'ಭಯೋತ್ಪಾದನೆ ಸಹಿಸಲಸಾಧ್ಯ': ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ ಭಾರತಕ್ಕೆ ಆಗಮನ; 26/11 ದಾಳಿ ಮೃತರಿಗೆ ಶ್ರದ್ಧಾಂಜಲಿ ಅರ್ಪಣೆ

ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲಸಾಧ್ಯ.. ಭಯೋತ್ಪಾದನೆ ಸಂಪೂರ್ಣ "ದುಷ್ಟ" ಕೃತ್ಯವಾಗಿದ್ದು, ಯಾವುದೇ ಕಾರಣ ಅಥವಾ ನೆಪ ನೀಡಿ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.
ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್
ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್
Updated on

ಮುಂಬೈ: ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲಸಾಧ್ಯ.. ಭಯೋತ್ಪಾದನೆ ಸಂಪೂರ್ಣ "ದುಷ್ಟ" ಕೃತ್ಯವಾಗಿದ್ದು, ಯಾವುದೇ ಕಾರಣ ಅಥವಾ ನೆಪ ನೀಡಿ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.

ಮೂರು ದಿನಗಳ ಭೇಟಿಗಾಗಿ ಮಂಗಳವಾರ ಮಧ್ಯರಾತ್ರಿ ಭಾರತಕ್ಕೆ ಆಗಮಿಸಿರುವ ಗುಟೆರಸ್ ಅವರು, ಇಂದು ಅವರು 2008ರಲ್ಲಿ ಮುಂಬೈಯಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ವೇಳೆ ಮಾತನಾಡಿದ ಅವರು, 'ನೆಪ ಅಥವಾ ಕುಂದುಕೊರತೆ ಭಯೋತ್ಪಾದನೆಯ ಕೃತ್ಯವನ್ನು ಸಮರ್ಥಿಸಬಹುದು. ಭಯೋತ್ಪಾದನೆ ಸಂಪೂರ್ಣ ದುಷ್ಟ. ಭಯೋತ್ಪಾದನೆಯನ್ನು ಸಮರ್ಥಿಸಲು ಯಾವುದೇ ಕಾರಣಗಳಿಲ್ಲ, ಯಾವುದೇ ನೆಪ, ಕಾರಣಗಳು ಮತ್ತು ಯಾವುದೇ ಕುಂದುಕೊರತೆಗಳಿಂದ ಭಯೋತ್ಪಾದನೆಯನ್ನು ಯಾವುದೇ ದೇಶ ಕೂಡ ಸಮರ್ಥಿಸಿಕೊಳ್ಳಬಾರದು. ಭಯೋತ್ಪಾದನೆಗೆ ಇಂದಿನ ಜಗತ್ತಿನಲ್ಲಿ ಅವಕಾಶವಿಲ್ಲ ಎಂದು ಹೇಳಿದರು.

ಮುಂಬೈನ ತಾಜ್ ಹೋಟೆಲ್‌ನಲ್ಲಿ 26/11ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಎಲ್ಲರಿಗೂ ಪುಷ್ಪಾರ್ಚನೆ ಸಲ್ಲಿಸಿದರು.  ಗುಟೆರಸ್ ಅವರಲ್ಲದೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಲಂಡನ್‌ನಿಂದ ವಾಣಿಜ್ಯ ವಿಮಾನದ ಮೂಲಕ ಗುಟೆರಸ್ ಅವರು ಮುಂಬೈಗೆ ಬಂದಿಳಿದರು. ಮಹಾರಾಷ್ಟ್ರ ಸರ್ಕಾರದ ಹಿರಿಯ ಅಧಿಕಾರಿಗಳು ಅವರನ್ನು ಬರಮಾಡಿಕೊಂಡರು. ಬಳಿಕ ಅವರು ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ಗೆ ತೆರಳಿದರು.

ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುಟೆರಸ್, 'ಇತಿಹಾಸದಲ್ಲಿ ಬರ್ಬರ ಭಯೋತ್ಪಾದಕ ಕೃತ್ಯಗಳಲ್ಲಿ ಒಂದಾದ 166 ಜನರು ಪ್ರಾಣ ಕಳೆದುಕೊಂಡಿರುವ ಇಲ್ಲಿಗೆ ನಾನು ಬಂದಿದ್ದೇನೆ. ನಿಜಕ್ಕೂ ನಾನು ತುಂಬಾ ಭಾವುಕನಾಗಿದ್ದೇನೆ. ಸಂತ್ರಸ್ತರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸಲು ಬಯಸುತ್ತೇನೆ. ಅವರ ಕುಟುಂಬಗಳಿಗೆ, ಅವರ ಸ್ನೇಹಿತರಿಗೆ, ಭಾರತದ ಜನರಿಗೆ ಮತ್ತು ಮುಂಬೈನಲ್ಲಿ ಪ್ರಾಣ ಕಳೆದುಕೊಂಡಿರುವ ಪ್ರಪಂಚದ ಇತರ ಭಾಗಗಳಿಂದ ಬರುವ ಎಲ್ಲರಿಗೂ ನನ್ನ ಆಳವಾದ ಸಂತಾಪಗಳನ್ನುಸೂಚಿಸುತ್ತೇನೆ ಎಂದರು.

"ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಭೂಮಿಯ ಮೇಲಿನ ಪ್ರತಿಯೊಂದು ದೇಶಕ್ಕೂ ಜಾಗತಿಕ ಆದ್ಯತೆಯಾಗಿರಬೇಕು ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡುವುದು ವಿಶ್ವಸಂಸ್ಥೆಗೆ ಮೂಲ ಆದ್ಯತೆಯಾಗಿದೆ ಎಂದರು. ಇದೇ ವೇಳೆ ತನ್ನ ಮೊದಲ ಸುಧಾರಣೆಯನ್ನು ನೆನಪಿಸಿಕೊಂಡ ಗುಟೆರಸ್, ಭಯೋತ್ಪಾದನಾ ನಿಗ್ರಹ ಕಚೇರಿಯನ್ನು ರಚಿಸುವ ಪ್ರಸ್ತಾಪವನ್ನು ಮಾಡಿದ್ದೇನೆ, ಅದು ಇಂದು ಅಸ್ತಿತ್ವದಲ್ಲಿದೆ. ಭಯೋತ್ಪಾದಕ ಕೃತ್ಯಗಳನ್ನು ತಡೆಗಟ್ಟಲು ಮತ್ತು ಏಕಕಾಲದಲ್ಲಿ ಹೋರಾಡಲು ಸಾಧ್ಯವಾಗುವಂತೆ ಎಲ್ಲಾ ದೇಶಗಳಿಗೆ ಅಗತ್ಯವಿರುವ ರೀತಿಯ ವ್ಯವಸ್ಥೆಗಳು ಮತ್ತು ಸಲಹೆ ಮತ್ತು ತರಬೇತಿಯನ್ನು ಒದಗಿಸಲು ಸದಸ್ಯ ರಾಷ್ಟ್ರಗಳೊಂದಿಗೆ ಸಹಕರಿಸುವ ಉದ್ದೇಶದಿಂದ ಕಚೇರಿಯನ್ನು ರಚಿಸಲಾಗಿದೆ ಎಂದರು.

ನವೆಂಬರ್ 26, 2008 ರಂದು, 10 ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರು ಸಮುದ್ರದ ಮೂಲಕ ಮುಂಬೈ ಪ್ರವೇಶಿದ್ದರು. ಈ ವೇಳೆ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಕೊಂದು ಮತ್ತು ಮುಂಬೈ ಅನ್ನು ಮೂರು ದಿನಗಳ ಮುತ್ತಿಗೆ ಹಾಕಿಕೊಂಡಿದ್ದರು. ಈ ವೇಳೆ ಅನೇಕರು ಗಾಯಗೊಂಡರು.

ಒಂಬತ್ತು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದಿದ್ದರೂ, ಈ ಕಾರ್ಯಾಚರಣೆಯಲ್ಲಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನಾ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ ಮತ್ತು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಸಲಸ್ಕರ್ ದಾಳಿಯಲ್ಲಿ ಹುತಾತ್ಮರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com