ಅಸ್ಸಾಂ: ವೀಸಾ ನಿಯಮ ಉಲ್ಲಂಘನೆ ಹಿನ್ನಲೆ 17 ಬಾಂಗ್ಲಾದೇಶಿಗರ ಬಂಧನ!

ಪ್ರವಾಸಿ ವೀಸಾ ನಿಯಮಾವಳಿಗಳನ್ನು ಉಲ್ಲಂಘಿಸಿ ಧಾರ್ಮಿಕ ಬೋಧನೆ ನಡೆಸಿದ ಆರೋಪದ ಮೇಲೆ 17 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಅಸ್ಸಾಂನ ಬಿಸ್ವನಾಥ್ ಚರಿಯಾಲಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಅಸ್ಸಾಂ ಪೊಲೀಸರು
ಅಸ್ಸಾಂ ಪೊಲೀಸರು

ಗುವಾಹಟಿ(ಅಸ್ಸಾಂ): ಪ್ರವಾಸಿ ವೀಸಾ ನಿಯಮಾವಳಿಗಳನ್ನು ಉಲ್ಲಂಘಿಸಿ ಧಾರ್ಮಿಕ ಬೋಧನೆ ನಡೆಸಿದ ಆರೋಪದ ಮೇಲೆ 17 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಅಸ್ಸಾಂನ ಬಿಸ್ವನಾಥ್ ಚರಿಯಾಲಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಬಿಸ್ವನಾಥ್ ಜಿಲ್ಲೆಯ ಗಿಂಗಿಯಾ ಪ್ರದೇಶದ ದೂರದ ಬಾಗ್ಮರಿ ಪ್ರದೇಶದಲ್ಲಿ ಅವರನ್ನು ಬಂಧಿಸಲಾಗಿದೆ. ಅವರು ಅಸ್ಸಾಂಗೆ ಬರುವ ಮೊದಲು ರಾಜಸ್ಥಾನದ ಅಜ್ಮೀರ್ ಷರೀಫ್ ಮತ್ತು ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಸ್ಥಳಗಳಿಗೆ ಭೇಟಿ ನೀಡಿದ್ದರು.

ಸೈಯದ್ ಅಶ್ರಫುಲ್ ಆಲಂ ನೇತೃತ್ವ ವಹಿಸಿದ್ದಾರೆ. ಪ್ರವಾಸಿ ವೀಸಾದಲ್ಲಿ ಅನುಮತಿಸದ ಧಾರ್ಮಿಕ ಉಪದೇಶದ ವಿರುದ್ಧ ಕಳೆದ ತಿಂಗಳು ಸಹ ಅವರಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗ್ಮರಿ ಪ್ರದೇಶದಲ್ಲಿ ಯಾವುದೇ ಪ್ರವಾಸಿ ಆಕರ್ಷಣೆ ಇಲ್ಲ. ಅದಕ್ಕಾಗಿಯೇ ಈ ವಿದೇಶಿಗರು ಏಕೆ ಇಲ್ಲಿಗೆ ಬಂದರು ಎಂದು ತಿಳಿಯಲು ನಾವು ಹುಡುಕಿದೆವು. ಅವರು ಒಂದು ನಿರ್ದಿಷ್ಟ ಪಂಗಡದ ಸದಸ್ಯರು. ಅವರ ಧಾರ್ಮಿಕ ಉಪದೇಶಕ್ಕಾಗಿ ಅವರೊಂದಿಗೆ ಬಂದವರ ವಿವರಗಳನ್ನು ಸಹ ನಾವು ಪರಿಶೀಲಿಸಿದ್ದೇವೆ. ಅವರು ವಿವಿಧ ದಿನಾಂಕಗಳಲ್ಲಿ ಬ್ಯಾಚ್‌ಗಳಲ್ಲಿ ಅಸ್ಸಾಂಗೆ ಪ್ರವೇಶಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com