ಹೈದ್ರಾಬಾದ್: ಸಿಎಂ ಹಿಮಂತ ಬಿಸ್ವಾ ಶರ್ಮಾ ರ್‍ಯಾಲಿಯಲ್ಲಿ ಮೈಕ್ ಕಿತ್ತುಕೊಂಡ ವ್ಯಕ್ತಿ! ವಿಡಿಯೋ

ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ರ್‍ಯಾಲಿ ವೇಳೆ ವ್ಯಕ್ತಿಯೊಬ್ಬ, ಮೈಕ್ ನ್ನು ಸ್ಟ್ಯಾಂಡ್ ನಿಂದ ಎಳೆದ ಘಟನೆ ನಡೆಯಿತು. ಈ ಅನಿರೀಕ್ಷಿತ ಘಟನೆಯಿಂದ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಗಾಬರಿಯಾದವರಂತೆ ಕಂಡು ನಿಂತಲ್ಲೇ ನೋಡುತ್ತಿದ್ದರು.
ಹಿಮಂತ್ ಬಿಸ್ವಾ ಶರ್ಮಾ
ಹಿಮಂತ್ ಬಿಸ್ವಾ ಶರ್ಮಾ

ಹೈದರಾಬಾದ್: ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ರ್‍ಯಾಲಿ ವೇಳೆ ವ್ಯಕ್ತಿಯೊಬ್ಬ, ಮೈಕ್ ನ್ನು ಸ್ಟ್ಯಾಂಡ್ ನಿಂದ ಎಳೆದ ಘಟನೆ ನಡೆಯಿತು. ಈ ಅನಿರೀಕ್ಷಿತ ಘಟನೆಯಿಂದ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಗಾಬರಿಯಾದವರಂತೆ ಕಂಡು ನಿಂತಲ್ಲೇ ನೋಡುತ್ತಿದ್ದರು.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಥವಾ ಕೆಸಿಆರ್ ಪಕ್ಷದ ಬಣ್ಣ ಹೊಂದಿರುವ ಸ್ಕಾರ್ಫ್ ಧರಿಸಿದ್ದ ವ್ಯಕ್ತಿಯನ್ನು ತ್ವರಿತವಾಗಿ ವೇದಿಕೆಯಿಂದ ಕೆಳಗಿಳಿಸಲಾಯಿತು.

ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ಗಣೇಶ ಹಬ್ಬ ಮತ್ತು ಇತರ ಕಾರ್ಯಕ್ರಮಗಳಿಗೆ ಭಾಗ್ಯನಗರ ಗಣೇಶ ಉತ್ಸವ ಸಮಿತಿಯ ಅತಿಥಿಯಾಗಿ ಹೈದರಾಬಾದ್‌ನಲ್ಲಿದ್ದಾರೆ. ಮುಂಜಾನೆ ನಗರದ ಪ್ರಮುಖ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ಅಸ್ಸಾಂ ಮುಖ್ಯಮಂತ್ರಿ, ತೆಲಂಗಾಣ ಮುಖ್ಯಮಂತ್ರಿಯ ವಿರುದ್ಧ ವಾಗ್ದಾಳಿ ನಡೆಸಿದರು.

“ಮುಖ್ಯಮಂತ್ರಿ ಕೆಸಿಆರ್ ಅವರು ಬಿಜೆಪಿ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತಾರೆ, ಆದರೆ ನಾವು ರಾಜವಂಶ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತೇವೆ. ನಾವು ಇನ್ನೂ ಹೈದರಾಬಾದ್‌ನಲ್ಲಿ ಅವರ ಮಗ ಮತ್ತು ಮಗಳ ಚಿತ್ರಗಳನ್ನು ನೋಡುತ್ತೇವೆ. ದೇಶದ ರಾಜಕೀಯವು ರಾಜವಂಶದ ರಾಜಕೀಯದಿಂದ ಮುಕ್ತವಾಗಿರಬೇಕು . ಸರ್ಕಾರವು ದೇಶಕ್ಕಾಗಿ, ಜನರಿಗಾಗಿ ಇರಬೇಕು, ಆದರೆ ಎಂದಿಗೂ ಒಂದು ಕುಟುಂಬಕ್ಕಾಗಿ ಇರಬಾರದು ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಕೆಸಿಆರ್‌ನ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಂದಿನ ವರ್ಷ ನಡೆಯಲಿರುವ ರಾಜ್ಯ ಚುನಾವಣೆಗಳು ಮತ್ತು 2024 ರಲ್ಲಿ ರಾಷ್ಟ್ರೀಯ ಚುನಾವಣೆಗೆ ಮುನ್ನ ಇತ್ತೀಚಿನ ತಿಂಗಳುಗಳಲ್ಲಿ ಪರಸ್ಪರ ದಾಳಿಗಳನ್ನು ನಡೆಯುತ್ತಿದೆ. ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ಮತ್ತು ಸಾರ್ವತ್ರಿಕ ಚುನಾವಣೆಗೆ ಐಕ್ಯರಂಗವನ್ನು ರೂಪಿಸಲು ಕೆಸಿಆರ್ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕುಟುಕು ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com