'ಮಹಾ ಸಂಘರ್ಷ': 'ವಿಧಾನಸಭೆ ಅಧಿವೇಶನವೇ ಪರಿಹಾರ'; ಶಿವಸೇನೆ ಅರ್ಜಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್
ವಿಶ್ವಾಸ ಮತ ಯಾಚನೆಗೆ ಸೂಚನೆ ನೀಡಿರುವ ಮಹಾರಾಷ್ಟ್ರ ರಾಜ್ಯಪಾಲರ ನಿರ್ಧಾರದ ವಿರುದ್ಧ ಶಿವಸೇನೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ರಾಜಕೀಯ 'ಸಂಘರ್ಷ' ಇತ್ಯರ್ಥಕ್ಕೆ ವಿಧಾನಸಭೆ ಅಧಿವೇಶನವೇ ಪರಿಹಾರ ಎಂದು ಅಭಿಪ್ರಾಯಪಟ್ಟಿದೆ.
Published: 29th June 2022 06:51 PM | Last Updated: 29th June 2022 06:59 PM | A+A A-

ಮಹಾ ಸಂಘರ್ಷ (ಸಂಗ್ರಹ ಚಿತ್ರ)
ನವದೆಹಲಿ: ವಿಶ್ವಾಸ ಮತ ಯಾಚನೆಗೆ ಸೂಚನೆ ನೀಡಿರುವ ಮಹಾರಾಷ್ಟ್ರ ರಾಜ್ಯಪಾಲರ ನಿರ್ಧಾರದ ವಿರುದ್ಧ ಶಿವಸೇನೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ರಾಜಕೀಯ 'ಸಂಘರ್ಷ' ಇತ್ಯರ್ಥಕ್ಕೆ ವಿಧಾನಸಭೆ ಅಧಿವೇಶನವೇ ಪರಿಹಾರ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಉದ್ಧವ್ ಠಾಕ್ರೆ 52 ಶಾಸಕರನ್ನು ಬಿಟ್ಟರೂ, ಪವಾರ್ ನ್ನು ಬಿಡುವುದಿಲ್ಲ: ಬಂಡಾಯ ಶಾಸಕರು
ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರಕ್ಕೆ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲರು ನೀಡಿದ ನಿರ್ದೇಶನವನ್ನು ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಕುರಿತ ಅರ್ಜಿ ವಿಚಾರಣೆಯನ್ನು ಇಂದು ಸಂಜೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ ರಜಾ ಕಾಲದ ಪೀಠದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರು, 'ಪ್ರಜಾಪ್ರಭುತ್ವದ ಈ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ವಿಧಾನಸಭೆ ಅಧಿವೇಶನವೇ ಪರಿಹಾರ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಬಹುಮತ ಸಾಬೀತಿಗೆ ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್ಯಪಾಲ ಕೋಶ್ಯಾರಿ ಸೂಚನೆ: 'ಸುಪ್ರೀಂ' ಮೊರೆಹೋದ ಶಿವಸೇನೆ, ಇಂದು ಸಂಜೆ ವಿಚಾರಣೆ
ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಅವರು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದು, ರಾಜ್ಯಪಾಲರು ಶಬ್ದಾತೀತ ವೇಗದಲ್ಲಿ ಓಡುವ ಕುದುರೆಯಂತೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರ ಪ್ರಭು ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಶೇಕ್ ಮನು ಸಿಂಘ್ವಿ ಅವರು, 'ಎನ್‌ಸಿಪಿಯ ಇಬ್ಬರು ಶಾಸಕರು ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಕಾಂಗ್ರೆಸ್‌ನ ಇಬ್ಬರು ಶಾಸಕರು ವಿದೇಶದಲ್ಲಿದ್ದಾರೆ. ಅವರನ್ನು ಗುರುವಾರದಂದು ಮಹಜರು ಪರೀಕ್ಷೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ: 'ಮಹಾ' ರಾಜಕೀಯ ಬಿಕ್ಕಟ್ಟು: ವಿಶ್ವಾಸಮತ ಯಾಚಿಸಲು ಠಾಕ್ರೆಗೆ ರಾಜ್ಯಪಾಲ ಸೂಚನೆ; ಗುರುವಾರ ಮುಂಬೈಗೆ ವಾಪಸ್- ಏಕನಾಥ್ ಶಿಂಧೆ
ಫ್ಲೋರ್ ಟೆಸ್ಟ್ (ವಿಶ್ವಾಸ ಮತ ಯಾಚನೆ)ಗೆ ಅವಕಾಶ ನೀಡುವುದು ಎಂದರೆ ಸದನದ ನಡಾವಳಿಯ 10ನೇ ಶೆಡ್ಯೂಲ್ ಅನ್ನು ನಿಷ್ಕ್ರಿಯವಾಗಿಸುವಂತೆ ಎಂದು ಸಿಂಘ್ವಿ ವಾದ ಮಂಡಿಸಿದರು. ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಶೆಡ್ಯೂಲ್ 10 ದೃಢವಾದ ನಿಬಂಧನೆಗಳಲ್ಲಿ ಒಂದಾಗಿದ್ದು ನ್ಯಾಯಾಲಯವು ಅದನ್ನು ಬಲಪಡಿಸಬೇಕು ಎಂದು ಅವರು ಪೀಠದ ಗಮನ ಸೆಳೆದರು.
ವಾದಗಳನ್ನು ಆಲಿಸಿದ ನ್ಯಾಯಪೀಠ, 'ಪ್ರಜಾಪ್ರಭುತ್ವದ ಈ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ವಿಧಾನಸಭೆ ಅಧಿವೇಶನವೊಂದೇ ಸೂಕ್ತವಾದ ಮಾರ್ಗ ಎಂಬುದು ನಮ್ಮ ತಿಳುವಳಿಕೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.