'ಅಗ್ನಿಪಥ್' ಯೋಜನೆ ವಿರುದ್ಧ ಪ್ರತಿಭಟನೆ: ಬಿಹಾರದಲ್ಲಿ ರೈಲಿಗೆ ಬೆಂಕಿ, ಬಿಜೆಪಿ ಶಾಸಕನಿಗೆ ಗಾಯ

ಕೇಂದ್ರ ಸರ್ಕಾರ ಮತ್ತೊಂದು ಯೋಜನೆ ವಿವಾದಕ್ಕೀಡಾಗಿದ್ದು, ಸೇನಾ ನೇಮಕಾತಿ ಕುರಿತ 'ಅಗ್ನಿಪಥ್' ಯೋಜನೆಗೆ ಬಿಹಾರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಬೀದಿಗಿಳಿದು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ರೈಲಿಗೆ ಬೆಂಕಿ ಹಚ್ಚಿದ್ದಾರೆ.

Published: 16th June 2022 03:47 PM  |   Last Updated: 16th June 2022 04:36 PM   |  A+A-


Protests sparked by Centre's Agnipath scheme

ಬಿಹಾರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಸೇನಾಕಾಂಕ್ಷಿಗಳ ಪ್ರತಿಭಟನೆ

ANI

ನವದೆಹಲಿ: ಕೇಂದ್ರ ಸರ್ಕಾರ ಮತ್ತೊಂದು ಯೋಜನೆ ವಿವಾದಕ್ಕೀಡಾಗಿದ್ದು, ಸೇನಾ ನೇಮಕಾತಿ ಕುರಿತ 'ಅಗ್ನಿಪಥ್' ಯೋಜನೆಗೆ ಬಿಹಾರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಬೀದಿಗಿಳಿದು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ರೈಲಿಗೆ ಬೆಂಕಿ ಹಚ್ಚಿದ್ದಾರೆ.

ಹೌದು.. ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನೆಗೆ 'ಅಗ್ನಿವೀರರ' (ಯೋಧರು) ನೇಮಕಾತಿ ನಡೆಸುವುದಾಗಿ ಕೇಂದ್ರ ಸರ್ಕಾರವು ಎರಡು ದಿನಗಳ ಹಿಂದಷ್ಟೇ ಪ್ರಕಟಿಸಿತ್ತು. ಆದರೆ ಈ ಯೋಜನೆಗೆ ಬಿಹಾರ ಮತ್ತು ರಾಜಸ್ಥಾನದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಉದ್ಯೋಗ ಭದ್ರತೆ ಮತ್ತು ಪಿಂಚಣಿ ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಉದ್ಯೋಗಾಕಾಂಕ್ಷಿಗಳು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ದೇಶದ ಸಶಸ್ತ್ರ ಪಡೆಗಳು ತಾರುಣ್ಯಯುತವಾಗಿ ಇರುವಂತೆ ನೋಡಿಕೊಳ್ಳುವುದು ಹೊಸ ಯೋಜನೆಯ ಉದ್ದೇಶ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ನಾಲ್ಕು ವರ್ಷಗಳ ಕರ್ತವ್ಯ ಅವಧಿಯ ಮಿತಿ ಮತ್ತು ಬಳಿಕ ಶೇಕಡ 25ರಷ್ಟು ಯೋಧರಿಗೆ ಮಾತ್ರ ಪೂರ್ಣಾವಧಿ ಸೇವೆಗೆ ಅವಕಾಶ ಕಲ್ಪಿಸುವ ಕ್ರಮದ ವಿರುದ್ಧ ಸೇನೆಗೆ ಸೇರುವ ಹಂಬಲವಿರುವ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಾಲ್ಕು ವರ್ಷಗಳ ಕರ್ತವ್ಯದ ಬಳಿಕ ಪ್ರತಿ ಅಗ್ನಿವೀರನಿಗೆ ಸುಮಾರು 11.71 ಲಕ್ಷ ರೂ ನಿಧಿಯು ದೊರೆಯಲಿದೆ. ಅವರಿಗೆ ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಮೊದಲ ವರ್ಷದಲ್ಲಿ 46 ಸಾವಿರ ಯುವಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ಆದರೆ ನಾಲ್ಕು ವರ್ಷದ ನಂತರ ಕಾಯಂ ನೇಮಕಾತಿಯಲ್ಲಿ ಅವಕಾಶ ಪಡೆಯಲು ಸಾಧ್ಯವಾಗದಿದ್ದರೆ, ಅವರ ಭವಿಷ್ಯದ ಗತಿ ಏನು?' ಎಂದು ಪ್ರಶ್ನಿಸಿರುವ ಉದ್ಯೋಗಾಕಾಂಕ್ಷಿಗಳು, ಸರ್ಕಾರದ ಈ ಯೋಜನೆಯನ್ನು ಟೀಕಿಸಿದ್ದಾರೆ. 

