ಶಿಂಜೋ ಅಬೆ ಸಾವು: ಒಂದು ದಿನ ಶೋಕಾಚರಣೆಗೆ ಪ್ರಧಾನಿ ಮೋದಿ ಕರೆ

ಗುಂಡೇಟಿಗೆ ತುತ್ತಾಗಿ ಪ್ರಾಣ ತೊರೆದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಗೌರವಾರ್ಥ ನಾಳೆ ದೇಶಾದ್ಯಂತ ಒಂದು ದಿನ ಶೋಕಾಚರಣೆ ನಡೆಸುವಂತೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಶಿಂಜೋ ಅಬೆ
ಪ್ರಧಾನಿ ಮೋದಿ ಮತ್ತು ಶಿಂಜೋ ಅಬೆ

ನವದೆಹಲಿ: ಗುಂಡೇಟಿಗೆ ತುತ್ತಾಗಿ ಪ್ರಾಣ ತೊರೆದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಗೌರವಾರ್ಥ ನಾಳೆ ದೇಶಾದ್ಯಂತ ಒಂದು ದಿನ ಶೋಕಾಚರಣೆ ನಡೆಸುವಂತೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರಾದ #ಶಿಂಜೋಅಬೆ ಅವರ ದುರಂತ ನಿಧನದಿಂದ ನಾನು ಪದಗಳಿಗೆ ಮೀರಿ ಆಘಾತ ಮತ್ತು ದುಃಖಿತನಾಗಿದ್ದೇನೆ. "ಭಾರತ-ಜಪಾನ್ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಮಟ್ಟಕ್ಕೆ ಏರಿಸಲು ಅಬೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇಂದು, ಇಡೀ ಭಾರತವು ಜಪಾನ್‌ನೊಂದಿಗೆ ದುಃಖಿಸುತ್ತದೆ ಮತ್ತು ಈ ಕಷ್ಟದ ಕ್ಷಣದಲ್ಲಿ ನಾವು ನಮ್ಮ ಜಪಾನಿನ ಸಹೋದರರು ಮತ್ತು ಸಹೋದರಿಯರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನು ಅಬೆ ಸಾವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಕೂಡ ಸಂತಾಪ ಸೂಚಿಸಿದ್ದು, 'ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ ಆಪ್ತ ಸ್ನೇಹಿತನನ್ನು ಭಾರತ ಕಳೆದುಕೊಂಡಿದೆ" ಎಂದು ಟ್ವೀಟ್ ಮಾಡಿದ್ದಾರೆ.

'ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಹತ್ಯೆಯಿಂದ ತೀವ್ರ ದುಃಖವಾಗಿದೆ. ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಶ್ರದ್ಧೆಯಿಂದ ಶ್ರಮಿಸಿದ ಆತ್ಮೀಯ ಸ್ನೇಹಿತನನ್ನು ಭಾರತ ಇಂದು ಕಳೆದುಕೊಂಡಿದೆ. 2019 ರಲ್ಲಿ ಜಪಾನ್‌ಗೆ ನನ್ನ ಭೇಟಿಯ ಸಂದರ್ಭದಲ್ಲಿ ನಾನು ಅಬೆ ಅವರನ್ನು ಭೇಟಿಯಾದೆ. ಅವರು ಸುರಕ್ಷಿತ ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸುವ ದೃಷ್ಟಿಕೋನವನ್ನು ಹೊಂದಿರುವ ಸ್ಪೂರ್ತಿದಾಯಕ ನಾಯಕ ಎಂದು ನಾನು ಕಂಡುಕೊಂಡೆ. ಅವರ ರಾಜನೀತಿವಂತಿಕೆಗಾಗಿ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ನಮ್ಮ ಪ್ರಾರ್ಥನೆಗಳು ಮತ್ತು ಆಲೋಚನೆಗಳು ದುಃಖತಪ್ತ ಕುಟುಂಬದೊಂದಿಗೆ ಇವೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com