ಯುದ್ಧ ವಿಮಾನಗಳ ಕಾರ್ಯಾಚರಣೆಗಾಗಿ ಲಡಾಖ್ ಏರ್‌ಫೀಲ್ಡ್ ಮೇಲ್ದರ್ಜೆಗೇರಿಸಲು ಭಾರತ ಮುಂದು

ಭಾರತ ಪೂರ್ವ ಲಡಾಖ್‌ನ ಎಲ್‌ಎಸಿಯಿಂದ 50 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿ ಯುದ್ಧ ವಿಮಾನ ಕಾರ್ಯಾಚರಣೆಗಾಗಿ ತನ್ನ ನ್ಯೋಮಾ ಸುಧಾರಿತ ಲ್ಯಾಂಡಿಂಗ್ ಗ್ರೌಂಡ್ ಅನ್ನು ನವೀಕರಿಸುವ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಲಡಾಕ್ ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು
ಲಡಾಕ್ ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು

ನವದೆಹಲಿ: ಚೀನಾ ತನ್ನ ಭಾಗದಲ್ಲಿ ಹೊಸ ಮಿಲಿಟರಿ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ ಎಂಬ ವರದಿಗಳ ನಡುವೆ, ಭಾರತ ಪೂರ್ವ ಲಡಾಖ್‌ನ ಎಲ್‌ಎಸಿಯಿಂದ 50 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿ ಯುದ್ಧ ವಿಮಾನ ಕಾರ್ಯಾಚರಣೆಗಾಗಿ ತನ್ನ ನ್ಯೋಮಾ ಸುಧಾರಿತ ಲ್ಯಾಂಡಿಂಗ್ ಗ್ರೌಂಡ್ ಅನ್ನು ನವೀಕರಿಸುವ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. 

ಚೀನಾದೊಂದಿಗೆ ಗಡಿ ಸಂಘರ್ಷದ ಸಮಯದಲ್ಲಿ ನ್ಯೋಮಾ ಏರ್‌ಫೀಲ್ಡ್ ಅನ್ನು ಸಿಬ್ಬಂದಿ ಮತ್ತು ಸಾಮಗ್ರಿಗಳ ಸಾಗಣೆಗೆ ಬಳಸಲಾಗಿದೆ. ಅಲ್ಲದೆ ಚಿನೂಕ್ ಹೆವಿ-ಲಿಫ್ಟ್ ಚಾಪರ್‌ಗಳು ಮತ್ತು C-130J ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದೆ.

"ಅಗತ್ಯವಿರುವ ಹೆಚ್ಚಿನ ಅನುಮತಿಗಳು ಮತ್ತು ಅನುಮೋದನೆಗಳು ಈಗಾಗಲೇ ಬಂದಿರುವುದರಿಂದ ಎಎಲ್ ಜಿಯನ್ನು ಯುದ್ಧ ವಿಮಾನ ಕಾರ್ಯಾಚರಣೆಗಳಿಗಾಗಿ ಶೀಘ್ರದಲ್ಲೇ ನವೀಕರಿಸಲಾಗುವುದು. ಯೋಜನೆಗಳ ಪ್ರಕಾರ, ಹೊಸ ಏರ್‌ಫೀಲ್ಡ್ ಮತ್ತು ಮಿಲಿಟರಿ ಮೂಲಸೌಕರ್ಯಗಳ ನಿರ್ಮಾಣವನ್ನು ಗಡಿ ರಸ್ತೆಗಳ ಸಂಸ್ಥೆ ಮಾಡಲಿದೆ" ಎಂದು ಹಿರಿಯರು ರಕ್ಷಣಾ ಅಧಿಕಾರಿಗಳು ಎಎನ್‌ಐಗೆ ತಿಳಿಸಿದ್ದಾರೆ.

ಮೋದಿ ಸರ್ಕಾರ ಈ ಪ್ರದೇಶದಲ್ಲಿ ಅನುಮತಿ ನೀಡಿದ ನಂತರ ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ನಿರ್ಮಾಣ ಕಾರ್ಯದ ಉದ್ಘಾಟನೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಪೂರ್ವ ಲಡಾಖ್‌ನ ದೌಲತ್ ಬೇಗ್ ಓಲ್ಡಿ(ಡಿಬಿಒ), ಫುಕ್ಚೆ ಮತ್ತು ನ್ಯೋಮಾ ಸೇರಿದಂತೆ ಚೀನಾದೊಂದಿಗೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಿಂದ ಕೆಲವು ನಿಮಿಷಗಳ ದೂರದಲ್ಲಿರುವ ವಾಯುನೆಲೆಗಳನ್ನು ಅಭಿವೃದ್ಧಿಪಡಿಸಲು ಭಾರತ ಹಲವು ಆಯ್ಕೆಗಳನ್ನು ಪರಿಗಣಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com