ಜನಸಂಖ್ಯಾ ಅಸಮತೋಲನ ಸಂಭವಿಸಲು ಅವಕಾಶ ನೀಡಬಾರದು: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವು ಯಶಸ್ವಿಯಾಗಿ ಮುಂದುವರಿಯಬೇಕು ಆದರೆ ಅದೇ ಸಮಯದಲ್ಲಿ ಜನಸಂಖ್ಯಾ ಅಸಮತೋಲನ ಸಂಭವಿಸಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವು ಯಶಸ್ವಿಯಾಗಿ ಮುಂದುವರಿಯಬೇಕು ಆದರೆ ಅದೇ ಸಮಯದಲ್ಲಿ ಜನಸಂಖ್ಯಾ ಅಸಮತೋಲನ ಸಂಭವಿಸಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಜನಸಂಖ್ಯೆ ನಿಯಂತ್ರಣ ದಿನಾಚರಣೆಯಲ್ಲಿ ಮಾತನಾಡಿದ ಅವರು ನಾವು ಕುಟುಂಬ ಯೋಜನೆ/ಜನಸಂಖ್ಯಾ ಸ್ಥಿರೀಕರಣದ ಬಗ್ಗೆ ಮಾತನಾಡುವಾಗ, ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವು ಯಶಸ್ವಿಯಾಗಿ ಮುಂದುವರಿಯಬೇಕು. ಆದರೆ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದೇನೆಂದರೆ ಅದೇ ಸಮಯದಲ್ಲಿ ಜನಸಂಖ್ಯೆಯ ಅಸಮತೋಲನದ ಪರಿಸ್ಥಿತಿ ಸಂಭವಿಸಲು ಅವಕಾಶ ನೀಡಬಾರದು ಎಂದರು.

ಜನಸಂಖ್ಯಾ ಸ್ಥಿರೀಕರಣದ ಜಾಗೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕಳೆದ ಐದು ದಶಕಗಳಿಂದ ನಡೆಸಲಾಗುತ್ತಿದೆ ಎಂದು ಹೇಳಿದರು. ಒಂದು ಪ್ರಮಾಣದಲ್ಲಿ ಜನಸಂಖ್ಯೆಯು ಸಮಾಜದ ಸಾಧನೆಯಾಗಿದೆ. ಆದರೆ ಸಮಾಜವು ಆರೋಗ್ಯವಾಗಿ ಮತ್ತು ರೋಗ ಮುಕ್ತವಾಗಿದ್ದಾಗ ಮಾತ್ರ ಇದು ಸಾಧನೆಯಾಗಿ ಉಳಿಯುತ್ತದೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಎಂದು ಹೇಳಿದ ಯೋಗಿ ಆದಿತ್ಯನಾಥ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪ್ರಧಾನರು, ಶಿಕ್ಷಕರು ಮತ್ತು ಇತರರು ಆರೋಗ್ಯ ಇಲಾಖೆಯೊಂದಿಗೆ ಒಟ್ಟಾಗಿ ಕೆಲಸ ಮಾಡಬಹುದು. ಈ ದಿಸೆಯಲ್ಲಿ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದರು.

ನಾವು ನುರಿತ ಮಾನವಶಕ್ತಿಯನ್ನು ಹೊಂದಿದ್ದರೆ, ಅದು ಸಮಾಜಕ್ಕೆ ಒಂದು ಸಾಧನೆಯಾಗಿದೆ. ಆದರೆ ರೋಗಗಳು, ಸಂಪನ್ಮೂಲಗಳ ಕೊರತೆ ಮತ್ತು ಅಸ್ವಸ್ಥತೆ ಇರುವಲ್ಲಿ, ಜನಸಂಖ್ಯಾ ಸ್ಫೋಟವು ತನ್ನದೇ ಆದ ಸವಾಲಾಗುತ್ತದೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com