ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು: ರಾಜ್ಯಪಾಲ ಕೊಶ್ಯಾರಿ, ಸ್ಪೀಕರ್ ಪಾತ್ರವೇನು?

ಮಹಾರಾಷ್ಟ್ರ ಸರ್ಕಾರ ಈಗ ದೇಶದ ರಾಜಕೀಯದ ಕೇಂದ್ರಬಿಂದು. ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಂಡಾಯವೆದ್ದು ತಮ್ಮ ಜೊತೆ 37 ಶಾಸಕರನ್ನು ಕರೆದುಕೊಂಡು ಗುವಾಹಟಿಯ ಹೊಟೇಲ್‌ನಲ್ಲಿ ಬೀಡುಬಿಟ್ಟಿದ್ದು, ಮಹಾ ವಿಕಾಸ್ ಅಘಾಡಿ ಸರ್ಕಾರ ಬಿದ್ದುಹೋಗುವ ಲಕ್ಷಣಗಳು ಗೋಚರಿಸುತ್ತಿವೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ

ನವದೆಹಲಿ: ಮಹಾರಾಷ್ಟ್ರ ಸರ್ಕಾರ ಈಗ ದೇಶದ ರಾಜಕೀಯದ ಕೇಂದ್ರಬಿಂದು. ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಂಡಾಯವೆದ್ದು ತಮ್ಮ ಜೊತೆ 37 ಶಾಸಕರನ್ನು ಕರೆದುಕೊಂಡು ಗುವಾಹಟಿಯ ಹೊಟೇಲ್‌ನಲ್ಲಿ ಬೀಡುಬಿಟ್ಟಿದ್ದು, ಮಹಾ ವಿಕಾಸ್ ಅಘಾಡಿ ಸರ್ಕಾರ ಬಿದ್ದುಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ 10ರಿಂದ 12 ಶಾಸಕರ ಬೆಂಬಲವಿದೆಯಷ್ಟೆ.

ಇಷ್ಟೆಲ್ಲ ರಾಜಕೀಯ ಹೈಡ್ರಾಮಾಗಳ ನಡುವೆ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ.ಸರ್ಕಾರದ ಚೆಂಡು ಈಗ ಅವರ ಅಂಗಳದಲ್ಲಿದೆ. ಹಾಗಾದರೆ ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು? ವಿವಿಧ ಸಾಧ್ಯತೆಗಳ ನೋಟ ಇಲ್ಲಿದೆ:

ರಾಜ್ಯಪಾಲ ಕಿಂಗ್ ಮೇಕರ್: ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ(MVA) ಸರ್ಕಾರಕ್ಕೆ ಬೆಂಬಲ ಹಿಂಪಡೆಯುವಂತೆ ಬಂಡಾಯ ಶಾಸಕರು ಪತ್ರ ಬರೆದರೆ ರಾಜ್ಯಪಾಲರ ಪಾತ್ರ ಕಾರ್ಯರೂಪಕ್ಕೆ ಬರುತ್ತದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವು ರಾಜ್ಯಪಾಲರನ್ನು ಸಂಪರ್ಕಿಸಿ ಬಿಜೆಪಿಯ ಬೆಂಬಲವನ್ನು ಪಡೆಯಬಹುದು. ಪ್ರತಿ ಪಕ್ಷಾಂತರಗೊಂಡ ಶಾಸಕರು ವೈಯಕ್ತಿಕವಾಗಿ ಬೆಂಬಲ ಪತ್ರಗಳನ್ನು ನೀಡಬೇಕಾಗುತ್ತದೆ.

ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರವು ಅಧಿಕಾರದಲ್ಲಿ ಉಳಿಯಲು ಬಹುಮತವಿದೆಯೇ ಎಂಬುದನ್ನು ರಾಜ್ಯಪಾಲ ಕೊಶಿಯಾರಿ ನಿರ್ಧರಿಸಬೇಕು. ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಕೇಳಬಹುದು.

ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಬಹುದೇ?

  • ಸಾಮಾನ್ಯವಾಗಿ ಅನುಮಾನಾಸ್ಪದ ಬಹುಮತ ಹೊಂದಿರುವ ಸರ್ಕಾರದ ಸಂಪುಟವನ್ನು ವಿಸರ್ಜಿಸಲು ಶಿಫಾರಸು ಮಾಡುವುದಿಲ್ಲ; ಸರ್ಕಾರ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಅನೇಕ ಪ್ರಕರಣಗಳಲ್ಲಿ ಹೇಳಿದೆ. 
  • ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರವನ್ನು ಬಳಸಬಹುದು. ಸಿಎಂ ಉದ್ಧವ್ ಠಾಕ್ರೆ ಅವರು ವಿಧಾನಸಭೆ ವಿಸರ್ಜನೆಯನ್ನು ಕೇಳಿದರೂ ರಾಜ್ಯಪಾಲರಿಗೆ ಮನವರಿಕೆಯಾದಲ್ಲಿ ವಿಧಾನಸಭೆಯನ್ನು ವಿಸರ್ಜಿಸದಿರಲು ನಿರ್ಧರಿಸಬಹುದು.
  • ಈ ಹಿಂದೆ ಮಧ್ಯಪ್ರದೇಶದಲ್ಲಿ, ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ 12 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡ ನಂತರ ಆಗಿನ ಸಿಎಂ ಕಮಲ್ ನಾಥ್ ಅವರು ವಿಸರ್ಜನೆಗೆ ಶಿಫಾರಸು ಮಾಡಿದ್ದರು, ಆದರೆ ರಾಜ್ಯಪಾಲರು ಬದಲಿಗೆ ವಿಶ್ವಾಸಮತ ಪರೀಕ್ಷೆಗೆ ಕರೆ ನೀಡಿದರು.

