
ಸಾಂದರ್ಭಿಕ ಚಿತ್ರ
ಕತಿಹಾರ್: ಬಿಹಾರದಲ್ಲಿ ಗಂಗಾನದಿ ಮತ್ತು ಅದರ ಉಪನದಿಗಳ ಸಂಗಮದಲ್ಲಿ ದೋಣಿ ಮುಳುಗಿ ಏಳು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಕತಿಹಾರ್‌ನ ಜಿಲ್ಲಾಧಿಕಾರಿ ಉಜ್ಜಯಿನಿ ಮಿಶ್ರಾ ಅವರ ಪ್ರಕಾರ, 'ದೋಣಿ 10 ಜನರನ್ನು ಹೊತ್ತೊಯ್ಯುತ್ತಿತ್ತು. ಇವರೆಲ್ಲ ಕೃಷಿ ಕಾರ್ಮಿಕರಾಗಿದ್ದು, ಕೆಲಸದಿಂದ ಹಿಂತಿರುಗುತ್ತಿದ್ದರು. ಶನಿವಾರ ತಡರಾತ್ರಿ ಗಂಗಾ ಮತ್ತು ಬಾರಾಂಡಿಯ ಸಂಗಮದಲ್ಲಿ ದೋಣಿ ಮುಳುಗಿದೆ' ಎಂದು ತಿಳಿಸಿದ್ದಾರೆ.
ಅವಘಡದಲ್ಲಿ, ದೋಣಿಯಲ್ಲಿದ್ದ ಮೂವರು ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಆದರೆ, ಉಳಿದ ಏಳು ಮಂದಿ ನಾಪತ್ತೆಯಾಗಿದ್ದಾರೆ. ಸ್ಥಳೀಯ ಡೈವರ್‌ಗಳು ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿಯ ಸಹಾಯದಿಂದ ರಾತ್ರಿಯಿಡೀ ನಡೆದ ಶೋಧ ಕಾರ್ಯಾಚರಣೆಯ ನಂತರ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಅವರು ಹೇಳಿದರು.
ಇದನ್ನೂ ಓದಿ: ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮುಳುಗಿ 50ಕ್ಕೂ ಹೆಚ್ಚು ಮಂದಿ ನಾಪತ್ತೆ
ಈಮಧ್ಯೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಪ್ರತಿ ಮೃತರ ಕುಟುಂಬಕ್ಕೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.