ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 5ನೇ ಬಾರಿ ಇ.ಡಿ ವಿಚಾರಣೆಗೆ ಹಾಜರು
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಮಂಗಳವಾರ ಮತ್ತೆ ವಿಚಾರಣೆಗೊಳಪಡಿಸಿದ್ದಾರೆ. ಇದರೊಂದಿಗೆ ರಾಹುಲ್ ಅವರು ಇಡಿ ಅಧಿಕಾರಿಗಳ ಎದುರು ಐದನೇ ಬಾರಿ ವಿಚಾರಣೆಗೆ ಹಾಜರಾದಂತಾಗಿದೆ.
Published: 21st June 2022 01:10 PM | Last Updated: 21st June 2022 01:20 PM | A+A A-

ರಾಹುಲ್ ಗಾಂಧಿ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಮಂಗಳವಾರ ಮತ್ತೆ ವಿಚಾರಣೆಗೊಳಪಡಿಸಿದ್ದಾರೆ. ಇದರೊಂದಿಗೆ ರಾಹುಲ್ ಅವರು ಇಡಿ ಅಧಿಕಾರಿಗಳ ಎದುರು ಐದನೇ ಬಾರಿ ವಿಚಾರಣೆಗೆ ಹಾಜರಾದಂತಾಗಿದೆ.
ನಿನ್ನೆ ಕೂಡ ರಾಹುಲ್ ಗಾಂಧಿಯವರು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣ ಸಂಬಂಧ ರಾಹುಲ್ ಗಾಂಧಿಯವರು 40 ತಾಸುಗಳ ವಿಚಾರಣೆಗೆ ಎದುರಿಸಿದ್ದಾರೆ. ಇದೀಗ ಮತ್ತೆ 5ನೇ ದಿನದ ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ‘ಮಾಫಿವೀರ್’ ಆಗುವ ಮೂಲಕ ಅಗ್ನಿಪಥ್ ಯೋಜನೆ ಹಿಂಪಡೆಯಬೇಕು: ರಾಹುಲ್ ಗಾಂಧಿ
ಜೂನ್ 13ರಂದು ಮೊದಲ ಬಾರಿ ರಾಹುಲ್ ವಿಚಾರಣೆಗೆ ಹಾಜರಾಗಿದ್ದರು. ರಾಹುಲ್ ಗಾಂಧಿಯವರು ಇಡಿ ಅಧಿಕಾರಿಗಳು ಕೇಳುತ್ತಿರುವ ಕೆಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುತ್ತಿಲ್ಲ. ಹೀಗಾಗಿ ಅವರ ವಿಚಾರಣೆ ಅಧಿಕಾರಿಗಳಿಗೆ ತೃಪ್ತಿ ತರುತ್ತಿಲ್ಲ. ಆದ್ದರಿಂದ ಪದೇ ಪದೇ ವಿಚಾರಣೆಗೆ ಕರೆಯಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ನೋಟಿಸ್ ಜಾರಿ ಮಾಡಿದ್ದು, ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಇಡಿ ಅಧಿಕಾರಿಗಳು ಸೋನಿಯಾ ಅವರನ್ನೂ ವಿಚಾರಣೆಗೊಳಪಡಿಸಲಿದ್ದಾರೆಂದು ಹೇಳಲಾಗುತ್ತಿದೆ.