
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತೀಯ ಸೇನೆಯ ನೂತನ ನೇಮಕಾತಿ ಯೋಜನೆ ಅಗ್ನಿಪಥ್ ಆರಂಭವಾಗಿ ಕೇವಲ 6 ದಿನಗಳಲ್ಲಿಯೇ ವಾಯುಸೇನೆ 1.83 ಲಕ್ಷ ಅರ್ಜಿ ಸ್ವೀಕರಿಸಿದೆ ಎಂದು ತಿಳಿದುಬಂದಿದೆ.
ವಾಯುಪಡೆಯು (ಐಎಎಫ್) ಅಗ್ನಿಪಥ್ ನೇಮಕಾತಿ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಆರಂಭವಾದ ಆರು ದಿನಗಳಲ್ಲಿ 1.83 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದು, ಜೂನ್ 24 ರಂದು ಆರಂಭವಾದ ನೋಂದಣಿ ಪ್ರಕ್ರಿಯೆಯಲ್ಲಿ ಸೋಮವಾರದ ವೇಳೆಗೆ 94,281 ಅರ್ಜಿಗಳು ಮತ್ತು ಭಾನುವಾರದ ವೇಳೆಗೆ 56,960 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.
So far, 183634 future #Agniveers have applied on the registration website https://t.co/kVQxOwkUcz
If you want to be an #Agniveer too, apply soon.
Registration closes on 05 July 2022.#BhartiyaVayuSenaKeAgniveer pic.twitter.com/EV2yCatzII— Indian Air Force (@IAF_MCC) June 29, 2022
ಜೂನ್ 14 ರಂದು ಯೋಜನೆಯನ್ನು ಅನಾವರಣಗೊಳಿಸಿದ ನಂತರ, ಅದರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದು ಸುಮಾರು ಒಂದು ವಾರದವರೆಗೆ ಹಲವಾರು ರಾಜ್ಯಗಳಲ್ಲಿ ಘರ್ಷಣೆ ಸಂಭವಿಸಿತ್ತು. ಯೋಜನೆಯನ್ನು ಹಲವು ವಿರೋಧ ಪಕ್ಷಗಳು ಅದನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದವು.
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಐಎಎಫ್, 'ಇಲ್ಲಿಯವರೆಗೆ, 1,83,634 ಭವಿಷ್ಯದ ಅಗ್ನಿವೀರ್‌ಗಳು ನೋಂದಣಿ ವೆಬ್‌ಸೈಟ್ https://agnipathvayu.cdac.in ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 5, 2022 ರಂದು ನೋಂದಣಿ ಮುಕ್ತಾಯವಾಗುತ್ತದೆ' ಎಂದು ತಿಳಿಸಿದೆ.
ಇದನ್ನೂ ಓದಿ: ಅಗ್ನಿಪಥ್ ಯುವಕರಿಗೆ ಒಂದು ಉತ್ತಮ ಅವಕಾಶ; ಇನ್ಫೋಸಿಸ್ ಆಯ್ಕೆ ಮಾನದಂಡಗಳನ್ನು ಅನುಸರಿಸುತ್ತದೆ: ನಂದನ್ ನಿಲೇಕಣಿ
ಯೋಜನೆಯಡಿಯಲ್ಲಿ 17.5 ರಿಂದ ಮತ್ತು 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇರಿಸಲಾಗುವುದು. ಅವರಲ್ಲಿ 25 ಪ್ರತಿಶತದಷ್ಟು ನಂತರ ನಿಯಮಿತ ಸೇವೆಗೆ ಸೇರಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಸರ್ಕಾರವು ಜೂನ್ 16 ರಂದು ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022 ನೇ ವರ್ಷಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿತು ಮತ್ತು ನಂತರ ಕೇಂದ್ರ ಅರೆಸೇನಾ ಪಡೆಗಳು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಅಗ್ನಿವೀರ್‌ಗಳಿಗೆ ನಿವೃತ್ತಿ ಬಳಿಕ ವಿವಿಧ ವಲಯಗಳಲ್ಲಿ ಆದ್ಯತೆಯಂತಹ ಶಾಂತಗೊಳಿಸುವ ಹಂತಗಳನ್ನು ಘೋಷಿಸಿತು.
ಇದನ್ನೂ ಓದಿ: 'ಅಗ್ನಿಫಥ್' ಯೋಜನೆಗೆ ವಿರೋಧ ಸಲ್ಲದು: ಎಸ್ ಎಂ ಕೃಷ್ಣ
ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು 'ಅಗ್ನಿವೀರ್ಸ್' ವಿವಿಧ ಇಲಾಖೆಗಳಲ್ಲಿ ಮೀಸಲಾತಿ ಘೋಷಣೆ ಮಾಡಿದ್ದು, ರಾಜ್ಯ ಪೊಲೀಸ್ ಪಡೆಗಳಿಗೆ ಸೇರ್ಪಡೆಗೆ ಆದ್ಯತೆ ನೀಡಲಾಗುವುದು ಎಂದು ಘೋಷಣೆ ಮಾಡಿವೆ. ಆದಾಗ್ಯೂ, ಹೊಸ ನೇಮಕಾತಿ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ ಮತ್ತು ಅಹಿತಕ ಘಟನೆಗಳಲ್ಲಿ ಪಾಲ್ಗೊಂಡಿದ್ದವರನ್ನು ಯೋಜನೆ ಅನ್ವಯ ಸೇರ್ಪಡೆಗೊಳಿಸಲಾಗುವುದಿಲ್ಲ ಎಂದು ಸಶಸ್ತ್ರ ಪಡೆಗಳು ಸ್ಪಷ್ಟಪಡಿಸಿವೆ.