ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ಪೊಲೀಸರಿಂದ ನಗರದಲ್ಲಿ ಮನೆ ಮನೆ ಸಮೀಕ್ಷೆ ಪ್ರಾರಂಭ
ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕರ ನಂಟು ಬಹಿರಂಗವಾದ ನಂತರ ಕೊಯಮತ್ತೂರು ಪೊಲೀಸರು ನಗರದ ನಿವಾಸಿಗಳ ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದ್ದಾರೆ.
Published: 05th November 2022 11:53 AM | Last Updated: 05th November 2022 11:53 AM | A+A A-

ಕೊಯಮತ್ತೂರಿನಲ್ಲಿ ಸ್ಫೋಟಗೊಂಡಿದ್ದ ಕಾರು
ಚೆನ್ನೈ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕರ ನಂಟು ಬಹಿರಂಗವಾದ ನಂತರ ಕೊಯಮತ್ತೂರು ಪೊಲೀಸರು ನಗರದ ನಿವಾಸಿಗಳ ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದ್ದಾರೆ.
ಸ್ಫೋಟದಲ್ಲಿ ಸಾವಿಗೀಡಾದ ಜಮೀಶಾ ಮುಬಿನ್ ಅವರ ನಿವಾಸದ ಮೇಲೆ ನಡೆಸಿದ ದಾಳಿಯಲ್ಲಿ, ತಮಿಳುನಾಡು ಪೊಲೀಸರು ಹಲವಾರು ದೋಷಾರೋಪಣೆಯ ದಾಖಲೆಗಳನ್ನು ಕಂಡುಕೊಂಡಿದ್ದಾರೆ, ಕೆಲವು ಐಸಿಸ್ ಸಿದ್ಧಾಂತಗಳು ಪತ್ತೆಯಾಗಿವೆ.
ಗುರುತಿನ ಪುರಾವೆ, ಕುಟುಂಬದ ವಿವರಗಳು, ಮೊಬೈಲ್ ಸಂಖ್ಯೆಗಳು, ಶಾಶ್ವತ ವಿಳಾಸ, ಹಿಂದಿನ ವಿಳಾಸ ಮತ್ತು ಕೆಲಸದ ಸ್ವರೂಪದ ವಿವರಗಳನ್ನು ನೀಡಲು ಪೊಲೀಸರು ಈಗಾಗಲೇ ಕಟ್ಟಡಗಳ ಮಾಲೀಕರಿಗೆ ತಿಳಿಸಿದ್ದಾರೆ.
ಕೊಯಮತ್ತೂರು ಪೊಲೀಸರು ನಗರದ ನಿವಾಸಿಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬಾಡಿಗೆದಾರರು ಕಟ್ಟಡಕ್ಕೆ ಬಂದ ಬಳಿಕ ಅವರ ವಿವರಗಳನ್ನು ಪೊಲೀಸರಿಗೆ ಹಾಜರುಪಡಿಸಬೇಕು ಎಂದು ಪೊಲೀಸರು ಈಗಾಗಲೇ ಮನೆ ಮಾಲೀಕರಿಗೆ ತಿಳಿಸಿದ್ದಾರೆ. ಬಾಡಿಗೆದಾರರು ನಿವೇಶನವನ್ನು ಖಾಲಿ ಮಾಡಿದಾಗಲೂ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಬೇಕಾಗುತ್ತದೆ.
ಇದನ್ನೂ ಓದಿ: ಕೊಯಮತ್ತೂರು ಸ್ಫೋಟ ಪ್ರಕರಣ: ದೂರುದಾರರಿಂದ ಮಾಹಿತಿ ಕೇಳಿದ ಎನ್‌ಐಎ ತಂಡ
ಮೃತ ಮುಬಿನ್ ಕಳೆದ ಒಂದು ತಿಂಗಳಿನಿಂದ ಸಂಗಮೇಶ್ವರ ದೇವಸ್ಥಾನದ ಬಳಿ ಕೊಟ್ಟೈಮೇಡುವಿನ ಬೀದಿಯಲ್ಲಿರುವ ಎಚ್‌ಎಂಪಿಆರ್‌ನಲ್ಲಿರುವ ವಸತಿ ಸಂಕೀರ್ಣದ ಮೊದಲ ಮಹಡಿಯಲ್ಲಿ ವಾಸವಾಗಿದ್ದ.
ಗುಪ್ತಚರ ವರದಿಯು ಪೊಲೀಸ್ ಕಣ್ಗಾವಲಿನಲ್ಲಿರಬೇಕಾದ 96 ವ್ಯಕ್ತಿಗಳ ಪಟ್ಟಿಯನ್ನು ಹೊಂದಿದ್ದು, ಇದರಲ್ಲಿ ಮುಬಿನ್ 89ನೇ ಸ್ಥಾನವನ್ನು ಹೊಂದಿದ್ದಾರೆ. ಮುಬಿನ್‌ನ ನಿವಾಸದ ವಿಳಾಸವು ಆಗ ವಿನ್ಸೆಂಟ್ ರಸ್ತೆಯಾಗಿತ್ತು. ಆದರೆ, ಒಂದು ತಿಂಗಳಲ್ಲಿ ಆತ H.M.P.R ಬೀದಿಗೆ ಸ್ಥಳಾಂತರಗೊಂಡಿದ್ದಾನೆ.
ಹೀಗಾಗಿ ಕೊಯಮತ್ತೂರು ಪೊಲೀಸರು ಮನೆ ಮನೆ ಸಮೀಕ್ಷೆ ನಡೆಸಲು ಮತ್ತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮ್ಮ ಬಾಡಿಗೆದಾರರ ವಿವರಗಳನ್ನು ಸಲ್ಲಿಸಲು ಕಟ್ಟಡಗಳ ಮಾಲೀಕರಿಗೆ ಸೂಚಿಸಲು ಕಾರಣವಾಗಿದೆ.
ಇದನ್ನೂ ಓದಿ: ಕೊಯಮತ್ತೂರು ಕಾರು ಸ್ಫೋಟ: ಎನ್ಐಎ ತನಿಖೆಗೆ ಕೇಂದ್ರ ಸರ್ಕಾರದ ಆದೇಶ