ಕೋವಿಡ್-19: ಭಾರತದಲ್ಲಿ 7,946 ಹೊಸ ಪ್ರಕರಣ, ಸಕ್ರಿಯ ಪ್ರಕರಣ ಸಂಖ್ಯೆ 62,748 ಕ್ಕೆ ಇಳಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,946 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇಂದು ಗುರುವಾರ ಸೆಪ್ಟೆಂಬರ್ 1 ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಒಟ್ಟು ಚೇತರಿಕೆಯ ಪ್ರಮಾಣವು ಸುಮಾರು ಶೇಕಡಾ 98.67ರಷ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,946 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇಂದು ಗುರುವಾರ ಸೆಪ್ಟೆಂಬರ್ 1 ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಒಟ್ಟು ಚೇತರಿಕೆಯ ಪ್ರಮಾಣವು ಸುಮಾರು ಶೇಕಡಾ 98.67ರಷ್ಟಿದೆ. ಕೊರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ ದೇಶದಲ್ಲಿ 4,38,45,680 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 9,828 ಮಂದಿ ಗುಣಮುಖರಾಗಿದ್ದಾರೆ. 

ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 62,748 ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತೋರಿಸಿವೆ. ನಿನ್ನೆ ಸಕ್ರಿಯ ಪ್ರಕರಣಗಳು 64,667ರಷ್ಟಿತ್ತು. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ COVID-19 ಪ್ರಕರಣಗಳು 1,919 ಇಳಿಕೆಯಾಗಿವೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ ಶೇಕಡಾ 0.14ರಷ್ಟು ಇದೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಇದುವರೆಗೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 5,27,911 ಆಗಿದೆ. ಭಾರತದಲ್ಲಿ, ಮಾರ್ಚ್ 2020 ರಲ್ಲಿ COVID ಸಾಂಕ್ರಾಮಿಕ ರೋಗದಿಂದ ಮೊದಲ ಸಾವು ವರದಿಯಾಗಿತ್ತು. ಇಂದು ದೇಶದಲ್ಲಿ ದೈನಂದಿನ ಪಾಸಿಟಿವ್ ಪ್ರಮಾಣವು ಶೇಕಡಾ 2.98 ರಷ್ಟಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ನಿನ್ನೆ ಅಂದರೆ ಆಗಸ್ಟ್ 31 ರವರೆಗೆ 88,61,47,613 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ನಿನ್ನೆ ಒಂದೇ ದಿನ 2,66,477 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ದೆಹಲಿಯಲ್ಲಿ ನಿನ್ನೆ 377 ಹೊಸ ಕೊರೋನಾ ವೈರಸ್ ಪ್ರಕರಣಗಳು ಮತ್ತು ಎರಡು ಸಾವುಗಳು ಸಂಭವಿಸಿವೆ. ದೆಹಲಿಯ ಸೋಂಕಿನ ಸಂಖ್ಯೆ 19,99,617 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 26,469 ಕ್ಕೆ ಏರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com