ಜೈಲಿನೊಳಗೆ ಮಸಾಜ್, ಅದ್ದೂರಿ ಊಟದ ಬಳಿಕ ಸತ್ಯೇಂದ್ರ ಜೈನ್ ಸೆಲ್‌ನಲ್ಲಿ ಕ್ಲೀನಿಂಗ್ ಸೇವೆ: ವಿಡಿಯೋ ವೈರಲ್

ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಕೊಠಡಿಯೊಳಗೆ ಮಸಾಜ್ ಮಾಡಿಸಿಕೊಳ್ಳುವ ಮತ್ತು ರುಚಿಕರವಾದ ಊಟ ಮಾಡುತ್ತಿರುವ ವೀಡಿಯೊಗಳು ಬಿಡುಗಡೆಯಾದ ಕೆಲವೇ ದಿನಗಳ ಬಳಿಕ ಇದೀಗ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಸೆಲ್‌ನಲ್ಲಿ ಕ್ಲೀನಿಂಗ್ ಸೇವೆಯ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಸತ್ಯೇಂದ್ರ ಜೈನ್ ಕೊಠಡಿ ಕ್ಲೀನಿಂಗ್
ಸತ್ಯೇಂದ್ರ ಜೈನ್ ಕೊಠಡಿ ಕ್ಲೀನಿಂಗ್

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಕೊಠಡಿಯೊಳಗೆ ಮಸಾಜ್ ಮಾಡಿಸಿಕೊಳ್ಳುವ ಮತ್ತು ರುಚಿಕರವಾದ ಊಟ ಮಾಡುತ್ತಿರುವ ವೀಡಿಯೊಗಳು ಬಿಡುಗಡೆಯಾದ ಕೆಲವೇ ದಿನಗಳ ಬಳಿಕ ಇದೀಗ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಸೆಲ್‌ನಲ್ಲಿ ಕ್ಲೀನಿಂಗ್ ಸೇವೆಯ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಬಿಜೆಪಿ ಈ ಹೊಸ ವಿಡಿಯೋ ಬಿಡುಗಡೆ ಮಾಡಿದ್ದು, ಈ ನೂತನ ವಿಡಿಯೋದಲ್ಲಿ ಸತ್ಯೇಂದ್ರ ಜೈನ್ ಅವರ ಜೈಲು ಕೊಠಡಿಯನ್ನು ಕೆಲವರು ಶುಚಿಗೊಳಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ, 8-10 ಜನರು "ಸತ್ಯೇಂದ್ರ ಜೈನ್‌ಗೆ ಮನೆಗೆಲಸ ಮತ್ತು ವಿವಿಐಪಿ ಸೇವೆಗಳನ್ನು" ಒದಗಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ.

ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಈ ಕುರಿತು ಟ್ವೀಟ್ ಮಾಡಿದ್ದು, "ತಿಹಾರ್‌ನ ಎಎಪಿ ಕಾ ದರ್ಬಾರ್ ನಂತರ ಈಗ ತಿಹಾರ್‌ನಲ್ಲಿ ರೂಮ್ ಸೇವೆ! 8-10 ಜನರು ಸತ್ಯೇಂದ್ರ ಜೈನ್‌ಗೆ ಟಿವಿ, ಮಿನರಲ್ ವಾಟರ್, ಮನೆಗೆಲಸ ಮತ್ತು ವಿವಿಐಪಿ ಸೇವೆಗಳನ್ನು ಒದಗಿಸುತ್ತಿದ್ದಾರೆ. ಹಣ್ಣುಗಳು, ಡ್ರೈ ಫ್ರೂಟ್ ಗಳು, ನವಾಬಿ ಊಟ, ಜೈಲು ಅಧೀಕ್ಷಕರ ವೈಯಕ್ತಿಕ ಭೇಟಿ! ಏನು ನಡೆಯುತ್ತಿದೆ?" ಎಂದು ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ, ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಂಡು ಅದ್ದೂರಿ ಊಟ ಮಾಡಿದ ಹಳೆಯ ವಿಡಿಯೋಗಳನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಅಲ್ಲದೆ ಜೈನ್ ಗೆ ಜೈಲಿನಲ್ಲಿ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿತ್ತು. ಈ ಸಂಬಂಧ ಜೈಲು ಅಧಿಕಾರಿಗಳನ್ನೂ ಕೂಡ ಅಮಾನತು ಮಾಡಲಾಗಿತ್ತು. ಆದಾಗ್ಯೂ ಜೈಲಿನಲ್ಲಿ ಜೈನ್ ರಿಗೆ ನೀಡಲಾಗುತ್ತಿರುವ ವಿಐಪಿ ಸೇವೆಗಳು ಮುಂದುವರೆದಿರುವುದು ಈ ನೂತನ ವಿಡಿಯೋದಿಂದ ಸ್ಪಷ್ಟವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಸತ್ಯೇಂದ್ರ ಜೈನ್ ಅವರ ಸೆಲ್‌ನೊಳಗೆ ಹಲವಾರು ಜನರನ್ನು ತೋರಿಸಿದೆ ಮತ್ತೊಂದು ವೀಡಿಯೊ. ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನನ್ನು ಭೇಟಿ ಮಾಡುವುದನ್ನು ಸಹ ಕಾಣಬಹುದು.
ಜೈಲಿನಲ್ಲಿ ವಿಶೇಷ ಆಹಾರಕ್ಕೆ ಪ್ರವೇಶ ಕೋರಿ ಸತ್ಯೇಂದ್ರ ಜೈನ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದ ಒಂದು ದಿನದ ನಂತರ ಹೊಸ ವಿಡಿಯೋ ಹೊರಬಿದ್ದಿದೆ. 

ಜೈನ್ ತಮ್ಮ ಮನವಿಯಲ್ಲಿ ತನಗೆ 'ಜೈನ ಆಹಾರ' ಮತ್ತು ದೇವಾಲಯಕ್ಕೆ ಪ್ರವೇಶವನ್ನು ನೀಡಿಲ್ಲ ಎಂದು ಹೇಳಿದ್ದರು, ತಾನು ದೇವಾಲಯಕ್ಕೆ ಹೋಗದೆ ನಿಯಮಿತ ಆಹಾರವನ್ನು ಸೇವಿಸುವುದಿಲ್ಲ ಮತ್ತು ಹಣ್ಣುಗಳು ಮತ್ತು ಸಲಾಡ್‌ಗಳ 'ಧಾರ್ಮಿಕ' ಆಹಾರದಲ್ಲಿದ್ದೇನೆ ಎಂದು ಹೇಳಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com