126 ದಿನಗಳಲ್ಲಿ 11 ಲಕ್ಷ ಯಾತ್ರಿಕರಿಂದ ಕೇದಾರನಾಥ ದರ್ಶನ: ಹಿಂದಿನ ಎಲ್ಲಾ ದಾಖಲೆ ಪತನ

ಉತ್ತರಾಖಂಡ ಯಾತ್ರಾಧಾಮ ಕೇದಾರನಾಥಕ್ಕೆ ಕಳೆದ 126 ದಿನಗಳಲ್ಲಿ 11 ಲಕ್ಷ ಯಾತ್ರಿಕರು ಆಗಮಿಸಿದ್ದು, ಇದು ಕ್ಷೇತ್ರದ ಇತಿಹಾಸದಲ್ಲಿಯೇ ಹೊಸ ದಾಖಲೆಯಾಗಿದೆ.
ಕೇದಾರನಾಥ
ಕೇದಾರನಾಥ
Updated on

ಕೇದಾರನಾಥ: ಉತ್ತರಾಖಂಡ ಯಾತ್ರಾಧಾಮ ಕೇದಾರನಾಥಕ್ಕೆ ಕಳೆದ 126 ದಿನಗಳಲ್ಲಿ 11 ಲಕ್ಷ ಯಾತ್ರಿಕರು ಆಗಮಿಸಿದ್ದು, ಇದು ಕ್ಷೇತ್ರದ ಇತಿಹಾಸದಲ್ಲಿಯೇ ಹೊಸ ದಾಖಲೆಯಾಗಿದೆ.

ಕಳೆದ 126 ದಿನಗಳಲ್ಲಿ ಹನ್ನೊಂದು ಲಕ್ಷ ಯಾತ್ರಾರ್ಥಿಗಳು ಕೇದಾರನಾಥ ಧಾಮವನ್ನು ತಲುಪಿದ್ದು, ಈ ವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಈ ಹಿಂದೆ 2019 ರಲ್ಲಿ 10 ಲಕ್ಷ ಯಾತ್ರಿಕರು ಕ್ಷೇತ್ರಕ್ಕೆ ಆಗಮಿಸಿದ್ದರು. ಇದು ಈ ವರೆಗಿನ ಗರಿಷ್ಠ ದಾಖಲೆಯಾಗಿತ್ತು. ಆದರೆ ಈ ಬಾರಿ ಈ ದಾಖಲೆ ಕೂಡ ಪತನವಾಗಿದೆ.

ಈ ಕುರಿತು ಅಧಿಕಾರಿಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖವಾಗಿದ್ದು, ಹಾಲಿ ವರ್ಷದ ಯಾತ್ರೆ ವೇಳೆ ದಾಖಲೆ ಸಂಖ್ಯೆಯ ಯಾತ್ರಿಕರು ಆಗಮಿಸಿದ್ದಾರೆ. ಎರಡು ವರ್ಷಗಳಿಂದ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಯಾತ್ರೆಗೆ ತೊಂದರೆಯಾಗಿತ್ತು, ಆದರೆ ಈ ಬಾರಿ ಯಾತ್ರೆಯನ್ನು ಸರಿಯಾಗಿ ನಡೆಸಲಾಗುತ್ತಿದೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ಹೇಳಿದರು.

"ಆರಂಭಿಕ ಹಂತದಲ್ಲಿ ಅತಿಯಾದ ಜನಸಂದಣಿಯಿಂದ ಸಮಸ್ಯೆಗಳಿದ್ದವು. ಸ್ವಚ್ಛತೆಯ ವ್ಯವಸ್ಥೆಯಲ್ಲಿಯೂ ಸ್ವಲ್ಪ ಕೊರತೆ ಕಂಡುಬಂದಿತ್ತು. ಆದರೆ ಎಲ್ಲಾ ವ್ಯವಸ್ಥೆಗಳನ್ನು ಈಗ ಸರಿಪಡಿಸಲಾಗಿದೆ. ಆದ್ದರಿಂದ, ಐದು ನೂರಕ್ಕೂ ಹೆಚ್ಚು ನೈರ್ಮಲ್ಯ ಕಾರ್ಯಕರ್ತರು ರುದ್ರಪ್ರಯಾಗದಿಂದ ಕೇದಾರನಾಥಕ್ಕೆ ತಮ್ಮ ಸೇವೆಯನ್ನು ಒದಗಿಸುತ್ತಿದ್ದಾರೆ. ಅಲ್ಲದೆ, ಪ್ರಯಾಣಕ್ಕೆ ಸಂಬಂಧಿಸಿದ ಇಲಾಖೆಗಳು ತಮ್ಮ ಕೆಲಸದ ಬಗ್ಗೆ ನಿರಂತರವಾಗಿ ಗಮನ ಹರಿಸುತ್ತಿವೆ. ಪ್ರಯಾಣದಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದ್ದು, ಧಾಮದಲ್ಲಿ ಯಾತ್ರಾರ್ಥಿಗಳಿಗೆ ಕಾಲ್ನಡಿಗೆ ಮಾರ್ಗ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಯಾತ್ರೆ ಮುಕ್ತಾಯವಾಗಲು ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಎಲ್ಲಾ ಹೋಟೆಲ್ ಲಾಡ್ಜ್ ಗಳನ್ನು ಮುಂಗಡವಾಗಿ ಮಾತ್ರ ಕಾಯ್ದಿರಿಸಲಾಗಿದೆ. ಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೇದಾರನಾಥ ದರ್ಶಕ್ಕೆ ಇನ್ನೂ ಒಂದೂವರೆ ತಿಂಗಳ ಕಾಲಾವಕಾಶವಿದ್ದು, ಕೇದಾರನಾಥ ಯಾತ್ರಾರ್ಥಿಗಳ ಸಂಖ್ಯೆ 13 ಲಕ್ಷ ದಾಟುವ ನಿರೀಕ್ಷೆಯಿದೆ  ಎಂದು ಡಿಎಂ ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com