ತೆಲಂಗಾಣ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ

ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಭಾನುವಾರ ತೆಲಂಗಾಣವನ್ನು ಪ್ರವೇಶಿಸಿದೆ.
ಭಾನುವಾರ ಭಾರತ್ ಜೋಡೋ ಯಾತ್ರೆಯಲ್ಲಿ ತನ್ನ ಬೆಂಬಲಿಗರೊಂದಿಗೆ ರಾಹುಲ್ ಗಾಂಧಿ
ಭಾನುವಾರ ಭಾರತ್ ಜೋಡೋ ಯಾತ್ರೆಯಲ್ಲಿ ತನ್ನ ಬೆಂಬಲಿಗರೊಂದಿಗೆ ರಾಹುಲ್ ಗಾಂಧಿ

ಹೈದರಾಬಾದ್: ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಭಾನುವಾರ ತೆಲಂಗಾಣವನ್ನು ಪ್ರವೇಶಿಸಿದೆ.

ಯಾತ್ರೆ ರಾಜ್ಯ ಪ್ರವೇಶಿಸಿದಾಗ ತೆಲಂಗಾಣ-ಕರ್ನಾಟಕ ಗಡಿಯಲ್ಲಿ ತೆಲಂಗಾಣ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರಿಗೆ ಭವ್ಯ ಸ್ವಾಗತ ಕೋರಿದರು.

ಕಾಂಗ್ರೆಸ್ ಲೋಕಸಭಾ ಸದಸ್ಯ ಮತ್ತು ತೆಲಂಗಾಣದ ಪಕ್ಷದ ವ್ಯವಹಾರಗಳ ಉಸ್ತುವಾರಿ ಮಾಣಿಕ್ಕಂ ಠಾಗೋರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಮತ್ತು ಪಕ್ಷದ ಹಲವಾರು ಮುಖಂಡರು ಗಾಂಧಿ ಅವರನ್ನು ಸ್ವಾಗತಿಸಿದರು.

ತೆಲಂಗಾಣಕ್ಕೆ ಯಾತ್ರೆ ಹೊರಟಾಗ ಗಡಿಯಲ್ಲಿ ಕೃಷ್ಣಾ ನದಿಯ ಸೇತುವೆಯ ಮೇಲೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಇದಾದ ಬಳಿಕ ರಾಹುಲ್ ಗಾಂಧಿ ತೆಲಂಗಾಣದಲ್ಲಿ ಸ್ವಲ್ಪ ಕಾಲ ನಡೆದರು ಮತ್ತು ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಗುಡೆಬೆಳ್ಳೂರಿನಲ್ಲಿ ತಂಗಿದರು. ಅವರು ಹೆಲಿಕಾಪ್ಟರ್ ಮೂಲಕ ಹೈದರಾಬಾದ್‌ಗೆ ತೆರಳಿದ್ದು, ನಂತರ ದೆಹಲಿಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಭಾನುವಾರ ಮಧ್ಯಾಹ್ನದಿಂದ ಅಕ್ಟೋಬರ್ 26 ರವರೆಗೆ ಮೂರು ದಿನಗಳ ಕಾಲ ದೀಪಾವಳಿ ಹಬ್ಬದ ಅಂಗವಾಗಿ ಯಾತ್ರೆಗೆ ವಿರಾಮ ನೀಡಲಾಗುವುದು ಎಂದು ತೆಲಂಗಾಣ ಪಿಸಿಸಿಯ ಪತ್ರಿಕಾ ಪ್ರಕಟಣೆ ಶನಿವಾರ ತಿಳಿಸಿದೆ.

ಬಳಿಕ ಅಕ್ಟೋಬರ್ 27ರಂದು ಬೆಳಗ್ಗೆ ಗುಡೇಬೆಳ್ಳೂರಿನಿಂದ ಯಾತ್ರೆ ಪುನರಾರಂಭವಾಗಲಿದೆ. ಇದು ಮಕ್ತಾಲ್ ತಲುಪಿ ತೆಲಂಗಾಣದಲ್ಲಿ 16 ದಿನಗಳ ಕಾಲ ಮುಂದುವರಿಯಲಿದ್ದು, 19 ವಿಧಾನಸಭೆ ಮತ್ತು ಏಳು ಸಂಸದೀಯ ಕ್ಷೇತ್ರಗಳನ್ನೊಳಗೊಂಡ 375 ಕಿ.ಮೀ ದೂರದವರೆಗೆ ಸಾಗಿ ನವೆಂಬರ್ 7ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ.

ಗಾಂಧಿ ಅವರು ಪ್ರತಿದಿನ 20-25 ಕಿಮೀ 'ಪಾದಯಾತ್ರೆ' ಕೈಗೊಳ್ಳಲಿದ್ದಾರೆ ಮತ್ತು ಪಾದಯಾತ್ರೆಯಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಬುದ್ಧಿಜೀವಿಗಳು, ವಿವಿಧ ಸಮುದಾಯಗಳ ಮುಖಂಡರು, ರಾಜಕಾರಣಿಗಳು, ಕ್ರೀಡೆ, ಉದ್ಯಮ ಮತ್ತು ಚಿತ್ರರಂಗದ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ.
ತೆಲಂಗಾಣದ ಕೆಲವು ಪ್ರಾರ್ಥನಾ ಮಂದಿರಗಳು, ಮಸೀದಿಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಲಿದ್ದು, ಅಂತರ ಧರ್ಮೀಯ ಪ್ರಾರ್ಥನೆಯನ್ನೂ ಸಲ್ಲಿಸಲಾಗುವುದು ಎಂದು ಟಿಪಿಸಿಸಿ ತಿಳಿಸಿದೆ.

ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಯಾತ್ರೆಯು ತೆಲಂಗಾಣಕ್ಕೆ ಪ್ರವೇಶಿಸುವ ಮುನ್ನ ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಯಾತ್ರೆ ಪೂರ್ಣಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com