ಇದನ್ನೂ ಓದಿ: ನಿರುದ್ಯೋಗಿಗಳ ಅಗ್ನಿಪರೀಕ್ಷೆ ಬೇಡ: ಪ್ರಧಾನಿಗೆ ರಾಹುಲ್ ಒತ್ತಾಯ

ಬಿಜೆಪಿ ಶಾಸಕನ ಮೇಲೆ ಹಲ್ಲೆ
ಇನ್ನು ನಾವಡದಲ್ಲಿ ನ್ಯಾಯಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕಿ ಅರುಣಾದೇವಿ ಅವರ ವಾಹನದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಶಾಸಕರು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕರು, 'ನನ್ನ ಕಾರಿನ ಮೇಲೆ ಪಕ್ಷದ ಧ್ವಜವನ್ನು ಅಳವಡಿಸಿದ್ದನ್ನು ನೋಡಿದ ಪ್ರತಿಭಟನಾಕಾರರು ಪ್ರಚೋದನೆಗೆ ಒಳಗಾಗಿದ್ದಾರೆಂದು ತೋರುತ್ತದೆ, ಅವರು ಅದನ್ನು ಹರಿದು ಹಾಕಿದರು. ನನ್ನ ಚಾಲಕ, ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಇಬ್ಬರಿಗೂ ಗಾಯಗಳಾಗಿವೆ. ಪೊಲೀಸ್ ದೂರು ದಾಖಲಿಸಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ.

ರೈಲಿಗೆ ಬೆಂಕಿ
ಬಿಹಾರದ ಆರಾ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದ್ದು, ಯುವಜನರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ರೈಲಿನ ಬೋಗಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಭುವಾ ಮತ್ತು ಛಾಪ್ರಾ ನಿಲ್ದಾಣಗಳಲ್ಲಿ ಸ್ಥಾಯಿ ಬೋಗಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವೆಡೆ ಕಂಪಾರ್ಟ್‌ಮೆಂಟ್‌ಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರಿಂದ ರೈಲ್ವೇ ಆಸ್ತಿಗೆ ಹಾನಿಯಾಗಿದೆ. 

ಹಾಜಿಪುರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಈಸ್ಟ್ ಸೆಂಟ್ರಲ್ ರೈಲ್ವೇ ವಲಯವು ರೈಲು ಸಂಚಾರಕ್ಕೆ ಭಾರಿ ಅಡಚಣೆ ಕುರಿತು ವರದಿ ಮಾಡಿದೆ. ಜನನಿಬಿಡ ಮಾರ್ಗಗಳಾದ ಪಾಟ್ನಾ-ಗಯಾ, ಬರೌನಿ-ಕತಿಹಾರ್ ಮತ್ತು ದಾನಪುರ್-ಡಿಡಿಯು ಸ್ಟಿರ್‌ನಿಂದ ಹೆಚ್ಚು ಹಾನಿ ವರದಿಯಾಗಿದೆ. ಈ ಕುರಿತು ಬಕ್ಸಾರ್‌ನಲ್ಲಿ, ಸ್ಟೇಷನ್ ಮ್ಯಾನೇಜರ್ ರಾಜನ್ ಕುಮಾರ್ ಮಾತನಾಡಿ, ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ, ಆಕ್ರೋಶಿತ ಪ್ರತಿಭಟನಾಕಾರರು ಹಳಿಗಳನ್ನು ನಿರ್ಬಂಧಿಸಿದ್ದರಿಂದ ಅನೇಕ ರೈಲುಗಳು ಹೊರಗಿನ ಸಿಗ್ನಲ್‌ನಲ್ಲಿ ಸಿಲುಕಿಕೊಂಡಿವೆ ಎಂದು ಹೇಳಿದರು. 

ಇದನ್ನೂ ಓದಿ: 'ಅಗ್ನಿಪಥ್' ಯೋಜನೆ ಟೀಕಿಸಿ ರಾಜನಾಥ್ ಸಿಂಗ್ ಗೆ ವರುಣ್ ಗಾಂಧಿ ಪತ್ರ

ಪ್ರತಿಭಟನಾಕಾರರು ನಡೆಸಿದ ಪ್ರತಿಭಟನೆಗಳು ಜೆಹಾನಾಬಾದ್, ಬಕ್ಸರ್, ಕತಿಹಾರ್, ಸರನ್, ಭೋಜ್‌ಪುರ ಮತ್ತು ಕೈಮೂರ್‌ನಂತಹ ಜಿಲ್ಲೆಗಳಲ್ಲಿ ರಸ್ತೆ ಸಂಚಾರವನ್ನು ಅಸ್ತವ್ಯಸ್ತಗೊಳಿಸಿದವು, ಅಲ್ಲಿ ಕಲ್ಲು ತೂರಾಟದ ಘಟನೆಗಳಲ್ಲಿ ಅನೇಕ ಸ್ಥಳೀಯರು ಗಾಯಗೊಂಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ಗಳು ಮತ್ತು ಸಂಬಂಧದಲ್ಲಿ ಮಾಡಿದ ಬಂಧನಗಳು ಸೇರಿದಂತೆ ಪೊಲೀಸ್ ಕ್ರಮದ ವಿವರಗಳು ತಕ್ಷಣವೇ ತಿಳಿದಿಲ್ಲ.

