ತಿಹಾರ್ ನಲ್ಲಿ 'ಆಪ್'ನ ದರ್ಬಾರ್: ಸತ್ಯೇಂದರ್ ಜೈನ್ ವಿಡಿಯೋ ಕುರಿತು ಬಿಜೆಪಿ ಟೀಕೆ

ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ತಿಹಾರ್ ಜೈಲಿನೊಳಗೆ ವಿಶೇಷ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡುವ ಹಲವು ಸಿಸಿಟಿವಿ ದೃಶ್ಯಾವಳಿಗಳು ಒಂದರ ಹಿಂದೊಂದು ಬರುತ್ತಿದ್ದು, ಈ ಕುರಿತು ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ತಿಹಾರ್ ಜೈಲಿನೊಳಗೆ ವಿಶೇಷ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡುವ ಹಲವು ಸಿಸಿಟಿವಿ ದೃಶ್ಯಾವಳಿಗಳು ಒಂದರ ಹಿಂದೊಂದು ಬರುತ್ತಿದ್ದು, ಈ ಕುರಿತು ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ತಿಹಾರ್‌ನಲ್ಲಿ ಜೈಲಿನಲ್ಲಿ ಸಚಿವರಿಗೆ ವಿವಿಐಪಿ ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ವಾಗ್ದಾಳಿ ನಡೆಸಿದ್ದಾರೆ.

ತಿಹಾರ್‌ನ ಮತ್ತೊಂದು ವಿಡಿಯೋವನ್ನು ಮಾಧ್ಯಮಗಳಿಂದ ಬಹಿರಂಗಗೊಂಡಿದೆ. ಈ ಬಾರಿ ಸತ್ಯೇಂದ್ರ ಕಾ ದರ್ಬಾರ್ ಜೈಲ್ ಸೂಪರಿಂಟೆಂಡೆಂಟ್ ಆಗಿದೆ. ಅವರನ್ನು ಈಗ ಅಮಾನತುಗೊಳಿಸಲಾಗಿದೆ ಎಂದು ಪೂನಾವಾಲಾ ಅವರು ಟ್ವೀಟ್ ಮಾಡಿದ್ದಾರೆ.

ಮೊದಲಿಗೆ ಸತ್ಯೇಂದರ್ ಜೈನ್ ಅವರು ಮಕ್ಕಳ ಅತ್ಯಾಚಾರಿಯಿಂದ ಮಸಾಜ್ ಪಡೆಯುತ್ತಿರುವುದು ಕಂಡುಬಂದಿತ್ತು. ಇದನ್ನು ಎಎಪಿ ಪಕ್ಷವು ಫಿಸಿಯೋಥೆರಪಿ ಎಂದು ಹೇಳಿತ್ತು, ನಂತರ ಜೈಲಿನಲ್ಲಿರುವ ಸಚಿವರು ಭರ್ಜರಿ ಭೋಜನ ಮಾಡುತ್ತಿದ್ದ ವಿಡಿಯೋ ಕಂಡು ಬಂದಿತ್ತು. ಇದೀಗ ಅಮಾನತುಗೊಂಡ ಸೂಪರಿಂಟೆಂಡೆಂಟ್‌ನೊಂದಿಗೆ ಚರ್ಚೆ ನಡೆಸುತ್ತಿರುವ ವಿಡಿಯೋ ಕಂಡು ಬಂದಿದೆ. ಇದನ್ನೆಲ್ಲ ಅರವಿಂದ್ ಕೇಜ್ರಿವಾಲ್ ಇನ್ನೂ ಏಕೆ ಬೆಂಬಲಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆ ಕೇಜ್ರಿವಾಲ್ ಅವರ ಭ್ರಷ್ಟಾಚಾರದ ಚಿಕಿತ್ಸೆಯಾಗಿದೆ. ಈಗಲಾದರೂ ಜೈನ್ ಅವರನ್ನು ಕೇಜ್ರಿವಾಲ್ ಅವರು ವಜಾ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com