ಬಿಹಾರ: ಕಳ್ಳಭಟ್ಟಿ ಸೇವಿಸಿ 5 ಮಂದಿ ಸಾವು, ಪೊಲೀಸ್ ತನಿಖೆ ಆರಂಭ

ಮದ್ಯ ಮಾರಾಟ ನಿಷೇಧಗೊಂಡಿರುವ ಬಿಹಾರದಲ್ಲಿ ಕಳ್ಳಭಟ್ಟಿ ಕುಡಿದು 5 ಮಂದಿ ಸಾವನ್ನಪ್ಪಿದ್ದಾರೆ. ರೋಹ್ತಾಸ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಒಂದೇ ಕುಟುಂಬದ ಇಬ್ಬರು ಯುವಕರು ಜೀವ ಕಳೆದುಕೊಂಡಿದ್ದಾರೆ.
ಕಳ್ಳಭಟ್ಟಿ ದುರಂತ
ಕಳ್ಳಭಟ್ಟಿ ದುರಂತ

ಪಾಟ್ನ: ಮದ್ಯ ಮಾರಾಟ ನಿಷೇಧಗೊಂಡಿರುವ ಬಿಹಾರದಲ್ಲಿ ಕಳ್ಳಭಟ್ಟಿ ಕುಡಿದು 5 ಮಂದಿ ಸಾವನ್ನಪ್ಪಿದ್ದಾರೆ. ರೋಹ್ತಾಸ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಒಂದೇ ಕುಟುಂಬದ ಇಬ್ಬರು ಯುವಕರು ಜೀವ ಕಳೆದುಕೊಂಡಿದ್ದಾರೆ.

ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿರುವವರನ್ನು ಮನೀಷ್ ಸಿಂಗ್ (40) ಸಂಜಯ್ ಯಾದವ್ (40)  ಧನಂಜಯ್ ಸಿಂಗ್ (40) ಬುದ್ಧು ಪಾಸ್ವಾನ್ (28) ಚಂದನ್ ಪಾಸ್ವಾನ್ (24) ಎಂದು ಗುರುತಿಸಲಾಗಿದೆ. ಇಬ್ಬರು ಸಂತ್ರಸ್ತರ ಸಹೋದರ ಸುಖ್ ನಂದನ್ ಪಾಸ್ವಾನ್ ಸಹ ಕಳ್ಳಭಟ್ಟಿಗೆ ಗುರಿಯಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ಸಂಜಯ್ ಯಾದವ್ ಎಂಬಾತ ದೀಪಾವಳಿ ರಾತ್ರಿಯಂದು ಆತ ಮತ್ತೇರಿದ ಸ್ಥಿತಿಯಲ್ಲಿ ಮನೆಗೆ ಬಂದಿದ್ದ, ಆರೋಗ್ಯದಲ್ಲಿ ಏರುಪೇರಾಗಿತ್ತು. ಮರು ದಿನ ಇನ್ನಿಬ್ಬರು ಬುದ್ಧು ಪಾಸ್ವಾನ್ ಹಾಗೂ ಮನೀಷ್ ಸಿಂಗ್ ಇದೇ ರೀತಿಯ ಲಕ್ಷಣಗಳೊಂದಿಗೆ ಅನಾರೋಗ್ಯಕ್ಕೀಡಾದರು. ಚಿಕಿತ್ಸೆ ಕೊಡಿಸುತ್ತಿದ್ದಾಗಲೇ ಸೋಮವಾರ-ಮಂಗಳವಾರದ ಮಧ್ಯರಾತ್ರಿ ಮೂವರೂ ಸಾವನ್ನಪ್ಪಿದರು, ಸಂಜಯ್ ಸಿಂಗ್ ಹಾಗೂ ಧನಂಜಯ್ ಪಾಸ್ವಾನ್ ಇಬ್ಬರು ಬುಧವಾರ ನಿಧನರಾದರು. ಕಳ್ಳಭಟ್ಟಿಯಿಂದಾಗಿ ಮೂವರು ಸಾವನ್ನಪ್ಪಿರುವ ಘಟನೆ ಸ್ಥಳಿಯರನ್ನು ಆತಂಕಕ್ಕೀಡುಮಾಡಿದೆ.

ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಗಸ್ಟ್ ನಲ್ಲಿ ಇದೇ ಮಾದರಿಯಲ್ಲಿ ಕಳ್ಳಭಟ್ಟಿ ಕುಡಿದು 9 ಮಂದಿ ಸಾವನ್ನಪ್ಪಿದ್ದರು. 17 ಮಂದಿ ಕಣ್ಣು ಕಳೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com