿದೆ ಎಂದು ಹೇಳಿದರು.