ದೇವರ ಮುಂದಿಟ್ಟಿದ್ದ ದೀಪದಿಂದ ಬಸ್'ಗೆ ಬೆಂಕಿ: ಇಬ್ಬರು ಸಜೀವ ದಹನ
ದೀಪಾವಳಿ ಹಿನ್ನೆಲೆಯಲ್ಲಿ ಪೂಜೆ ಮಾಡಿ ದೇವರ ಮುಂದೆ ಇರಿಸಿದ್ದ ದೀಪದಿಂದ ಬಸ್'ಗೆ ಬೆಂಕಿ ಹೊತ್ತಿಕೊಂಡು ಬಸ್ ಚಾಲಕ ಹಾಗೂ ನಿರ್ವಾಹಕ ಸಜೀವ ದಹನವಾಗಿರುವ ಘಟನೆ ರಾಂಚಿಯ ಖಡ್ಗರಾ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
Published: 25th October 2022 01:09 PM | Last Updated: 25th October 2022 01:09 PM | A+A A-

ಬೆಂಕಿಗೆ ಆಹುತಿಯಾಗಿರುವ ಬಸ್.
ರಾಂಚಿ: ದೀಪಾವಳಿ ಹಿನ್ನೆಲೆಯಲ್ಲಿ ಪೂಜೆ ಮಾಡಿ ದೇವರ ಮುಂದೆ ಇರಿಸಿದ್ದ ದೀಪದಿಂದ ಬಸ್'ಗೆ ಬೆಂಕಿ ಹೊತ್ತಿಕೊಂಡು ಬಸ್ ಚಾಲಕ ಹಾಗೂ ನಿರ್ವಾಹಕ ಸಜೀವ ದಹನವಾಗಿರುವ ಘಟನೆ ರಾಂಚಿಯ ಖಡ್ಗರಾ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
ಮಾಹಿತಿ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆ, ಬಸ್ನೊಳಗೆ ಎರಡು ಸುಟ್ಟ ದೇಹಗಳು ಪತ್ತೆಯಾಗಿವೆ.
ದೀಪಾವಳಿ ಹಿನ್ನೆಲೆಯಲ್ಲಿ ಬಸ್ನಲ್ಲಿ ದೀಪ ಹಚ್ಚಿ ಚಾಲಕ ಮದನ್ ಮತ್ತು ಖಲಾಸಿ ಇಬ್ರಾಹಿಂ ಮಲಗಿದ್ದರು. ಈ ವೇಳೆ ದೀಪದಿಂದ ಬಸ್'ಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಇಬ್ಬರೂ ಸಜೀವ ದಹನವಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಆರಂಭಿಸಿದ್ದಾರೆ.