4 ವರ್ಷಗಳ ಬಳಿಕ ನಮ್ಮ ಗತಿ ಏನು?; ಸೇನಾಕಾಂಕ್ಷಿಗಳ ಆಕ್ರೋಶ
ಈ ಬಗ್ಗೆ ಮಾತನಾಡಿರುವ ಪ್ರತಿಭಟನಾಕಾರರೊಬ್ಬರು, 'ಸೇನಾ ಪಡೆಗಳಿಗೆ ಸೇರಲು ನಾವು ಸಾಕಷ್ಟು ಶ್ರಮವಹಿಸಿರುತ್ತೇವೆ. ಆದರೆ, ಹಲವು ತಿಂಗಳ ತರಬೇತಿ ಮತ್ತು ರಜೆಗಳ ನಡುವೆ ಸೇವೆಯ ಅವಧಿಯನ್ನು ಕೇವಲ ನಾಲ್ಕು ವರ್ಷಗಳಿಗೆ ಮಿತಿಗೊಳಿಸಿರುವುದು ಹೇಗೆ? ಸರ್ಕಾರವು ಈ ಯೋಜನೆಯನ್ನು ಹಿಂಪಡೆಯಬೇಕು. ಕೇವಲ ನಾಲ್ಕು ವರ್ಷಗಳ ಕರ್ತವ್ಯದ ಬಳಿಕ ನಾವು ಎಲ್ಲಿಗೆ ಹೋಗುವುದು? ನಾಲ್ಕು ವರ್ಷಗಳ ಸೇವೆಯ ನಂತರ ನಾವು ನಿರಾಶ್ರಿತರಾಗುತ್ತೇವೆ. ಹಾಗಾಗಿಯೇ ನಾವು ರಸ್ತೆ ತಡೆ ನಡೆಸಿದ್ದೇವೆ; ದೇಶದ ಮುಖಂಡರಿಗೆ ಈ ಮೂಲಕ ಜನರು ಜಾಗೃತರಾಗಿರುವುದು ತಿಳಿಯುತ್ತದೆ' ಎಂದು ಬಿಹಾರದ ಪ್ರತಿಭಟನಾಕಾರ ಪ್ರತಿಕ್ರಿಯಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆ: ರಸ್ತೆ ತಡೆ, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ

ಸೇನೆಗೆ ಸೇರಲು ಬಯಸಿರುವ ಅಭ್ಯರ್ಥಿಗಳು ಮುಜಾಫರ್‌ಪುರದಲ್ಲಿ ಒಂದು ಕಡೆ ಪ್ರತಿಭಟನೆ ನಡೆಸಿದ್ದು, ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸುವ 'ಚಕ್ಕರ್‌ ಮೈದಾನದಲ್ಲಿ' ನೂರಾರು ಮಂದಿ ಉದ್ಯೋಗಾಕಾಂಕ್ಷಿಗಳು ಸೇರಿ, ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆ ಬಸ್‌ ಹಾಗೂ ಇತರೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ. ಇತ್ತ ಬಿಹಾರದ ಬಕ್ಸರ್‌ ಜಿಲ್ಲೆಯಲ್ಲಿ ನೂರಾರು ಮಂದಿ ಯುವಕರು ರೈಲ್ವೆ ನಿಲ್ದಾಣಕ್ಕೆ ಬಂದು, ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಪಟನಾದಿಂದ ಹೊರಟ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲನ್ನು 30 ನಿಮಿಷ ತಡೆದರು. ಅಗ್ನಿಪಥ ಯೋಜನೆಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಅಜ್ಮೀರ್–ದೆಹಲಿ ಹೆದ್ದಾರಿ ತಡೆ
ರಾಜಸ್ಥಾನದ ಜೈಪುರದಲ್ಲಿ ಸುಮಾರು 150 ಮಂದಿ ಅಜ್ಮೀರ್‌–ದೆಹಲಿ ಹೆದ್ದಾರಿ ತಡೆ ನಡೆಸುವ ಮೂಲಕ ಬುಧವಾರ ಪ್ರತಿಭಟನೆ ನಡೆಸಿದ್ದರು. ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ಕ್ರಮವನ್ನೇ ಅನುಸರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿದ್ದು, 10 ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.


Stay up to date on all the latest ರಾಷ್ಟ್ರೀಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Chandrashekhar

    Who called them as army aspirants? Any one who seeking job in army or any other organisation is scattered and spread over the contry. Hiow can they organise as imealdiatey. Media should use common sense while calling protesters as army aspirants.
    1 month ago reply
flipboard facebook twitter whatsapp