ಭಾರತಕ್ಕೆ ಐತಿಹಾಸಿಕ ದಿನ: ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ 'ವಿಕ್ರಾಂತ್' ನೌಕಾಪಡೆಗೆ ಸೇರ್ಪಡೆ!

ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಇದೇ ಸಮಯದಲ್ಲಿ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS 'ವಿಕ್ರಾಂತ್' ಅನ್ನು ಗುರುವಾರ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. 
ಐಎನ್ಎಸ್ ವಿಕ್ರಾಂತ್
ಐಎನ್ಎಸ್ ವಿಕ್ರಾಂತ್
Updated on

ನವದೆಹಲಿ: ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಇದೇ ಸಮಯದಲ್ಲಿ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS 'ವಿಕ್ರಾಂತ್' ಅನ್ನು ಗುರುವಾರ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. 

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಯನ್ನು (IAC) ಗುರುವಾರ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ. ನೌಕಾಪಡೆಯ ಆಂತರಿಕ ನೌಕಾ ವಿನ್ಯಾಸ ನಿರ್ದೇಶನಾಲಯದಿಂದ ವಿನ್ಯಾಸಗೊಳಿಸಲ್ಪಟ್ಟ ಮತ್ತು CSL ನಿರ್ಮಿಸಿದ ವಿಮಾನವಾಹಕ ನೌಕೆಗೆ 1971ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಭಾರತದ ಮೊದಲ ವಿಮಾನವಾಹಕ ನೌಕೆ INS ವಿಕ್ರಾಂತ್ ಹೆಸರನ್ನೇ ನಾಮಕರಣ ಮಾಡಲಾಗಿದೆ. ವಿಕ್ರಾಂತ್ ವಿತರಣೆಯೊಂದಿಗೆ, ಭಾರತವು ಸ್ಥಳೀಯವಾಗಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪನ್ನು ಸೇರಿಕೊಂಡಿದೆ.

INS ವಿಕ್ರಾಂತ್ ನಿರ್ಮಾಣವನ್ನು 2009ರ ಫೆಬ್ರವರಿ 28ರಿಂದ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಪ್ರಾರಂಭಿಸಲಾಯಿತು. 2020ರ ಡಿಸೆಂಬರ್ ನಲ್ಲಿ ಸಿಎಸ್ಎಲ್ ನಡೆಸಿದ ಜಲಾನಯನ ಪ್ರಯೋಗಗಳಲ್ಲಿ ವಿಮಾನವಾಹಕ ನೌಕೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. 40 ಸಾವಿರ ಟನ್ ತೂಕದ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ IAC ವಿಕ್ರಾಂತ್ ಎಲ್ಲಾ ನಾಲ್ಕು ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲ ಪರೀಕ್ಷೆಯು ಕಳೆದ ವರ್ಷ ಆಗಸ್ಟ್ 21ರಂದು ಪೂರ್ಣಗೊಂಡಿತು. ಎರಡನೆಯದು ಅಕ್ಟೋಬರ್ 21ರಂದು ಮತ್ತು ಮೂರನೇ ಪರೀಕ್ಷೆಯು ಈ ವರ್ಷ ಜನವರಿ 22 ರಂದು ಪೂರ್ಣಗೊಂಡಿತು. IAC 'ವಿಕ್ರಾಂತ್' ನ ಕೊನೆಯ ಮತ್ತು ನಾಲ್ಕನೇ ಸಮುದ್ರ ಪ್ರಯೋಗಗಳು ಮೇ ತಿಂಗಳಲ್ಲಿ ಪ್ರಾರಂಭವಾಗಿದ್ದು ಇದು ಈ ತಿಂಗಳ ಆರಂಭದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

ವಿಕ್ರಾಂತ್ ವಿಮಾನವಾಹಕ ನೌಕೆ ಭಾರತೀಯ ನೌಕಾಪಡೆಗೆ ಸೇರುವ ಮೂಲಕ ಮುಂಬರುವ ವರ್ಷಗಳಲ್ಲಿ ವಿಶ್ವದ ಅಗ್ರ ಮೂರು ನೌಕಾಪಡೆಗಳಲ್ಲಿ ಒಂದಾಗಲಿದೆ. ಈ ಸ್ವದೇಶಿ ವಿಮಾನವಾಹಕ ನೌಕೆಯು 'ಸ್ವಾವಲಂಬಿ ಭಾರತ'ದ ಉಜ್ವಲ ಉದಾಹರಣೆಯಾಗಿದೆ. ಇದರ ನಿರ್ಮಾಣಕ್ಕೆ 20 ಸಾವಿರ ಕೋಟಿ ರೂ. ಖರ್ಚಾಗಿದೆ. ನೇವಲ್ ಡಿಸೈನ್ ಡೈರೆಕ್ಟರೇಟ್ ಇದನ್ನು 3D ವರ್ಚುವಲ್ ರಿಯಾಲಿಟಿ ಮಾದರಿಗಳು ಮತ್ತು ಸುಧಾರಿತ ಎಂಜಿನಿಯರಿಂಗ್ ಸಾಫ್ಟ್‌ವೇರ್ ಬಳಸಿ ವಿನ್ಯಾಸಗೊಳಿಸಿದೆ.

ಈ ಆಧುನಿಕ ವಿಮಾನವಾಹಕ ನೌಕೆಯ ನಿರ್ಮಾಣದ ಸಮಯದಲ್ಲಿ ಇದರ ತೂಕವನ್ನು 37 ಸಾವಿರದ 500 ಟನ್‌ಗಳಿಂದ 40 ಸಾವಿರ ಟನ್‌ಗಳಿಗೆ ಹೆಚ್ಚಿಸಲಾಯಿತು. ಅಂತೆಯೇ ಹಡಗಿನ ಉದ್ದವು 252ಮೀ(826.772 ft)ನಿಂದ 262ಮೀ(859.58 ft)ಕ್ಕೆ ಏರಿತು. ಇದು 60 ಮೀಟರ್ (196.85 ಅಡಿ) ಅಗಲವಿದೆ. ಈ ಹಡಗು ನಾಲ್ಕು ಗ್ಯಾಸ್ ಟರ್ಬೈನ್‌ಗಳು ಒಟ್ಟು 88 ಮೆಗಾವ್ಯಾಟ್ ಶಕ್ತಿಯೊಂದಿಗೆ ನಡೆಯುತ್ತದೆ. 28 ಗಂಟೆಗಳ ಗರಿಷ್ಠ ವೇಗವನ್ನು ಹೊಂದಿದೆ. ಇದು MiG-29K ಫೈಟರ್ ಜೆಟ್‌ಗಳು, Kamov-31, MH-60R ಬಹು-ಪಾತ್ರ ಹೆಲಿಕಾಪ್ಟರ್‌ಗಳ ಜೊತೆಗೆ ಸ್ಥಳೀಯವಾಗಿ ನಿರ್ಮಿಸಲಾದ ಸುಧಾರಿತ ಲಘು ಹೆಲಿಕಾಪ್ಟರ್‌ಗಳು (ALH) ಮತ್ತು ಲಘು ಯುದ್ಧ ವಿಮಾನ (LCA) ಸೇರಿದಂತೆ ಸುಮಾರು ಮೂವತ್ತು ವಿಮಾನಗಳನ್ನು ಸಾಗಿಸಬಲ್ಲದು. ಇದು Kamov Ka-31 ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಅನ್ನು ಅಳವಡಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com