ಸಂವಿಧಾನ ಏನು ಹೇಳುತ್ತದೆ? ರಾಜ್ಯಪಾಲರು ಸಂವಿಧಾನದ 175 (2) ನೇ ವಿಧಿಯ ಅಡಿಯಲ್ಲಿ ಸದನವನ್ನು ಕರೆಯಬಹುದು. ಮೈತ್ರಿ ಸರ್ಕಾರವು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಲು ಹೇಳಬಹುದು.

ವಿಧಾನಸಭೆ ಕಲಾಪ ನಡೆಯುತ್ತಿದ್ದರೆ, ಸ್ಪೀಕರ್ ಅವರು ವಿಶ್ವಾಸಮತ ಪರೀಕ್ಷೆಗೆ ಕರೆಯಬಹುದು. ಅಸೆಂಬ್ಲಿ ಅಧಿವೇಶನದಲ್ಲಿಲ್ಲದಿದ್ದರೆ, ರಾಜ್ಯಪಾಲರು 163 ನೇ ವಿಧಿಯ ಅಡಿಯಲ್ಲಿ ತಮ್ಮ ಉಳಿಕೆ ಅಧಿಕಾರದ ಅಡಿಯಲ್ಲಿ ಸ್ಪೀಕರ್‌ಗೆ ವಿಶ್ವಾಸಮತ ಪರೀಕ್ಷೆಗೆ ಕರೆಯಲು ಅವಕಾಶ ನೀಡಬಹುದು.

ರಾಜ್ಯಪಾಲರ ಆದೇಶ: ಒಡೆದುಹೋದ ಶಿವಸೇನೆ ಬಣವು ಎಂವಿಎ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಪತ್ರ ಬರೆದರೆ, ಕೋಶ್ಯಾರಿ ಅವರು ವಿಧಾನಸಭೆಯಲ್ಲಿ ಸದನ ಪರೀಕ್ಷೆಗೆ ಕರೆಯಬಹುದು. MVA ಸದನ ಪರೀಕ್ಷೆಯಲ್ಲಿ ಬಹುಮತವನ್ನು ಕಳೆದುಕೊಂಡರೆ ಮತ್ತು ಬಂಡಾಯ ಗುಂಪು ಬಿಜೆಪಿಯೊಂದಿಗೆ ಹಕ್ಕು ಸಾಧಿಸಿದರೆ, ರಾಜ್ಯಪಾಲರು ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿ ಸದನದಲ್ಲಿ ಬಹುಮತವನ್ನು ಸಾಬೀತುಪಡಿಸಲು ಕೇಳಬಹುದು.

ಗವರ್ನರ್ ಕೋಶಿಯಾರಿ ಮತ್ತು ಸಿಎಂ ಉದ್ಧವ್ ಇಬ್ಬರೂ ಕೋವಿಡ್-ಪಾಸಿಟಿವ್ ನ್ನು ಹೊಂದಿದ್ದಾರೆ. ಅವರು ಗುಣಮುಖರಾಗುವವರೆಗೆ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವಂತಿಲ್ಲ.

ಸ್ಪೀಕರ್ ಪಾತ್ರವೇನು? ಮಹಾರಾಷ್ಟ್ರ ವಿಧಾನಸಭೆಗೆ ಪ್ರಸ್ತುತ ಸ್ಪೀಕರ್ ಇಲ್ಲ. ಕಾಂಗ್ರೆಸ್‌ನ ನಾನಾ ಪಟೋಲೆ ಮೂಲತಃ ಸ್ಪೀಕರ್ ಆಗಿ ಚುನಾಯಿತರಾಗಿದ್ದರು, ಆದರೆ ಅವರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾದ ನಂತರ ರಾಜೀನಾಮೆ ನೀಡಿದರು. ಆ ಬಳಿಕ ಕಾಂಗ್ರೆಸ್‌ನ ವಿಳಂಬದಿಂದಾಗಿ ಯಾವುದೇ ಸ್ಪೀಕರ್ ಆಯ್ಕೆಯಾಗಿಲ್ಲ.

ಎನ್‌ಸಿಪಿಯ ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಪಾತ್ರ ನಿರ್ಣಾಯಕವಾಗುತ್ತದೆ. ಬಂಡಾಯ ಶಾಸಕರು ರಾಜೀನಾಮೆ ನೀಡದೆ ಪಕ್ಷದ ವಿಪ್ ವಿರುದ್ಧ ಮತ ಚಲಾಯಿಸಿದರೆ ಅವರು ರಾಜೀನಾಮೆ ನೀಡದಿದ್ದರೆ ಅಥವಾ ವಿಪ್ ವಿರುದ್ಧ ಮತ ಚಲಾಯಿಸಿದರೆ, ಅವರನ್ನು ಅನರ್ಹಗೊಳಿಸಲಾಗುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ, ಜಿರ್ವಾಲ್ ಅನರ್ಹತೆಯ ಬಗ್ಗೆ ನಿರ್ಧರಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com