ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಕ್ಕಿ ಢಿಕ್ಕಿ: ಬೆಂಗಳೂರಿಗೆ ಬರುತ್ತಿದ್ದ ಆಕಾಶ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ!

ಪ್ರಯಾಣಿಕರನ್ನು ಹೊತ್ತು ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಆಕಾಶಾ ಏರ್ ಸಂಸ್ಥೆಯ ವಿಮಾನಕ್ಕೆ ಹಕ್ಕಿ ಢಿಕ್ಕಿಯಾದ ಪರಿಣಾಮ ವಿಮಾನ ಮುಂಬೈಗೆ ಹಿಂದುರುಗಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಶನಿವಾರ ನಡೆದಿದೆ.

ಮುಂಬೈ: ಪ್ರಯಾಣಿಕರನ್ನು ಹೊತ್ತು ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಆಕಾಶಾ ಏರ್ ಸಂಸ್ಥೆಯ ವಿಮಾನಕ್ಕೆ ಹಕ್ಕಿ ಢಿಕ್ಕಿಯಾದ ಪರಿಣಾಮ ವಿಮಾನ ಮುಂಬೈಗೆ ಹಿಂದುರುಗಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಶನಿವಾರ ನಡೆದಿದೆ.

ಪ್ರಯಾಣಿಕರನ್ನು ಹೊತ್ತು ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಆಕಾಸಾ ಏರ್ ಕಂಪನಿಯ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದ್ದು,  ಘಟನೆಯಿಂದ ವಿಮಾನ ಮಾರ್ಗಮಧ್ಯದಲ್ಲೇ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸ್ ತೆರಳಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.

ಘಟನೆ ವೇಳೆ ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬುದು ತಿಳಿದು ಬಂದಿಲ್ಲ. ಆಕಾಸಾ ಏರ್ ವಿಮಾನ ಸಂಖ್ಯೆ AKJ1103 ವಿಮಾನ ಪ್ರಯಾಣದ ವೇಳೆ ಕ್ಯಾಬಿನ್‌ನಲ್ಲಿ ಸುಟ್ಟ ವಾಸನೆ ಬಂದಿದ್ದರಿಂದ ಪೈಲಟ್ ಕೂಡಲೇ ವಿಚಾರವನ್ನು ಎಟಿಸಿ ಟವರ್ ಗೆ ಮುಟ್ಟಿಸಿದ್ದಾರೆ. ಬಳಿಕ ವಿಮಾನವನ್ನು ವಾಪಸ್ ಮುಂಬೈ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

ಇಂಜಿನ್‌ನಲ್ಲಿ ಯಾವುದೇ ತಾಂತ್ರಿಕ ದೋಷ ಪತ್ತೆಯಾಗಿಲ್ಲ. ಮೊದಲ ಎಂಜಿನ್‌ನಲ್ಲಿ ಹಕ್ಕಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

"ತಪಾಸಣೆಯ ಸಮಯದಲ್ಲಿ ಲ್ಯಾಂಡಿಂಗ್ ನಂತರ, ವಿಮಾನದ ಎಂಜಿನ್ ಸಂಖ್ಯೆ 1 ರಲ್ಲಿ ಪಕ್ಷಿ ಅವಶೇಷಗಳು ಕಂಡುಬಂದಿವೆ. "ಬರ್ಡ್ ಸ್ಟ್ರೈಕ್ ಕಾರಣ ಸುಡುವ ವಾಸನೆ ಬಂದಿದೆ ಎಂದು ಅವರು ಹೇಳಿದರು. ಆಕಾಶ ಏರ್ ಈ ವರ್ಷ ಆಗಸ್ಟ್ 7 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
 

Related Stories

No stories found.

Advertisement

X
Kannada Prabha
www.kannadaprabha.com