ಇಡಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವಧಿ ಮತ್ತೆ ವಿಸ್ತರಣೆ, ಇದು ಮೂರನೇ ಬಾರಿ
ಅಧಿಕೃತ ಆದೇಶದ ಪ್ರಕಾರ ಕೇಂದ್ರ ಸರ್ಕಾರ ಗುರುವಾರ ಜಾರಿ ನಿರ್ದೇಶನಾಲಯ(ಇಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಸೇವೆಯನ್ನು ಮತ್ತೆ ಒಂದು ವರ್ಷ ವಿಸ್ತರಣೆ ಮಾಡಲಾಗಿದೆ.
Published: 17th November 2022 11:58 PM | Last Updated: 17th November 2022 11:58 PM | A+A A-

ಸಂಜಯ್ ಕುಮಾರ್ ಮಿಶ್ರಾ
ನವದೆಹಲಿ: ಅಧಿಕೃತ ಆದೇಶದ ಪ್ರಕಾರ ಕೇಂದ್ರ ಸರ್ಕಾರ ಗುರುವಾರ ಜಾರಿ ನಿರ್ದೇಶನಾಲಯ(ಇಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಸೇವೆಯನ್ನು ಮತ್ತೆ ಒಂದು ವರ್ಷ ವಿಸ್ತರಣೆ ಮಾಡಲಾಗಿದೆ.
ಇದು ಒಟ್ಟಾರೆಯಾಗಿ ಇಡಿ ನಿರ್ದೇಶಕರಿಗೆ ನೀಡಿದ ಮೂರನೇ ಅವಧಿ ವಿಸ್ತರಣೆಯಾಗಿದೆ.
1984ರ ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ ಅವರು ನವೆಂಬರ್ 18, 2023 ರವರೆಗೆ ಇಡಿ ನಿರ್ದೇಶಕರಾಗಿರುತ್ತಾರೆ ಎಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಇತ್ತೀಚಿನ ಆದೇಶ ತಿಳಿಸಿದೆ.
ಇದನ್ನು ಓದಿ: 51 ಮಾಜಿ ಮತ್ತು ಹಾಲಿ ಸಂಸದರು ಪಿಎಂಎಲ್‌ಎ ಅಡಿ ವಿಚಾರಣೆ ಎದುರಿಸುತ್ತಿದ್ದಾರೆ: ಸುಪ್ರೀಂಗೆ ಮಾಹಿತಿ
62 ವರ್ಷದ ಮಿಶ್ರಾ ಅವರನ್ನು ಮೊದಲು ನವೆಂಬರ್ 19, 2018 ರಂದು ಎರಡು ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.
ನಂತರ, ನವೆಂಬರ್ 13, 2020 ರ ಆದೇಶದ ಮೂಲಕ, ಕೇಂದ್ರ ಸರ್ಕಾರ ನೇಮಕಾತಿ ಆದೇಶ ಮಾರ್ಪಡಿಸಿ ಅವರ ಎರಡು ವರ್ಷಗಳ ಅವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಿತ್ತು.
ಇಡಿ ಮತ್ತು ಕೇಂದ್ರ ತನಿಖಾ ದಳದ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳ ಕಡ್ಡಾಯ ಅವಧಿಯ ನಂತರ ಮೂರು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಸರ್ಕಾರ ಕಳೆದ ವರ್ಷ ಸುಗ್ರೀವಾಜ್ಞೆಯನ್ನು ತಂದಿತು. ನಂತರ ಮಿಶ್ರಾ ಅವರಿಗೆ ಒಂದು ವರ್ಷ ಅವಧಿ ವಿಸ್ತರಣೆ ಮಾಡಲಾಯಿತು.