ಪಂಜಾಬ್: ಗುಂಡು ಹಾರಿಸಿಕೊಂಡು ಐಎಎಸ್ ಅಧಿಕಾರಿಯ ಪುತ್ರ ಸಾವು; ಆತ್ಮಹತ್ಯೆ ಎಂದ ಪೊಲೀಸರು, ಹತ್ಯೆ ಎಂದ ಕುಟುಂಬ
ಭ್ರಷ್ಟಾಚಾರದ ಕೇಸ್ ವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರ 27 ವರ್ಷದ ಪುತ್ರ ತಾನೇ ಬಂದೂಕುನಿಂದ ಗುಂಡು ಹಾರಿಸಿಕೊಂಡು ಶನಿವಾರ ಮೃತಪಟ್ಟಿದ್ದಾನೆ. ಪೊಲೀಸರು ಇದು ಆತ್ಮಹತ್ಯೆ ಎನ್ನುತ್ತಿದ್ದರೆ, ಕುಟುಂಬದವರು ಕೊಲೆ ಎಂದು ಆರೋಪಿಸುತ್ತಿದ್ದಾರೆ.
Published: 25th June 2022 07:27 PM | Last Updated: 25th June 2022 07:29 PM | A+A A-

ಸಾವಿಗೀಡಾದ ಐಎಎಸ್ ಅಧಿಕಾರಿಯ ಪುತ್ರ ಹಾಗೂ ಅವರ ತಂದೆಯ ಚಿತ್ರ
ಚಂಡೀಗಢ: ಭ್ರಷ್ಟಾಚಾರದ ಕೇಸ್ ವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರ 27 ವರ್ಷದ ಪುತ್ರ ತಾನೇ ಬಂದೂಕುನಿಂದ ಗುಂಡು ಹಾರಿಸಿಕೊಂಡು ಶನಿವಾರ ಮೃತಪಟ್ಟಿದ್ದಾನೆ. ಪೊಲೀಸರು ಇದು ಆತ್ಮಹತ್ಯೆ ಎನ್ನುತ್ತಿದ್ದರೆ, ಕುಟುಂಬದವರು ಕೊಲೆ ಎಂದು ಆರೋಪಿಸುತ್ತಿದ್ದಾರೆ.
ಟೆಂಡರ್ ಕ್ಲಿಯರ್ ಗಾಗಿ ಲಂಚ ಆರೋಪದ ಮೇರೆಗೆ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರ ಪುತ್ರವನ್ನು ಈ ವಾರದ ಆರಂಭದಲ್ಲಿ ಪಂಜಾಬ್ ಜಾಗೃತ ದಳ ಬಂಧಿಸಿತ್ತು. ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಆತನೇ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದು ತಿಳಿದುಬಂದಿದೆ ಎಂದು ಪಂಜಾಬ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಸಿಂಗ್ ಹೇಳಿದ್ದಾರೆ.
ಆತ್ಮಹತ್ಯೆಗೆ ಪರವಾನಗಿ ಇರುವ ಪಿಸ್ತೂಲ್ ಬಳಸಿದ್ದು, ತನಿಖೆ ಮುಂದುವರೆದಿದೆ ಎಂದು ಎಸ್ ಎಸ್ ಪಿ ತಿಳಿಸಿದ್ದಾರೆ. ಆದರೆ, ಇದು ಕೊಲೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಅಧಿಕಾರಿಗಳು ನನ್ನ ಮಗನಿಗೆ ಕಿರುಕುಳ ನೀಡಿದ್ದಾರೆ. ಆತನ ವಿರುದ್ಧ ದಾಖಲಾಗಿರುವ ಕೇಸ್ ಗೆ ಪೂರಕವಾಗಿ ತಪ್ಪು ಹೇಳಿಕೆ ನೀಡುವಂತೆ ಕಿರುಕುಳ ನೀಡಲಾಗಿದೆ. ಆತ ಬ್ರಿಲಿಯಂಟ್ ವಕೀಲನಾಗಿದ್ದ. ಈಗ ನನ್ನ ಮಗನನ್ನು ಕಿತ್ತುಕೊಂಡಿದ್ದಾರೆ ಎಂದು ಸಂಜಯ್ ಪೊಪ್ಲಿ ಅವರ ಪತ್ನಿ ಕಣ್ಣೀರುಡುತ್ತಿದ್ದಾರೆ.
ನನ್ನ ಮಗನನ್ನು ಹತ್ಯೆ ಮಾಡಲಾಗಿದೆ. ನನಗೆ ನ್ಯಾಯ ಬೇಕು, ಕೋರ್ಟ್ ಗೆ ಹೋಗುತ್ತೇನೆ ಎಂದು ಅವರು ಒಂದೇ ಸಮನೆ ಅಳುತ್ತಾ ಸುದ್ದಿಗಾರರಿಗೆ ತಿಳಿಸಿದರು. ಆರೋಪ ಒಪ್ಪಿಕೊಳ್ಳುವಂತೆ ಸಂಜಯ್ ಪೊಪ್ಲಿ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಪೊಪ್ಲಿ ಅವರ ಕುಟುಂಬದ ಗೆಳೆಯರು, ನೆರೆಹೊರೆಯವರು ಹೇಳಿದರು.