ಉಮೇಶ್ ಪಾಲ್ ಹತ್ಯೆ ಆರೋಪಿಗಳಿಗೆ ಆಶ್ರಯ ನೀಡಿದ್ದ ಮಾಫಿಯಾ ಡಾನ್ ಅತೀಕ್ ಸೋದರ ಮಾವನ ಬಂಧನ!

ಪ್ರಯಾಗರಾಜ್‌ನಲ್ಲಿ ಉಮೇಶ್ ಪಾಲ್‌ನನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದು ಮೀರತ್ ಗೆ ಬಂದಿದ್ದ ಕುಖ್ಯಾತ ಮಾಫಿಯಾ ಡಾನ್ ಅತೀಕ್‌ ಅಹ್ಮದ್ ಮಗ ಅಸದ್, ಶೂಟರ್ ಮುಸ್ಲಿಂ ಗುಡ್ಡು ಮತ್ತು ಸಬೀರ್ ಗೆ ರಕ್ಷಣೆ ನೀಡಿದ ಹಿನ್ನೆಲೆಯಲ್ಲಿ ಎಸ್‌ಟಿಎಫ್ ಕಳೆದ ರಾತ್ರಿ ಅತೀಕ್ ಅವರ ಸೋದರ ಮಾವ ಡಾ.ಅಖ್ಲಾಕ್ ರನ್ನು ಬಂಧಿಸಿದೆ.
ಅತೀಕ್ ಅಹ್ಮದ್
ಅತೀಕ್ ಅಹ್ಮದ್

ಲಖನೌ: ಪ್ರಯಾಗರಾಜ್‌ನಲ್ಲಿ ಉಮೇಶ್ ಪಾಲ್‌ನನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದು ಮೀರತ್ ಗೆ ಬಂದಿದ್ದ ಕುಖ್ಯಾತ ಮಾಫಿಯಾ ಡಾನ್ ಅತೀಕ್‌ ಅಹ್ಮದ್ ಮಗ ಅಸದ್, ಶೂಟರ್ ಮುಸ್ಲಿಂ ಗುಡ್ಡು ಮತ್ತು ಸಬೀರ್ ಗೆ ರಕ್ಷಣೆ ನೀಡಿದ ಹಿನ್ನೆಲೆಯಲ್ಲಿ ಎಸ್‌ಟಿಎಫ್ ಕಳೆದ ರಾತ್ರಿ ಅತೀಕ್ ಅವರ ಸೋದರ ಮಾವ ಡಾ.ಅಖ್ಲಾಕ್ ರನ್ನು ಬಂಧಿಸಿದೆ.

ಆರೋಪಿ ಡಾ. ಅಖ್ಲಾಕ್ ಶೂಟರ್‌ಗಳಿಗೆ ಆಶ್ರಯ ನೀಡಿದ್ದಲ್ಲದೆ, ಅವರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಉಮೇಶ್ ಪಾಲ್‌ನನ್ನು ಹತ್ಯೆ ಸಂಚು ರೂಪಿಸಿದ್ದರು ಎಂದು ಎಸ್‌ಟಿಎಫ್ ಹೇಳಿಕೊಂಡಿದೆ. ಪೊಲೀಸರು ಆರೋಪಿ ಡಾ.ಅಖ್ಲಾಕ್‌ನನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಪ್ರಯಾಗ್‌ರಾಜ್‌ಗೆ ತೆರಳಿದರು. ಉಮೇಶ್ ಪಾಲ್ ಹತ್ಯೆಯಲ್ಲಿ, ಶೂಟರ್‌ಗಳಾದ ಅಸದ್, ಮುಸ್ಲಿಂ ಗುಡ್ಡು, ಅರ್ಮಾನ್ ಗುಲಾಮ್ ಮತ್ತು ಸಬೀರ್ ತಲೆಮರೆಸಿಕೊಂಡಿದ್ದಾರೆ. ಅತೀಕ್‌ನ ಸಹೋದರಿ ಮತ್ತು ಸೋದರ ಮಾವ ಮೀರತ್‌ನ ಭವಾನಿ ನಗರದಲ್ಲಿ ವಾಸಿಸುತ್ತಿದ್ದಾರೆ ಎಂದು ಎಸ್‌ಟಿಎಫ್ ತನಿಖೆಯಿಂದ ತಿಳಿದುಬಂದಿದೆ.

ಉಮೇಶ್ ಪಾಲ್ ಹತ್ಯೆ ಬಳಿಕ ಡಾ.ಅಖ್ಲಾಕ್ ಮನೆಗೆ ಇಬ್ಬರು ಶೂಟರ್ ಗಳು ಬಂದಿದ್ದರು ಎಂಬುದೂ ತನಿಖೆಯಲ್ಲಿ ಬಯಲಾಗಿದೆ. ಮೊದಲು ಶೂಟರ್‌ಗಳು ಅಖ್ಲಾಕ್‌ನ ಮನೆಯಲ್ಲಿ ತಂಗುತ್ತಿದ್ದರು. ಕೂಲಂಕಷ ತನಿಖೆಯ ನಂತರ ಎಸ್‌ಟಿಎಫ್ ತಡರಾತ್ರಿ ಡಾ. ಅಖ್ಲಾಕ್‌ನನ್ನು ಬಂಧಿಸಿ ಠಾಣೆಗೆ ಕರೆತಂದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಎಂದು ಎಸ್‌ಪಿ ಎಸ್‌ಟಿಎಫ್ ಬ್ರಿಜೇಶ್ ಸಿಂಗ್ ಹೇಳುತ್ತಾರೆ. ಹಲವು ಮಹತ್ವದ ಮಾಹಿತಿ ಪಡೆದ ನಂತರ ಎಸ್‌ಟಿಎಫ್ ತಂಡ ವೈದ್ಯರನ್ನು ಕರೆದುಕೊಂಡು ಪ್ರಯಾಗ್‌ರಾಜ್‌ಗೆ ತೆರಳಿದೆ ಎಂದರು.

ಅದೇ ಸಮಯದಲ್ಲಿ, ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಶ್ರಫ್‌ನನ್ನು ಬರೇಲಿ ಜೈಲಿನಿಂದ ಪ್ರಯಾಗ್‌ರಾಜ್‌ಗೆ ಕರೆತರಲು ದಾರಿ ಸುಗಮವಾಗಿದೆ. ಮ್ಯಾಜಿಸ್ಟ್ರೇಟ್ ದಿನೇಶ್ ಚಂದ್ರ ಗೌತಮ್ ಅವರು ಬಿ-ವಾರೆಂಟ್ ಹೊರಡಿಸುವ ಸಂದರ್ಭದಲ್ಲಿ ಅಶ್ರಫ್ ನನ್ನು ಅವರ ಅನುಕೂಲಕ್ಕೆ ತಕ್ಕಂತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ಅನುಮತಿ ನೀಡಿದ್ದಾರೆ. ಅಂದರೆ, ನ್ಯಾಯಾಲಯ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಪೊಲೀಸರು ಆತನನ್ನು ಯಾವಾಗ ಬೇಕಾದರೂ ಹಾಜರುಪಡಿಸಬಹುದು. ಆದರೆ, ಹೈಕೋರ್ಟ್‌ನ ಆದೇಶವನ್ನು ಪಾಲಿಸಿ ಅಶ್ರಫ್‌ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಆದೇಶವನ್ನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com