ಕೆಮ್ಮಿನ ಸಿರಪ್ ನಿಂದ ಉಜ್ಬೇಕಿಸ್ತಾನ ಮಕ್ಕಳ ಸಾವು; ವಿವರಣೆ ನೀಡದ ಮ್ಯಾರಿಯೊನ್ ಬಯೊಟೆಕ್ ಸಂಸ್ಥೆ ಅಮಾನತು
ಕೆಮ್ಮಿನ ಸಿರಪ್ ನಿಂದ ಉಜ್ಬೇಕಿಸ್ತಾನ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡದ ಮ್ಯಾರಿಯೊನ್ ಬಯೊಟೆಕ್ ಸಂಸ್ಥೆ ಸದಸ್ಯತ್ವವನ್ನು ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿ (ಫಾರ್ಮ್‌ಎಕ್ಸಿಲ್) ಅಮಾನತು ಮಾಡಿದೆ.
Published: 31st December 2022 12:40 PM | Last Updated: 31st December 2022 12:40 PM | A+A A-

ಮರಿಯನ್ ಬಯೋಟೆಕ್
ಹೈದರಾಬಾದ್: ಕೆಮ್ಮಿನ ಸಿರಪ್ ನಿಂದ ಉಜ್ಬೇಕಿಸ್ತಾನ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡದ ಮ್ಯಾರಿಯೊನ್ ಬಯೊಟೆಕ್ ಸಂಸ್ಥೆ ಸದಸ್ಯತ್ವವನ್ನು ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿ (ಫಾರ್ಮ್‌ಎಕ್ಸಿಲ್) ಅಮಾನತು ಮಾಡಿದೆ.
ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿ (ಫಾರ್ಮ್‌ಎಕ್ಸಿಲ್) ಮ್ಯಾರಿಯೊನ್ ಬಯೊಟೆಕ್‌ನ ಸದಸ್ಯತ್ವವನ್ನು ಅಮಾನತಿನಲ್ಲಿರಿಸಿದೆ. ಮ್ಯಾರಿಯೊನ್ ಬಯೊಟೆಕ್‌ನ ಔಷಧ ನೀಡಲಾಗಿದ್ದ ಉಜ್ಬೇಕಿಸ್ತಾನದ 18 ಮಕ್ಕಳು ಮೃತಪಟ್ಟ ಬಗ್ಗೆ ವಿವರಣೆ ನೀಡದೇ ಇದ್ದುದಕ್ಕೆ ಮಂಡಳಿಯು ಈ ಕ್ರಮ ತೆಗೆದುಕೊಂಡಿದೆ.
ಇದನ್ನೂ ಓದಿ: ಭಾರತ ಸಿದ್ಧಪಡಿಸಿದ ಕೆಮ್ಮಿನ ಸಿರಪ್‌ನಿಂದ 18 ಮಕ್ಕಳ ಸಾವು: ಗ್ಯಾಂಬಿಯಾ ಬಳಿಕ ಇದೀಗ ಉಜ್ಬೇಕಿಸ್ತಾನದಿಂದ ಆರೋಪ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ಕೋರಿ ಕಂಪನಿಗೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್‌ಗೆ ಉತ್ತರಿಸದ ಕಾರಣ ಕಂಪನಿತ ಸದಸ್ಯತ್ವ ವನ್ನು ಅಮಾನತು ಮಾಡಲಾಗಿದೆ. ಅಂತೆಯೇ ಅಮಾನತು ಹಿಂತೆಗೆದುಕೊಳ್ಳುವವರೆಗೆ ಡಾಕ್ (ವಾಣಿಜ್ಯ ಇಲಾಖೆ) ಫಾರ್ಮೆಕ್ಸಿಲ್ ಮೂಲಕ ನೀಡುವ ಪ್ರೋತ್ಸಾಹವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎನ್ನಲಾದ ಸಿರಪ್ ಗಳು ಭಾರತದಲ್ಲಿ ಮಾರಾಟವಾಗಿಲ್ಲ: ಕೇಂದ್ರ ಸರ್ಕಾರ
ನೋಯ್ಡಾ ಮೂಲದ ಮರಿಯನ್ ಬಯೋಟೆಕ್, ಅದರ ಕೆಮ್ಮಿನ ಸಿರಪ್ ಸೇವಿಸಿದ ನಂತರ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು. ಬಳಿಕ ಅದನ್ನು ವೀಕ್ಷಣೆಯಲ್ಲಿಡಲಾಗಿತ್ತು. ಮರಿಯನ್ ಬಯೋಟೆಕ್ ರಿಯಲ್ ಎಸ್ಟೇಟ್ ಮತ್ತು ಆಸ್ಪತ್ರೆಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಎಮೆನಾಕ್ಸ್ ಗುಂಪಿನ ಪ್ರಮುಖ ಸಂಸ್ಥೆಯಾಗಿದೆ. ಮರಿಯನ್ ಬಯೋಟೆಕ್ 2010 ರಿಂದ ಸಣ್ಣ-ಪ್ರಮಾಣದ ತಯಾರಕರಾಗಿ ಮತ್ತು 2016 ರಿಂದ ವ್ಯಾಪಾರಿ ರಫ್ತುದಾರರಾಗಿ ಫಾರ್ಮೆಕ್ಸಿಲ್‌ನೊಂದಿಗೆ ನೋಂದಾಯಿಸಲಾಗಿತ್ತು.