ಗುರುತು ಸಿಗದಂತೆ ಶ್ರದ್ಧಾಳ ತಲೆ ಸುಟ್ಟು ಹಾಕಿದ ಪಾತಕಿ ಆಫ್ತಾಬ್!
ಶ್ರದ್ದಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಹೊರಬೀಳುತ್ತಿವೆ. ಆರೋಪಿ ಆಫ್ತಾಬ್ ಪೂನಾವಾಲ ತನ್ನ ಪ್ರಿಯತಮೆಯ ಗುರುತು ಸಿಗದಂತೆ ಆಕೆಯ ತಲೆಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Published: 17th November 2022 03:13 PM | Last Updated: 17th November 2022 03:29 PM | A+A A-

ಪಾತಕಿ ಆಫ್ತಾಬ್
ನವದೆಹಲಿ:ಶ್ರದ್ದಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಹೊರಬೀಳುತ್ತಿವೆ. ಆರೋಪಿ ಆಫ್ತಾಬ್ ಪೂನಾವಾಲ ತನ್ನ ಪ್ರಿಯತಮೆಯ ಗುರುತು ಸಿಗದಂತೆ ಆಕೆಯ ತಲೆಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶ್ರದ್ಧಾಳ ದೇಹವನ್ನು ಮೊದಲಿಗೆ 35 ತುಂಡುಗಳಾಗಿ ಕತ್ತರಿಸಿದ್ದಾನೆ. ಬಳಿಕ ಒಂದು ವೇಳೆ ದೇಹದ ಗುರುತು ಪತ್ತೆಯಾದರೂ, ಆಕೆಯ ಮುಖದ ಗುರುತು ಸಿಗದಂತೆ ಮಾಡಲು ತಲೆಯನ್ನು ಸುಟ್ಟು ಹಾಕಿರುವುದಾಗಿ ತಿಳಿದುಬಂದಿದೆ. ಈ ಎಲ್ಲಾ ಹೀನ ಕೃತ್ಯಗಳ ಬಗ್ಗೆ ಇಂಟರ್ ನೆಟ್ ನಲ್ಲಿ ತಿಳಿದಿದ್ದಾಗಿ ಆಫ್ತಾಬ್ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಶ್ರದ್ಧಾ ಹತ್ಯೆ ಪ್ರಕರಣ: ರಕ್ತದ ಕಲೆ ಹೋಗಿಸಲು ಅತೀವ ನೀರು ಬಳಕೆ, ಅಫ್ತಾಬ್ ಅಪರಾಧ ಸಾಬೀತಿಗೆ ನೀರಿನ ಬಿಲ್ ಪುರಾವೆ?
Shraddha murder case | An application for the appearance of accused Aftab Poonawala through video conferencing was allowed, due to the security and sensitivity of the case. Now he is to be produced before court through VC.
— ANI (@ANI) November 17, 2022
(File photo) pic.twitter.com/43iShv45BK
ಈ ಮಧ್ಯೆ ಇದೇ ವರ್ಷ ಜೂನ್ ನಲ್ಲಿ ವಶಕ್ಕೆ ಪಡೆಯಲಾದ ಮಾನವ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳ ಡಿಎನ್ ಎ ಮಾದರಿಗಳನ್ನು ಹೋಲಿಕೆ ಮಾಡಲು ದಕ್ಷಿಣ ಜಿಲ್ಲಾ ಪೊಲೀಸರು, ಪೂರ್ವದ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಶ್ರದ್ಧಾ ಹತ್ಯೆಯಾದ ಸುಮಾರು ಒಂದು ತಿಂಗಳ ನಂತರ (ಮೇ 18 ರಂದು) ಪೂರ್ವ ದೆಹಲಿ ಪೊಲೀಸರು ಇದೇ ವರ್ಷ ಜೂನ್‌ನಲ್ಲಿ ರಾಷ್ಟ್ರ ರಾಜಧಾನಿಯ ಪಾಂಡವ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿಲೋಕಪುರಿ ಪ್ರದೇಶದಲ್ಲಿ ಕತ್ತರಿಸಿದ ತಲೆ ಮತ್ತು ಕೈಯನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಪತ್ತೆಯಾದ ದೇಹದ ಭಾಗಗಳು ಯಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ.