ವಿಡಿಯೊ: ಲಿಫ್ಟ್‌ನಲ್ಲಿ ಸಾಕು ನಾಯಿ ಮಗುವನ್ನು ಕಚ್ಚಿದರೂ ಸುಮ್ಮನೆ ನೋಡುತ್ತಿದ್ದ ಮಹಿಳೆ! ನೆಟ್ಟಿಗರ ಆಕ್ರೋಶ

ವಿಡಿಯೋದಲ್ಲಿ, ತನ್ನ ಸಾಕು ನಾಯಿ ಬಾಲಕನೊಬ್ಬನಿಗೆ ಕಚ್ಚಿ, ಆತ ನೋವಿನಿಂದ ಕುಣಿದಾಡುತ್ತಿದ್ದರೂ ನಾಯಿಯ ಯಜಮಾನಿ ಮಾತ್ರ ಪ್ರತಿಕ್ರಿಯೆಯೇ ನೀಡದೆ ನಿಂತಿರುವುದು ಸೆರೆಯಾಗಿದೆ.
ಗಾಜಿಯಾಬಾದ್ ಸೊಸೈಟಿಯಲ್ಲಿ ನಡೆದ ಲಿಫ್ಟ್‌ನಲ್ಲಿನ ದೃಶ್ಯ
ಗಾಜಿಯಾಬಾದ್ ಸೊಸೈಟಿಯಲ್ಲಿ ನಡೆದ ಲಿಫ್ಟ್‌ನಲ್ಲಿನ ದೃಶ್ಯ

ನವದೆಹಲಿ: 'ನೈತಿಕತೆ ಎಲ್ಲಿದೆ,' ಎಂದು ಟ್ವಿಟರ್ ಬಳಕೆದಾರರೊಬ್ಬರು ಕೇಳುತ್ತಾರೆ. ಇದೇ ಟ್ವೀಟ್‌ನಲ್ಲಿ ಗಾಜಿಯಾಬಾದ್ ಸೊಸೈಟಿಯಲ್ಲಿನ ಲಿಫ್ಟ್‌ನಲ್ಲಿ ನಡೆದ ಘಟನೆಯೊಂದರ ಸಿಸಿಟಿವಿ ದೃಶ್ಯಾವಳಿಯ ಕ್ಲಿಪ್ ಅನ್ನು ಲಗತ್ತಿಸಿದ್ದಾರೆ. ವಿಡಿಯೋದಲ್ಲಿ, ತನ್ನ ಸಾಕು ನಾಯಿ ಬಾಲಕನೊಬ್ಬನಿಗೆ ಕಚ್ಚಿ, ಆತ ನೋವಿನಿಂದ ಕುಣಿದಾಡುತ್ತಿದ್ದರೂ ನಾಯಿಯ ಯಜಮಾನಿ ಮಾತ್ರ ಪ್ರತಿಕ್ರಿಯೆಯೇ ನೀಡದೆ ನಿಂತಿರುವುದು ಸೆರೆಯಾಗಿದೆ.

ಸೋಮವಾರ ಸಂಜೆ ನಗರದ ಚಾರ್ಮ್ಸ್ ಕ್ಯಾಸಲ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ ಎಂದು ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ತುಣುಕಿನ ಪ್ರಕಾರ ವರದಿಯಾಗಿದೆ. ಬಾಲಕನೊಬ್ಬ ಮೊದಲೇ ಲಿಫ್ಟ್‌‌ನಲ್ಲಿರುತ್ತಾನೆ. ಬಳಿಕ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ತನ್ನ ಮುದ್ದಿನ ನಾಯಿಯೊಂದಿಗೆ ಲಿಫ್ಟ್‌ ಪ್ರವೇಶಿಸುತ್ತಾರೆ. ಈ ವೇಳೆ ಬಾಲಕ ಲಿಫ್ಟ್ ಮುಂಭಾಗಕ್ಕೆ ಚಲಿಸುತ್ತಿದ್ದಂತೆ, ನಾಯಿ ಮೇಲಕ್ಕೆ ಹಾರಿ ಆತನ ಕಾಲಿಗೆ ಕಚ್ಚುತ್ತದೆ.

ಬಳಿಕ ನೋವಿನಿಂದ ಬಾಲಕ ಜಿಗಿಯುತ್ತಿದ್ದರೂ, ಮಹಿಳೆಯಿಂದ ಯಾವುದೇ ಪ್ರತಿಕ್ರಿಯೆಯೇ ಇರುವುದಿಲ್ಲ. ಬಳಿಕ ಆಕೆ ಲಿಫ್ಟ್‌ನಿಂದ ಸುಮ್ಮನೆ ಹೊರಹೋಗುತ್ತಾರೆ. ಮಹಿಳೆಯ ಈ ನಡವಳಿಕೆಯು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 'ನಾಚಿಕೆಗೇಡು, ಆಕೆ ಸಂಪೂರ್ಣವಾಗಿ ನೋವಿನಿಂದ ಬಳಲುತ್ತಿರುವ ಬಾಲಕನಿಗಿಂತ ನಾಯಿಗಾಗಿ ಹೆಚ್ಚು ತಲೆಕೆಡಿಸಿಕೊಂಡಿದ್ದಾಳೆ. ಆದ್ದರಿಂದ ಈ ನಿರ್ದಯ ಮಹಿಳೆಗೆ ಶಿಕ್ಷೆಯಾಗಬೇಕು' ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಕ್ಲಿಪ್ ಅನ್ನು ಪೋಸ್ಟ್ ಮಾಡಿದ ಟ್ವಿಟರ್ ಖಾತೆಯು ಈ ತುಣುಕು ಚಾರ್ಮ್ಸ್ ಕ್ಯಾಸಲ್, ರಾಜ್‌ನಗರ ಎಕ್ಸ್‌ಟೆನ್ಶನ್, ಗಾಜಿಯಾಬಾದ್‌‌ನಲ್ಲಿ ನಡೆದದ್ದು ಎಂದು ಹೇಳಿದೆ ಮತ್ತು ಸ್ಥಳೀಯ ಪೊಲೀಸರನ್ನು ಸಹ ಟ್ಯಾಗ್ ಮಾಡಿದ್ದು, 'ಯಾರೊಬ್ಬರೂ ನೋಡುತ್ತಿಲ್ಲ ಎನ್ನುವ ಕಾರಣಕ್ಕೆ ಇಲ್ಲಿ ನೈತಿಕತೆ ಮರೆಯಾಗಿದೆ' ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com